ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೋತ ಮುಂಬೈ ಇಂಡಿಯನ್ಸ್ – 1 ರನ್‌ಗೆ ಕೆ.ಎಲ್ ರಾಹುಲ್ ಔಟ್..!

ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೋತ ಮುಂಬೈ ಇಂಡಿಯನ್ಸ್ – 1 ರನ್‌ಗೆ ಕೆ.ಎಲ್ ರಾಹುಲ್ ಔಟ್..!

ಡೆಲ್ಲಿ ಕ್ಯಾಪಿಟಲ್ಸ್ ತನ್ನ ತವರಿನಲ್ಲಿ ಗೆದ್ದು ಬೀಗಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್  ತಂಡವನ್ನು ಸೋಲಿಸಿದೆ.

ಇದನ್ನೂ ಓದಿ:ಮುಂಬೈ ನಾಯಕ ಸೂರ್ಯ ಅರ್ಧಶತಕ , ಆರೆಂಜ್ ಕ್ಯಾಪ್ ಧರಿಸಿದ ರೋಹಿತ್ ಶರ್ಮಾ – ಡೆಲ್ಲಿಗೆ 163 ರನ್ ಟಾರ್ಗೆಟ್

ಮುಂಬೈ ಇಂಡಿಯನ್ಸ್ ತಂಡ ಮೊದಲ ಪಂದ್ಯ ಗೆದ್ದ ಉತ್ಸಾಹದಲ್ಲಿಯೇ ಕಣಕ್ಕಿಳಿದಿತ್ತು. ಆದರೆ, ಡೆಲ್ಲಿ ತಂಡದ ವಿರುದ್ಧ ಮೊದಲ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ಡೆಲ್ಲಿ ವೇಗಿ ಮುಖೇಶ್ ಕುಮಾರ್ ಒಂದೇ ಓವರ್‌ನಲ್ಲಿ ರಯಾನ್ ರಿಕಲ್ಟನ್ ಮತ್ತು ತಿಲಕ್ ವರ್ಮಾ ಅವರನ್ನು ಔಟ್ ಮಾಡುವ ಮೂಲಕ ಮುಂಬೈಗೆ ಆಘಾತ ನೀಡಿದರು. ಹಿಟ್‌ಮ್ಯಾನ್ ರೋಹಿತ್ ಶರ್ಮಾ 26 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರು. ನಾಯಕ ಸೂರ್ಯಕುಮಾರ್ ಅರ್ಧಶತಕ ಸಿಡಿಸಿ ತಂಡದ ಸ್ಕೋರ್ ಗಟ್ಟಿಗೊಳಿಸಿದರು. ಮುಂಬೈ ತಂಡ 162 ರನ್‌ಗಳ ಸ್ಕೋರ್ ದಾಖಲಿಸಿತು.

163 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡದ ಆರಂಭವೂ ಕೂಡಾ ಚೆನ್ನಾಗಿರಲಿಲ್ಲ. ಕೆಎಲ್ ರಾಹುಲ್ ಕೇವಲ ಒಂದು ರನ್‌ಗೆ ಔಟಾದರು. ನಿತೀಶ್ ರಾಣಾ ಕೂಡ ರನೌಟ್ ಆದರು. ನಂತರ ಪಾಥುಮ್ ನಿಸ್ಸಂಕಾ 44 ರನ್‌ ಬಾರಿಸುವ ಮೂಲಕ ತಂಡವನ್ನು ಒತ್ತಡದಿಂದ ಪಾರು ಮಾಡಿದರು. ಡೆಲ್ಲಿ ಪರ ಸಮೀರ್ ರಿಜ್ವಿ ಗೆಲುವಿನ ರೂವಾರಿಯಾದರು. ಸಮೀರ್ ರಿಜ್ವಿ ಭರ್ಜರಿ ಅರ್ಧಶತಕ ಸಿಡಿಸಿದರು. ಇನ್ನೇನು ಶತಕ ಸಿಡಿಸುತ್ತಾರೆ ಎಂದು ಡೆಲ್ಲಿ ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿರುವಾಗಲೇ ರಿಜ್ವಿ ಔಟಾದರು. ಸಮೀರ್ ರಿಜ್ವಿ 51 ಎಸೆತಗಳಲ್ಲಿ 90 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಕೊನೆಗೂ ದೆಹಲಿ 18.1 ಓವರ್‌ಗಳಲ್ಲಿ ಗುರಿ ತಲುಪುವಲ್ಲಿ ಯಶಸ್ವಿಯಾಯಿತು.

Sulekha