ಮುಂಬೈನಲ್ಲಿ ರೋಹಿತ್ ಗೆ ಪದೇಪದೆ ಅವಮಾನ – ಫೀಲ್ಡಿಂಗ್ ವೇಳೆ ಬೆಂಚ್ ಕಾಯಿಸಿದ ಫ್ರಾಂಚೈಸಿ

ಭಾನುವಾರ ಚೆಪಾಕ್ನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್‌ಗಳ ಜಯ ಸಾಧಿಸಿದೆ. ಟಾಸ್ ಗೆದ್ದ ಸಿಎಸ್‌ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಓಪನರ್ ಆಗಿ ಕಣಕ್ಕಿಳಿದಿದ್ರು. ಬಟ್ ಬ್ಯಾಡ್ಲಕ್ ರೋಹಿತ್ ಬ್ಯಾಟ್ ಸದ್ದು ಮಾಡೋ ಮುನ್ನವೇ ಪೆವಿಲಿಯನ್ ಸೇರಿದ್ರು.
ಇದನ್ನೂ ಓದಿ : ಮುಂಬೈ ಮಣಿಸಿ ಶುಭಾರಂಭ ಮಾಡಿದ ಸಿಎಸ್‌ಕೆ – MI ವಿರುದ್ಧ ಚೆನ್ನೈಗೆ 4 ವಿಕೆಟ್‌ಗಳ ಜಯ
ಮುಂಬೈ ಇಂಡಿಯನ್ಸ್ ಪರ ರಿಯಾನ್ ರಿಕಲ್ಟನ್ ಜೊತೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾಗೆ ಲಕ್ ಕೈಕೊಟ್ಟಿತ್ತು. ನಾಲ್ಕು ಬಾಲ್ಗಳನ್ನ ಫೇಸ್ ಮಾಡಿ ಡಕ್ ಔಟ್ ಆದ್ರು. ಸೊನ್ನೆಗೆ ವಿಕೆಟ್ ಒಪ್ಪಿಸೋ ಮೂಲಕ ಐಪಿಎಲ್‌ನಲ್ಲಿ ಕೆಟ್ಟ ದಾಖಲೆಯನ್ನೂ ಬರೆದ್ರು. ಟೂರ್ನಿಯ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಸೊನ್ನೆಗೆ ಔಟಾದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಇದು ಐಪಿಎಲ್‌ನಲ್ಲಿ ರೋಹಿತ್ ಅವರ 18ನೇ ಸೊನ್ನೆ. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಭಾರತದ ದಿನೇಶ್ ಕಾರ್ತಿಕ್ ಕೂಡಾ ತಲಾ 18 ಬಾರಿ ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ಇವ್ರಿಬ್ಬರ ಜೊತೆ ರೋಹಿತ್ ಕೂಡ ಟಾಪ್ ಪ್ಲೇಸ್ ಸೇರಿದ್ದಾರೆ.
ಇದೇ ನೋಡಿ ಆಗಿದ್ದು. ರೋಹಿತ್ ಶರ್ಮಾ ಬ್ಯಾಟಿಂಗ್ನಲ್ಲಿ ಸೊನ್ನೆ ಸುತ್ತಿದ್ದಕ್ಕೆ ಅಟ್ಲೀಸ್ಟ್ ಫೀಲ್ಡಿಂಗ್ ನಲ್ಲಾದ್ರೂ ಅವ್ರನ್ನ ನೋಡೋಣ ಅಂತಾ ಫ್ಯಾನ್ಸ್ ಕಾಯ್ತಾ ಇದ್ರು. ಬಟ್ ರೋಹಿತ್ ಫೀಲ್ಡಿಂಗ್ಗೆ ಇಳಿಲೇಇಲ್ಲ. ಅವ್ರನ್ನ ಬೆಂಚ್ ಕಾಯಿಸಲಾಯ್ತು. ಅವರ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ವಿಘ್ನೇಶ್ ಪುತ್ತೂರು ಅವರನ್ನು ಕಣಕ್ಕಿಳಿಸಲಾಗಿತ್ತು. ಮೊದ್ಲೇ ಹಾರ್ದಿಕ್ ಪಾಂಡ್ಯ ಟೀಮ್ನಲ್ಲಿ ಇರಲಿಲ್ಲ. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಇತ್ತ ಅನುಭವಿ ಆಟಗಾರ ರೋಹಿತ್ ಶರ್ಮಾ ಅವರನ್ನು ಈ ಪಂದ್ಯದ ಫೀಲ್ಡಿಂಗ್ ವೇಳೆ ಬೆಂಚ್ ಕಾಯಿಸಿರುವುದೇ ಈಗ ಚರ್ಚೆಗೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ 5 ಟ್ರೋಫಿ ಗೆದ್ದುಕೊಟ್ಟಿರುವ ನಾಯಕನನ್ನು ಮೈದಾನದಿಂದ ಹೊರಗಿಟ್ಟಿರುವುದೇ ಹಾಟ್ ಟಾಪಿಕ್ ಆಗಿದೆ.
ರೋಹಿತ್ ಶರ್ಮಾ ಹೇಳಿ ಕೇಳಿ ಯಶಸ್ವೀ ನಾಯಕ. ಅದು ಟೀಂ ಇಂಡಿಯಾದಲ್ಲಾದ್ರೂ ಅಷ್ಟೇ. ಐಪಿಎಲ್ನಲ್ಲಾದ್ರೂ ಅಷ್ಟೇ. ಐಪಿಎಲ್ಗೆ ಇದೇ ಎಂಐ ತಂಡಕ್ಕೆ 5 ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಭಾರತಕ್ಕೆ ಬ್ಯಾಕ್ ಟು ಬ್ಯಾಕ್ 2 ಐಸಿಸಿ ಟೂರ್ನಿಗಳಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇತ್ತೀಚೆಗಷ್ಟೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿರುವ ರೋಹಿತ್ ಶರ್ಮಾ ಅವರ ನಾಯಕತ್ವ ತಂತ್ರಗಾರಿಕೆ ಎಲ್ಲರಿಗೂ ಗೊತ್ತಿರುವಂಥದ್ದೇ. ಹೀಗಾಗಿ ಹಿಟ್ಮ್ಯಾನ್ ಮೈದಾನದಲ್ಲಿ ಇದ್ದಿದ್ದರೆ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಒಂದಷ್ಟು ಟಿಪ್ಸ್ ಕೊಡ್ತಾ ಇದ್ರು. ಅವ್ರು ಆಡದೇ ಇದ್ರೂ ಅವ್ರ ಅನುಭವ ಮುಂಬೈಗೆ ಪ್ಲಸ್ ಆಗ್ತಿತ್ತು. ಪಾಂಡ್ಯ ಆಬ್ಸೆನ್ಸ್ನಲ್ಲೂ ರೋಹಿತ್ರನ್ನ ಫೀಲ್ಡಿಂಗ್ ವೇಳೆ ಹೊರಗಿಟ್ಟು ಮುಂಬೈ ಎಡವಟ್ಟು ಮಾಡ್ಕೊಂಡಿದೆ.
ಅಷ್ಟಕ್ಕೂ ಮುಂಬೈ ಟೀಮ್ನಲ್ಲಿ ರೋಹಿತ್ ಶರ್ಮಾರನ್ನ ಈ ರೀತಿ ನಡೆಸಿಕೊಳ್ತಿರೋದು ಹೊಸತೇನು ಅಲ್ಲ ಬಿಡಿ. ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಿಟ್ಮ್ಯಾನ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿತ್ತು. ಅಲ್ಲದೆ ಅವರ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ಖುದ್ದು ಹಿಟ್ಮ್ಯಾನ್ ತಮ್ಮ ಅಸಮಾಧಾನ ಹೊರಹಾಕಿದ್ದರು. ಹೀಗಾಗಿ 2025ರ ಐಪಿಎಲ್ಗೆ ರೋಹಿತ್ ಶರ್ಮಾ ಮುಂಬೈ ತಂಡ ಬಿಡ್ತಾರೆ ಅಂತಾನೇ ಎಲ್ರೂ ಅನ್ಕೊಂಡಿದ್ರು. ಬಟ್ ರೋಹಿತ್ ಅದೇ ಟೀಮ್ನಲ್ಲೇ ಕಂಟಿನ್ಯೂ ಆಗ್ತಿದ್ದಾರೆ. ಟೀಂ ಇಂಡಿಯಾದಲ್ಲಿ ನಾಯಕನಾಗಿ ಐಪಿಎಲ್‌ನಲ್ಲಿ ಜಸ್ಟ್ ಪ್ಲೇಯರ್ ಆಗಿ ಆಡ್ತಿದ್ರೂ ಮುಂಬೈ ಫ್ರಾಂಚೈಸಿ ಅವ್ರನ್ನ ಸರಿಯಾಗಿ ನಡೆಸಿಕೊಳ್ತಿಲ್ಲ. ಈಗ ಸೀಸನ್ನ ಮೊದಲ ಪಂದ್ಯದಲ್ಲೇ ಬೆಂಚ್ ಕಾಯಿಸಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ನನ್ನು ಕಣಕ್ಕಿಳಿಸಲು ತಿಲಕ್ ವರ್ಮಾ, ನಮನ್ ಧೀರ್ನಂತಹ ಆಟಗಾರರು ತಂಡದಲ್ಲಿದ್ದರೂ ರೋಹಿತ್ ಶರ್ಮಾ ಡಗೌಟ್ನಲ್ಲಿ ಕೂರಬೇಕಾಗಿ ಬಂದಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ರೋಹಿತ್ ಶರ್ಮಾ ವಿಶ್ವ ಕ್ರಿಕೆಟ್ನ ಸಕ್ಸಸ್ಫುಲ್ ಸ್ಕಿಪ್ಪರ್ & ಪ್ಲೇಯರ್. ಐಪಿಎಲ್ನಲ್ಲೂ ಸಾಕಷ್ಟು ದಾಖಲೆಗಳನ್ನ ಬರೆದಿದ್ದಾರೆ. ರೋಹಿತ್ ಶರ್ಮಾ ಅವರು 2 ತಂಡಗಳ ಪರ 258 ಪಂದ್ಯಗಳನ್ನಾಡಿದ್ದಾರೆ. 253 ಇನ್ನಿಂಗ್ಸ್ ಗಳಲ್ಲಿ 29.58 ಸರಾಸರಿಯಲ್ಲಿ 6,628 ರನ್ ಗಳಿಸಿದ್ದಾರೆ. ಅದರಲ್ಲಿ 2 ಶತಕ 43 ಅರ್ಧಶತಕಗಳಿವೆ. ಅಷ್ಟೇ ಅಲ್ದೇ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದವರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರು ಮೂರನೇ ಸ್ಥಾನದಲ್ಲಿದ್ದಾರೆ. 8063 ರನ್ ಕಲೆಹಾಕಿರುವ ವಿರಾಟ್ ಕೊಹ್ಲಿ ಒಂದನೇ ಸ್ಥಾನದಲ್ಲಿದ್ರೆ ಮತ್ತು 6769 ರನ್ ಗಳಿಸಿರುವ ಶಿಖರ್ ಧವನ್ 2ನೇ ಸ್ಥಾನದಲ್ಲಿ ಇದ್ದಾರೆ. ಅಲ್ದೇ ಇದೇ ರೋಹಿತ್ ಶರ್ಮಾ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದೆ. 5 ಟ್ರೋಫಿಗಳನ್ನ ಗೆದ್ದು ಬೀಗಿದ್ದಾರೆ. ಆದರೆ ಕಳೆದ ವರ್ಷ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಅಚ್ಚರಿಯ ರೀತಿಯಲ್ಲಿ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರನ್ನು ಕರೆತಂದು ನಾಯಕ ಪಟ್ಟ ಕಟ್ಟಿತ್ತು. ಇದೀಗ ಬೆಂಚ್ನಲ್ಲಿ ಕೂರಿಸಿದ್ದಾರೆ.