ಮಡಕೆಯೊಂದಿಗೆ ಮದುವೆಯಾಗಲು ಹೇಳಿದ ಪೋಷಕರು! – ಯುವತಿ ಮಾಡಿದ್ದೇನು ಗೊತ್ತಾ?

ಮಡಕೆಯೊಂದಿಗೆ ಮದುವೆಯಾಗಲು ಹೇಳಿದ ಪೋಷಕರು! – ಯುವತಿ ಮಾಡಿದ್ದೇನು ಗೊತ್ತಾ?

ಮದುವೆ ಎಂಬುವುದು ಪ್ರತಿಯೊಬ್ಬರ ಜೀವನದಲ್ಲಿ ಒಮ್ಮೆ ನಡೆಯುವ ಅವಿಸ್ಮರಣೀಯ ಕ್ಷಣ. ಈ ಮದುರ ಕ್ಷಣವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಹೊಸ ಹೊಸ ಪ್ಲಾನ್‌ ಗಳನ್ನು ಮಾಡುತ್ತಾರೆ. ಮದುವೆಗೆ ಕೆಲವು ದಿನಗಳಿವೆ ಎನ್ನುವಾಗಲೇ ಶಾಸ್ತ್ರಗಳು ಪ್ರಾರಂಭವಾಗುತ್ತದೆ. ಪೂಜೆ, ಶಾಸ್ತ್ರ, ಪದ್ದತಿ ಅಂತಾ ಹಿರಿಯರು ವಧು, ವರನ ಸುತ್ತ ಸುತ್ತಿಕೊಳ್ಳುತ್ತಾರೆ. ಅವರು ಹೇಳಿದ ಶಾಸ್ತ್ರಗಳನ್ನು ಚಾಚು ತಪ್ಪದೇ ಪಾಲಿಸುವಂತೆ ಹೇಳುತ್ತಾಳೆ. ಇವುಗಳನ್ನು ಪಾಲಿಸಿ ವಧು, ವರರು ಸುಸ್ತಾಗಿ ಹೋಗುತ್ತಾರೆ. ಇದೀಗ ಇಲ್ಲೊಬ್ಬಳು ಪಾಲಕರು ಹೇಳುತ್ತಿರುವ ಶಾಸ್ತ್ರಗಳನ್ನು ಪಾಲಿಸಲು ಕಷ್ಟವಾಗುತ್ತಿದೆ ಅಂತಾ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ಅಷ್ಟಕ್ಕೂ ಆಗಿದ್ದೇನು?

ಯುವತಿಯೊಬ್ಬಳಿಗೆ ಮದುವೆ ನಿಶ್ಚಯವಾಗಿದೆ. ಸಂಬಂಧಿಕರು ಮದುವೆ ಮನೆಗೆ ಆಗಮಿಸಿ ಶಾಸ್ತ್ರ, ಸಂಪ್ರದಾಯ ಅಂತಾ ಆಕೆಯ ಹಿಂದೆ ಬಿದ್ದಿದ್ದಾರೆ. ಆಕೆಗೆ ಇದೆಲ್ಲಾ ಇಷ್ಟವಿಲ್ಲದಿದ್ದರೂ ಹಿರಿಯರು ಹೇಳಿದಂತೆ ಆಕೆ ಎಲ್ಲವನ್ನೂ ಪಾಲಿಸುತ್ತಾ ಬಂದಿದ್ದಾಳೆ. ಇದೀಗ ಆಕೆ ಬಳಿ ಗಂಡನ ಆಯಸ್ಸಿಗಾಗಿ ಮಡಕೆಯೊಂದಿಗೆ ಮದುವೆಯಾಗುವಂತೆ ಪೋಷಕರು ಒತ್ತಡ ಹೇರುತ್ತಿದ್ದಾರಂತೆ. ಈಗ ಆಕೆ ಇದರಿಂದ ಬೇಸತ್ತು ತನ್ನ ಅಳಲನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾಳೆ.

ಇದನ್ನೂ ಓದಿ: ಏಕೈಕ ಹೆಣ್ಣು ಮಗುವಿನ ಪೋಷಕರಿಗೆ ಬಂಪರ್‌ – ಸರ್ಕಾರದಿಂದ ಸಿಗುತ್ತೆ ಲಕ್ಷಾಂತರ ರೂಪಾಯಿ ಪ್ರೋತ್ಸಾಹ ಧನ!

ಯುವತಿ ಸೋಶಿಯಲ್​​ ಮೀಡಿಯಾದಲ್ಲಿ ಹೇಳಿದ್ದೇನು?

ನನಗೆ ಮದುವೆ ನಿಶ್ಚಯವಾಗಿದೆ. ಮದುವೆಗೆ ಮೊದಲು ಮಣ್ಣಿನ ಮಡಿಕೆ ಜತೆ ಮದುವೆ ಆಗುವಂತೆ ಪಾಲಕರು ಒತ್ತಾಯ ಮಾಡ್ತಿದ್ದಾರೆ. ಮಡಿಕೆ ಜತೆ ಮೊದಲ ಮದುವೆ ನಡೆದ್ರೆ, ಮದುವೆಯಾಗುವ ಪತಿ ಆಯಸ್ಸು ಹೆಚ್ಚಾಗುತ್ತದೆ. ದಾಂಪತ್ಯದಲ್ಲಿ ಯಾವುದೇ ಬಿರುಕು ಕಾಣಿಸಿಕೊಳ್ಳುವುದಿಲ್ಲವೆಂದು  ಹೇಳ್ತಿದ್ದಾರೆ. ನಾನು ನಾಸ್ತಿಕಳಾಗಿದ್ದು, ಮಣ್ಣಿನ ಮಡಿಕೆ ಜತೆ ಮದುವೆಯಾಗಲು ನನಗೆ ಇಷ್ಟವಿಲ್ಲ. ನನ್ನ ಮನಸ್ಸಿಗೆ ವಿರುದ್ದವಾಗಿ ನಾನು ಈ ಕೆಲಸ ಮಾಡೋದಿಲ್ಲ. ಆದ್ರೆ ಮನೆಯಲ್ಲಿ ತಂದೆ – ತಾಯಿ ಇಡೀ ದಿನ ಇದೇ ವಿಷ್ಯವನ್ನು ಚರ್ಚಿಸುತ್ತಿದ್ದಾರೆ. ನನಗೆ ಒತ್ತಡ ಹೇರ್ತಿದ್ದಾರೆ. ಇದ್ರಿಂದ ಮಾನಸಿಕ ಕಿರಿಕಿರಿ ಆಗುತ್ತಿದೆ. ತಾಯಿ ಬಿ.ಕಾಮ್ ಪದವೀಧರೆ. ತಂದೆ ಇಂಜಿನಿಯರ್ ಮುಗಿಸಿದ್ದಾರೆ. ಆದ್ರೂ ಹಳೆ ಪದ್ಧತಿಯನ್ನು ಪಾಲಿಸುವಂತೆ ನನಗೆ ಹೇಳ್ತಿದ್ದಾರೆ. ನಾನೇನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಯುವತಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ಈ ಪೋಸ್ಟ್​​ ಸೋಶಿಯಲ್​​  ಮೀಡಿಯಾದಲ್ಲಿ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು  ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಮಣ್ಣಿನ ಮಡಿಕೆಗೆ ಈ ಸ್ಥಿತಿ ಬರಬಾರದಿತ್ತು ಕಾಮೆಂಟ್​​ ಮಾಡುತ್ತಿದ್ದಾರೆ.

ಮಡಿಕೆ ಮದುವೆ ಏಕೆ ಮಾಡಲಾಗುತ್ತದೆ?

ಜಾತಕದಲ್ಲಿ ಕೆಲ ದೋಷವಿದ್ದಾಗ ಈ ಮಣ್ಣಿನ ಮಡಿಕೆಗೆ ವಿವಾಹ ನಡೆಯುತ್ತದೆ. ಮಂಗಳ ಗ್ರಹ ಸೌಮ್ಯ ಅಥವಾ ಪೂರ್ಣ ಪ್ರಭಾವದ ಅಡಿಯಲ್ಲಿ ಜನಿಸಿದ ಪುರುಷರು ಮತ್ತು ಮಹಿಳೆಯರನ್ನು ಮಾಂಗ್ಲಿಕ್ ಅಥವಾ ಮಂಗಳ ಶಾಪಗ್ರಸ್ತ  ಎಂದು ಕರೆಯುತ್ತಾರೆ.

ಇವರ ಮದುವೆ ಮುರಿದು ಬೀಳುವ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ಮೊದಲು ಅವರಿಗೆ ಮಡಿಕೆ ಜೊತೆ ಮದುವೆ ಮಾಡಿಸಲಾಗುತ್ತದೆ. ಕೆಲವೊಮ್ಮೆ ಮರ ಅಥವಾ ಯಾವುದಾದ್ರೂ ಪ್ರಾಣಿ ಜತೆ ಮದುವೆ ಮಾಡುವ ಪದ್ಧತಿಯೂ ಜಾರಿಯಲ್ಲಿದೆ. ಹೀಗೆ ಮಾಡಿದ್ರೆ ಮದುವೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂಬುದು ಜನರ ನಂಬಿಕೆ.

Shwetha M