ಬಲಗೈ ಬದಲು ಬಾಲಕನ ಎಡಗೈ ಆಪರೇಷನ್‌! – ಅಯ್ಯೋ.. ವೈದ್ಯರ ಎಡವಟ್ಟಿಗೆ ಬೆರಳೇ ಕಟ್!‌

ಬಲಗೈ ಬದಲು ಬಾಲಕನ ಎಡಗೈ ಆಪರೇಷನ್‌! – ಅಯ್ಯೋ.. ವೈದ್ಯರ ಎಡವಟ್ಟಿಗೆ ಬೆರಳೇ ಕಟ್!‌

ವೈದ್ಯರು ಎಂದರೆ ಜೀವ ಉಳಿಸುವ ದೇವರಿದ್ದಂತೆ ಎಂಬ ಮಾತಿದೆ. ಅದ್ರೆ ಇತ್ತೀಚಿನ ದಿನಗಳಲ್ಲಿ ವೈದ್ಯರು, ಆಸ್ಪತ್ರೆಗಳು ಅಂದರೆ ಬೆಚ್ಚಿಬೀಳುವ ಕಾಲವಿದು. ಕೆಲ ವೈದ್ಯರು ಮಾಡುವ ಎಡವಟ್ಟಿನಿಂದಾಗಿ ಜನರು ತೊಂದರೆಗೆ ಸಿಲುಕುತ್ತಾರೆ. ಇದೀಗ ಇಲ್ಲೊಂದು ಕಡೆ ಬಾಲಕನ ಕೈ ಸರ್ಜರಿ ಮಾಡುವ ಬದಲು ಆತನ ಬೆರಳನ್ನೇ ಕಟ್‌ ಮಾಡಿದ್ದಾರೆ.

ಇದನ್ನೂ ಓದಿ: ಕುವೈತ್ ವಿದ್ಯುತ್ ಸ್ಥಾವರದ ಮೇಲೆ ಇರಾನ್ ದಾಳಿ – ಭಾರತೀಯ ಕಾರ್ಮಿಕ ಸಾ*ವು

ಈ ಘಟನೆ ಮಹಾರಾಷ್ಟ್ರದ ಪಂಢರಪುರದಲ್ಲಿ ನಡೆದಿದೆ. ವೈದ್ಯರು ಸಮಸ್ಯೆ ಇರುವ ಬಲಗೈಗೆ ಬಿಟ್ಟು ವೈದ್ಯರು ಬಾಲಕನ ಎಡಗೈಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಲ್ಲದೆ, ಬೆರಳನ್ನು ಕೂಡ ಕತ್ತರಿಸಿದ್ದಾರೆ.

ಏನಿದು ಘಟನೆ?

ಬಾಲಕನೊಬ್ಬ ಪೋಸ್ಟಾಕ್ಸಿಯಲ್ ಪಾಲಿಡಾಕ್ಟಿಲಿ ಎಂಬ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿತ್ತು, ಎರಡೂ ಕೈಗಳಲ್ಲಿ ಹೆಚ್ಚುವರಿ ಕಿರುಬೆರಳುಗಳಿದ್ದವು. ಬಲಗೈಯ ಒಂದು ಬೆರಳಿನಲ್ಲಿ ಬಿಗಿತ, ನೋವು ಇದ್ದ ಕಾರಣ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಬೇಕೆಂದು ಸಲಹೆ ನಿಡಿದ್ದರು. ಹೀಗಾಗಿ ಆತನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದ್ರೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡೋ ಮುನ್ನ ರೋಗಿಯ ಸಮಸ್ಯೆಯ ಬಗ್ಗೆ ಇದ್ದ ಫೈಲ್ನ ನೋಡದೇ ಆಪರೇಷನ್ ಮಾಡಿದ್ದಾರೆ. ಬಾಲಕನ ಬಲಗೈಗೆ ಶಸ್ತ್ರ ಚಿಕಿತ್ಸೆ  ಮಾಡುವ ಬದಲು ಎಡಗೈಗೆ ಶಸ್ತ್ರ ಚಿಕಿತ್ಸೆ ನಡೆಸಿ, ಬೆರಳು ಕಟ್‌ ಮಾಡಿದ್ದಾರೆ. ಇದೀಗ ಬಾಲಕನ ಪೋಷಕರು ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ. ಆದ್ರೆ ಆಸ್ಪತ್ರೆ ಅಧಿಕಾರಿಗಳು ಮಗುವಿನ ಎರಡೂ ಕೈಯಲ್ಲೂ ದೋಷವಿತ್ತು ಎಂದು ಹೇಳಿಕೊಂಡಿದ್ದಾರೆ.

ಆದರೆ ಬಾಲಕನ ಕುಟುಂಬ ಆತನ ಎಡಗೈಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಬಲಗೈಯಲ್ಲಿ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡುವ NOCಗೆ ಸ್ಪಷ್ಟವಾಗಿ ಸಹಿ ಹಾಕಿದ್ದೇವೆ. ಆದ್ರೂ ವೈದ್ಯರು ಎಡಗೈಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಇದೀಗ ಆರೋಗ್ಯ ಇಲಾಖೆ ಪ್ರಕರಣ ಸಂಬಂಧ ತನಿಖೆ ನಡೆಸಲು ಇಬ್ಬರು ಸದಸ್ಯರ ಸಮಿತಿಯನ್ನು ರಚಿಸಿದೆ.

Shwetha M