ಮುಂಬೈ ನಾಯಕ ಸೂರ್ಯ ಅರ್ಧಶತಕ , ಆರೆಂಜ್ ಕ್ಯಾಪ್ ಧರಿಸಿದ ರೋಹಿತ್ ಶರ್ಮಾ – ಡೆಲ್ಲಿಗೆ 163 ರನ್ ಟಾರ್ಗೆಟ್

ಮುಂಬೈ ನಾಯಕ ಸೂರ್ಯ ಅರ್ಧಶತಕ , ಆರೆಂಜ್ ಕ್ಯಾಪ್ ಧರಿಸಿದ ರೋಹಿತ್ ಶರ್ಮಾ – ಡೆಲ್ಲಿಗೆ 163 ರನ್ ಟಾರ್ಗೆಟ್

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಡೆಲ್ಲಿ ತಂಡಕ್ಕೆ 163 ರನ್‌ಗಳ ಗುರಿ ನೀಡಿದೆ. ನಾಯಕ ಸೂರ್ಯಕುಮಾರ್ ಯಾದವ್ ಅರ್ಧಶತಕ ಸಿಡಿಸುವ ಮೂಲಕ ಬೊಂಬಾಟ್ ಬ್ಯಾಟಿಂಗ್ ಮಾಡಿದ್ದಾರೆ.

ಇದನ್ನೂ ಓದಿ:ಸ್ಯಾಂಡಲ್​​ವುಡ್​​ನಲ್ಲಿ ಸೈಡ್ ರೋಲ್ ಮಾಡುತ್ತೇನೆ ಎಂದ ಕೊಹ್ಲಿ!

ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿದ್ದು, 163 ರನ್‌ಗಳನ್ನು ಸೇರಿಸಿದೆ. ಮೊದಲ ಬ್ಯಾಟ್ಸಮನ್ ಆಗಿ ಕಣಕ್ಕಿಳಿದ ರೋಹಿತ್ ಶರ್ಮಾ ಈ ಪಂದ್ಯದಲ್ಲೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. 35 ರನ್ ಗಳಿಸಿದ ರೋಹಿತ್ ಶರ್ಮಾ ಅವರಿಗೆ ಆರೆಂಜ್ ಕ್ಯಾಪ್ ಸಿಕ್ಕಿರುವುದು ವಿಶೇಷವಾಗಿತ್ತು. ಇನ್ನುಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಗೆ ಮೂರನೇ ಓವರ್‌ನ ಮೂರನೇ ಎಸೆತದಲ್ಲಿ ಮೊದಲ ಹೊಡೆತ ಬಿದ್ದಿತು. ರಿಕಲ್ಟನ್ ಅವರನ್ನು ಮುಖೇಶ್ ಕುಮಾರ್ ಔಟ್ ಮಾಡಿದರು. ಮುಂಬೈ ಇಂಡಿಯನ್ಸ್ ತಂಡದ ಎರಡನೇ ವಿಕೆಟ್ ಪತನವಾಯಿತು, ತಿಲಕ್ ವರ್ಮಾ ಎರಡನೇ ಎಸೆತದಲ್ಲೇ ಔಟಾದರು. ಅವರಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಮುಖೇಶ್ ಕುಮಾರ್ ತಮ್ಮದೇ ಆದ ಬೌಲಿಂಗ್‌ನಲ್ಲಿ ಕ್ಯಾಚ್ ಹಿಡಿದರು.

10ನೇ ಓವರ್‌ನ ಮೂರನೇ ಎಸೆತದಲ್ಲಿ ಮುಂಬೈ ತಂಡದ ಮೂರನೇ ವಿಕೆಟ್ ಪತನವಾಯಿತು. ಈ ಬಾರಿ ರೋಹಿತ್ ಶರ್ಮಾ ಔಟಾದರು. ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ನಿತೀಶ್ ರಾಣಾ ಅವರಿಗೆ ಕ್ಯಾಚ್ ನೀಡಿ 35 ರನ್ ಗಳಿಸಿ ಔಟಾದರು. ಮತ್ತೊಂದು ಕಡೆ ಸೂರ್ಯಕುಮಾರ್ ಯಾದವ್ 35 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.  2 ಸಿಕ್ಸರ್ ಮತ್ತು 3 ಬೌಂಡರಿಗಳ ಸಹಾಯದಿಂದ ಐವತ್ತು ರನ್ ಗಳಿಸಿದರು. ಅಂತೂ ಮುಂಬೈ ಇಂಡಿಯನ್ಸ್ , ಡೆಲ್ಲಿ ತಂಡಕ್ಕೆ163 ರನ್‌ಗಳ ಗುರಿ ನೀಡಿದೆ.

 

Sulekha