ಕುಡಿದ ಮತ್ತಿನಲ್ಲಿ ಟ್ರೈನ್‌ನನ್ನೇ ತಡೆದು ನಿಲ್ಲಿಸಿದ ಭೂಪ! – ಆಮೇಲೆ ಏನಾಯ್ತು ಗೊತ್ತಾ?

ಕುಡಿದ ಮತ್ತಿನಲ್ಲಿ ಟ್ರೈನ್‌ನನ್ನೇ ತಡೆದು ನಿಲ್ಲಿಸಿದ ಭೂಪ! – ಆಮೇಲೆ ಏನಾಯ್ತು ಗೊತ್ತಾ?

ಎಣ್ಣೆ ಏಟಲ್ಲಿದ್ದವರಿಗೆ ಪ್ರಪಂಚದ ಪರಿಜ್ಞಾನವೇ ಇರಲ್ಲ.. ತಮ್ಮನ್ನ ತಾವೇ ಹೀರೋ.. ಸೂಪರ್‌ ಮ್ಯಾನ್‌ ಅಂತಾ ಅಂದ್ಕೊಂಡಿರ್ತಾರೆ.. ಇಲ್ಲೊಬ್ಬ ಖತರ್ನಾಕ್‌ ಕುಡಿದ ಮತ್ತಲ್ಲಿ ರೈಲನ್ನೇ ನಿಲ್ಲಿಸಿದ್ದಾನೆ.. ಇದ್ರ ಫೋಟೋ, ವಿಡಿಯೋ ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ; ಕನ್ನಡ ಪರ ಸಂಘಟನೆಗಳಿಂದ ಕರ್ನಾಟಕ ಬಂದ್ – ಬಿಕೋ ಎನ್ನುತ್ತಿದೆ ಬಸ್‌ ನಿಲ್ದಾಣಗಳು!

ಈ ಘಟನೆ ಮುಂಬೈನ ಮಾಹಿಮ್‌ನಲ್ಲಿ ನಡೆದಿದೆ.  ಎಣ್ಣೆ ಏಟಲ್ಲಿ ಕುಡುಕನೊಬ್ಬ ಇಲ್ಲಿನ ಲೋಕಲ್‌ ಟ್ರೈನ್‌ನನ್ನೇ ತಡೆದು ನಿಲ್ಲಿಸಿದ್ದಾನೆ. ರೈಲಿನ ಕಂಪಾರ್ಟ್‌ಮೆಂಟ್‌ ಮೇಲೆ ಹಾರಿ ಮಂಗನಾಟ ಆಡಿದ್ದು ಮಾತ್ರವಲ್ಲದೆ ಹಳಿಯ ಮೇಲೆ ಕುಳಿತು ಅದು ಹೆಂಗ್‌ ಹೋಗ್ತೀರಾ ನಾನು ನೋಡ್ತೀನಿ ಎನ್ನುತ್ತಾ ರೈಲು ಮುಂದೆ ಚಲಿಸದಂತೆ ತಡೆದು ನಿಲ್ಲಿಸಿದ್ದಾನೆ. ಕುಡುಕನ ಈ ಅವಾಂತರದಿಂದ ಮಾಹಿಮ್‌ ರೈಲು ನಿಲ್ದಾಣದಲ್ಲಿ ರೈಲು ಸೇವೆಗಳಲ್ಲಿ ವಿಳಂಬವಾಯಿತಲ್ಲದೆ, ಇದರಿಂದ ಪ್ರಯಾಣಿಕರು ಕೂಡಾ ತೊಂದರೆಯನ್ನು ಅನುಭವಿಸಿದ್ದಾರೆ.

ಈ ಕುರಿತ ವಿಡಿಯೋವನ್ನು chal_mumbai ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮುಂಬೈನ ಮಾಹಿಮ್‌ ರೈಲ್ವೆ ಸ್ಟೇಷನ್‌ನಲ್ಲಿ ಕುಡುಕನೊಬ್ಬ ರೈಲನ್ನು ತಡೆದು ನಿಲ್ಲಿಸಿ ಅವಾಂತರ ಸೃಷ್ಟಿಸಿದ ದೃಶ್ಯವನ್ನು ಕಾಣಬಹುದು.

Shwetha M