ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿ – ಮೊದಲ ಗೆಲುವಿಗಾಗಿ ಪಾಂಡ್ಯ, ಗಿಲ್ ಕಾದಾಟ

ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ಪರಸ್ಪರ ಮುಖಾಮುಖಿಯಾಗಲಿವೆ. ಅಹಮದಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಉಭಯ ತಂಡಗಳು ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದು, ಮೊದಲ ಗೆಲುವಿಗಾಗಿ ಕಾಯುತ್ತಿವೆ.
ಇದನ್ನೂ ಓದಿ:ಚೆನ್ನೈ ವಿರುದ್ಧ ಆರ್‌ಸಿಬಿಗೆ ರೋಚಕ ಜಯ – ಐಪಿಎಲ್‌ನಲ್ಲಿ ಹೊಸ ಆರ್‌ಸಿಬಿ ಇತಿಹಾಸ
ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಕ್ಯಾಪ್ಟನ್ ಆಗಿ ತಂಡದ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಮೊದಲ ಪಂದ್ಯದಲ್ಲಿ ಮುಂಬೈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನೆಡಸಿದ್ದರು.
ತವರಿನ ಮೈದಾನದಲ್ಲಿ ಆಡಲು ಗುಜರಾತ್ ಉತ್ಸಾಹದಲ್ಲಿದೆ. ಪಂಜಾಬ್ ವಿರುದ್ಧ ಮಾಡಿದ ತಪ್ಪುಗಳಿಂದ ಜಿಟಿ ಪಾಠ ಕಲಿತು ಪುಟಿದೇಳುವ ಅನಿವಾರ್ಯತೆ ಇದೆ. ಅಲ್ಲದೇ ಮುಂಬೈ ವಿರುದ್ಧ ಶುಭಮನ್ ಗಿಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಗಿಲ್ ಮುಂಬೈ ವಿರುದ್ಧ ಇಲ್ಲಿಯವರೆಗೆ 12 ಪಂದ್ಯಗಳಲ್ಲಿ 440 ರನ್ ಬಾರಿಸಿದ್ದಾರೆ. ಗಿಲ್ ಮುಂಬೈ ವಿರುದ್ಧ ಒಂದು ಶತಕ ಮತ್ತು ಮೂರು ಅರ್ಧಶತಕ ಸಿಡಿಸಿದ್ದಾರೆ. ಇದೇ ಉತ್ಸಾಹದಲ್ಲಿ ಇವತ್ತು ಜಿಟಿ ಕ್ಯಾಪ್ಟನ್ ಗಿಲ್ ಬ್ಯಾಟಿಂಗ್‌ನಲ್ಲಿ ಸೌಂಡ್ ಮಾಡ್ತಾರಾ ಅಂತಾ ಫ್ಯಾನ್ಸ್ ಕೂಡಾ ಕಾಯ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯ ಸೋತಿರುವ ಮುಂಬೈ ಇಂಡಿಯನ್ಸ್ ಇದೀಗ ಜಸ್‌ಪ್ರೀತ್ ಬುಮ್ರಾ ಅವರನ್ನು ತುಂಬಾ ಮಿಸ್ ಮಾಡಿಕೊಳ್ತಿದೆ. ಇದ್ರ ನಡುವೆಯೇ ಎರಡನೇ ಪಂದ್ಯಕ್ಕೂ ಬುಮ್ರಾ ಕಣಕ್ಕಳಿಯುವುದಿಲ್ಲ. ಆದ್ರೆ, ಬುಮ್ರಾ ಫಿಟ್ನೆಸ್ ಬಗ್ಗೆ ಬಿಗ್ ಅಪ್ಡೇಟ್ ಬಂದಿದೆ. ಮುಂಬೈ ಕೋಚ್ ಮಹೇಲ ಜಯವರ್ಧನೆ ಬುಮ್ರಾ ಫಿಟ್ನೆಸ್ ಬಗ್ಗೆ ಸಿಹಿ ಸುದ್ದಿ ನೀಡಿದ್ದು, ಎಪ್ರಿಲ್ ನಲ್ಲಿ ನಡೆಯೋ ಪಂದ್ಯಗಳಿಗೆ ಬುಮ್ರಾ ಟೀಮ್ ಸೇರಿಕೊಳ್ಳಲಿದ್ದಾರೆ.