ಮುಕುಲ್ ಪಂಚ್ ಗೆ ನೆಲ ಕಚ್ಚಿದ KKR – ಸೋಲಿನ ಸುಳಿ ದಾಟಿ ಗೆದ್ದ LSG
ರಹಾನೆ ಕ್ಯಾಪ್ಟನ್ಸಿಗೇ ಕುತ್ತು ಬಂತಾ?

ಮುಕುಲ್ ಪಂಚ್ ಗೆ ನೆಲ ಕಚ್ಚಿದ KKR – ಸೋಲಿನ ಸುಳಿ ದಾಟಿ ಗೆದ್ದ LSGರಹಾನೆ ಕ್ಯಾಪ್ಟನ್ಸಿಗೇ ಕುತ್ತು ಬಂತಾ?

ಮೊನ್ನೆ ಮ್ಯಾಚ್ ಕೂಡ ಲಾಸ್ಟ್ ಓವರ್ ಥ್ರಿಲ್ಲರ್.. ನಿನ್ನೆ ಮ್ಯಾಚ್ ಕೂಡ ಸೇಮ್ ಟು ಸೇಮ್. ಬಟ್ ಆಪರ್ಚುನಿಟಿ ಇದ್ರೂ ಡೆಲ್ಲಿ ಟೀಂ ಗೆಲ್ಲಲಿಲ್ಲ ಆದ್ರೆ ಚಾನ್ಸೇ ಇಲ್ಲ ಅನ್ಕೊಳ್ತಿದ್ದ ಹೊತ್ತಲ್ಲಿ ಸೋಲಿನ ಸುಳಿಯಿಂದ ಎದ್ದು ಲಕ್ನೋ ಗೆದ್ದು ಬೀಗಿದೆ.

ಇದನ್ನೂ ಓದಿ  : ಕೊಹ್ಲಿ Vs ಸಂದೀಪ್ IPL ಜಿದ್ದಾಜಿದ್ದಿ – KING ಆಟಕ್ಕೆ ಮತ್ತೆ ವಿಲನ್ ಆಗ್ತಾರಾ?

ಕ್ರಿಕೆಟ್​ನಲ್ಲಿ ಲಾಸ್ಟ್​ ಬಾಲ್​ವರೆಗೂ ಯಾರ್ ಗೆಲ್ತಾರೆ ಅನ್ನೋದನ್ನ ಪ್ರೆಡಿಕ್ಟ್ ಮಾಡೋಕಾಗಲ್ಲ ಅನ್ನೋದು ಇದೇ ಕಾರಣಕ್ಕೆ. ಕೊಲ್ಕತ್ತಾ ಮತ್ತು ಲಕ್ನೋ ನಡುವಿನ ಮ್ಯಾಚಲ್ಲಿ ಕಂಪ್ಲೀಟ್ ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಥರನೇ ಇತ್ತು. ಕೆಕೆಆರ್ ಟೀಂ ಗೆಲ್ಲೋ ಚಾನ್ಸ್ 97 ಪರ್ಸೆಂಟ್ ಇದ್ರೆ ಲಕ್ನೋಗೆ ಇದ್ದದ್ದೇ 3 ಪರ್ಸೆಂಟ್. ಆದ್ರೆ ಆದ್​ರೆ 3 ಪರ್ಸೆಂಟ್ ಚಾನ್ಸ್​ನಲ್ಲೇ ಗೆದ್ದು ಬೀಗಿದ್ರು.

ನಾಲ್ಕನೇ ಮ್ಯಾಚ್ ನಲ್ಲೂ ಸೋತ ಕೆಕೆಆರ್!

ಕೊಲ್ಕತ್ತಾಡ ಈಡನ್ ಗಾರ್ಡನ್ಸ್​ನಲ್ಲಿ ಪಸ್ಟ್ ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಿತು.  ಈ ಟಾರ್ಗೆಟ್ ಬೆನ್ನತ್ತಿದ ಲಕ್ನೋ ತಂಡ 128 ರನ್‌ಗಳಿಸುವಷ್ಟ್ರಲ್ಲೇ 7 ವಿಕೆಟ್ ಕಳ್ಕೊಂಡಿತ್ತು. ಆಲ್ಮೋಸ್ಟ್ ಲಕ್ನೋ ಸೋಲು ಪಕ್ಕಾ ಎನ್ನುವಂತೆಯೇ ಇತ್ತು. ಆದ್ರೆ ಕಡೆಯ ಐದು ಓವರ್​ಗಳಲ್ಲಿ ಲಕ್ನೋ ಪಾಲಿಗೆ ಆಪ್ತಬಾಂಧವನಾದ ಮುಕುಲ್ ಚೌಧರಿ ಅಕ್ಷರಶಃ ಹೀರೋ ಆಗಿದ್ರು. ಕೊನೆಯ ಎರಡು ಓವರ್​ಗಳಲ್ಲೇ ಮ್ಯಾಜಿಕ್ ನಡೆದಿತ್ತು. ಲಕ್ನೋ ತಂಡಕ್ಕೆ 12 ಎಸೆತಗಳಲ್ಲಿ 30 ರನ್‌ಗಳು ಬೇಕಾಗಿದ್ದವು. 19ನೇ ಓವರ್​ನಲ್ಲಿ ಮುಕುಲ್ ಚೌಧರಿ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸಿ ಕೊನೆಯ ಓವರ್​ನಲ್ಲಿ 14 ರನ್ ಬೇಕಾಗುವಂತೆ ಮಾಡಿದ್ರು. ವೈಭವ್ ಅರೋರಾ ಕೆಕೆಆರ್ ಪರ ಲಾಸ್ಟ್ ಓವರ್ ಬೌಲಿಂಗ್ ಮಾಡಿದ್ರು. ಆವೇಶ್ ಖಾನ್ ಸಿಂಗಲ್ ಓಡಿ ಮುಕುಲ್​ಗೆ ಸ್ಟ್ರೈಕ್ ಬಿಟ್ಟುಕೊಟ್ರು. ಆಮೇಲೆ ನಡೆದಿದ್ದೆಲ್ಲಾ ಮ್ಯಾಜಿಕ್. 2 ಸಿಕ್ಸರ್ ಬಾರಿಸಿದ ಮುಕುಲ್ ಪಂದ್ಯವನ್ನ ಟೈಗೆ ತಂದಿಟ್ರು. ಕೊನೇ ಬಾಲ್​ನಲ್ಲಿ ಸಿಂಗಲ್ ಓಡಿ ಒಂದು ರನ್​ನಿಂದ ಪಂದ್ಯ ಗೆದ್ರು. ಅತ್ತ ಕೆಕೆಆರ್ ವಿಕೆಟ್ ಕೀಪರ್  ರಘುವಂಶಿ ರನ್ ಔಟ್ ಮಾಡೋ ಅವಕಾಶ ಇದ್ರೂ ಸ್ಟಂಪ್ಸ್​ಗೆ ಸರಿಯಾಗಿ ಬಾಲ್ ಹೊಡೆಯದೇ ಸಿಂಗಲ್ ತಗೊಳ್ಳೋ ಥರ ಮಾಡಿ ಸೋಲೊಪ್ಪಿಕೊಂಡ್ರು. ಈ ಮೂಲಕ ಕೆಕೆಆರ್ ಸತತ ನಾಲ್ಕನೇ ಮ್ಯಾಚಲ್ಲೂ ಸೋತಿದೆ. ಪಂಜಾಬ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿ ಒಂದು ಪಾಯಿಂಟ್ಸ್ ಸಿಕ್ಕಿತ್ತು.

ಅಜಿಂಕ್ಯ ರಹಾನೆ ನಾಯಕತ್ವಕ್ಕೂ ಕುತ್ತು ಬಂತಾ?

ಐಪಿಎಲ್ ನಲ್ಲಿ ಮೂರು ಸಲ ಚಾಂಪಿಯನ್ ಆಗಿರೋ ಕೆಕೆಆರ್ 2024ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಆದ್ರೆ ವಿನ್ನಿಂಗ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ನ ಬಿಟ್ಟುಕೊಟ್ಟಿದ್ದ ಟೀಂ ಅಜಿಂಕ್ಯ ರಹಾನೆಗೆ ನಾಯಕತ್ವ ಕಟ್ಟಿತ್ತು. ಆದ್ರೆ ಲಾಸ್ಟ್ ಸೀಸನ್ ಅನ್ಕೊಂಡಂಗೆ ಆಗಿರಲಿಲ್ಲ. ಈ ಸೀಸನ್​ನಲ್ಲಿ ಇನ್ನೂ ಒಂದೂ ಮ್ಯಾಚ್ ಗೆದ್ದಿಲ್ಲ. ಮಳೆ ಬಂದಿಲ್ಲ ಅಂದ್ರೆ ಪಂಜಾಬ್ ವಿರುದ್ಧ ಸೋಲ್ತಿದ್ರು ಅನ್ಸುತ್ತೆ. ಯಾಕಂದ್ರೆ ಆ ಮ್ಯಾಚಲ್ಲೂ ಆಲ್ರೆಡಿ 2 ವಿಕೆಟ್ ಕಳ್ಕೊಂಡು ಸಂಕಷ್ಟದಲ್ಲಿದ್ದಾಗ ಮಳೆ ಬಂದು ಪಂದ್ಯ ರದ್ದಾಗಿತ್ತು. ಹೀಗಾಗಿ ಕೆಕೆಆರ್ ಹೊಸ ಕ್ಯಾಪ್ಟನ್ ಹುಡುಕಾಟದಲ್ಲಿದೆ ಎನ್ನುವಂಥ ಚರ್ಚೆಯಾಗ್ತಿದೆ. ಕೆಕೆಆರ್​ಗೆ ಸೋಲಿನ ಆಘಾತ ನೀಡಿದ ರಾಜಸ್ಥಾನದ 21 ವರ್ಷದ ಯುವ ಆಟಗಾರ ಮುಕುಲ್ ಚೌಧರಿಗೆ ಲಕ್ನೋ 2.60 ಕೋಟಿಗೆ ಖರೀದಿ ಮಾಡಿತ್ತು. ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಆಗಿರೋದ್ರ ಜೊತೆಗೆ  ವೇಗದ ಬೌಲರ್ ಆಗಿದ್ದಾರೆ. ಸೋ ಮುಂದಿನ ಪಂದ್ಯಗಳಲ್ಲಿ ಇವ್ರ ಮೇಲೆ ಎಲ್ಲರ ಕಣ್ಣಿರುತ್ತೆ.

Shantha Kumari