ದೀರ್ಘಕಾಲದ ಉದ್ಯೋಗಿಗೆ ದುಬಾರಿ ಉಡುಗೊರೆ – 1500 ಕೋಟಿ ಮೌಲ್ಯದ ಆಸ್ತಿ ನೀಡಿದ ಮುಖೇಶ್ ಅಂಬಾನಿ..!

ದೀರ್ಘಕಾಲದ ಉದ್ಯೋಗಿಗೆ ದುಬಾರಿ ಉಡುಗೊರೆ – 1500 ಕೋಟಿ ಮೌಲ್ಯದ ಆಸ್ತಿ ನೀಡಿದ ಮುಖೇಶ್ ಅಂಬಾನಿ..!

ಶ್ರೀಮಂತರಾಗುವುದು ದೊಡ್ಡ ವಿಷಯವಲ್ಲ. ಮನಸು ಕೂಡಾ ಅಷ್ಟೇ ಶ್ರೀಮಂತವಾಗಿರಬೇಕು. ಇದಕ್ಕೆ ಈಗ ಉದಾಹರಣೆಯಾಗಿ ನಿಂತಿದ್ದಾರೆ ಭಾರತದ ಶ್ರೀಮಂತ ವ್ಯಕ್ತಿ ಮತ್ತು ರಿಲೈನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ. ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ವಿಶಾಲ ಹೃದಯದವರು ಎಂದು ಈಗ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಅಂಬಾನಿಯವರ ಬಲಗೈ ಎಂದು ಕರೆಯಲ್ಪಡುವ ಅವರ ದೀರ್ಘಕಾಲದ ಉದ್ಯೋಗಿ ಮನೋಜ್ ಮೋದಿಗೆ ನೀಡಿರುವ ಉಡುಗೊರೆಯೇ ಇದಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ:  ಕ್ರಿಕೆಟ್ ದೇವರು ಸಚಿನ್ ಗಿಂದು 50ನೇ ಜನ್ಮದಿನ – ಮಾಸ್ಟರ್ ಬ್ಲಾಸ್ಟರ್ ಬರೆದ ದಾಖಲೆಗಳೆಷ್ಟು ಗೊತ್ತಾ?

ಮುಖೇಶ್ ಅಂಬಾನಿ ತಮ್ಮ ಜೊತೆಗಿರುವ ದೀರ್ಘಕಾಲದ ಉದ್ಯೋಗಿ ಮನೋಜ್ ಮೋದಿಗೆ ದುಬಾರಿ ಉಡುಗೊರೆ ನೀಡಿದ್ದಾರೆ. ಅಂಬಾನಿ ಅವರಿಗೆ ಮುಂಬೈನ ನೇಪಿಯನ್ ಸೀ ರೋಡ್‌ನಲ್ಲಿರುವ ಐಷಾರಾಮಿ ಪ್ರದೇಶದಲ್ಲಿ 1500 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ನೀಡಿದ್ದಾರೆ. ‘ವೃಂದಾವನ’ ಹೆಸರಿನ ಈ 22 ಅಂತಸ್ತಿನ ಕಟ್ಟಡವು 1.7 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.

ದೇಶದ ಅತ್ಯಮೂಲ್ಯ ಅಂಬಾನಿ ಸಂಸ್ಥೆಯಲ್ಲಿನ ಎಲ್ಲಾ ಬಹು-ಶತಕೋಟಿ ಡಾಲರ್ ವ್ಯವಹಾರಗಳ ಯಶಸ್ಸಿನ ಹಿಂದಿನ ವ್ಯಕ್ತಿ ಮೋದಿ ಎಂದು ಹೇಳಲಾಗಿದೆ. ಬಹುಮಾನವಾಗಿ, ಅಂಬಾನಿ ಮೋದಿಗೆ ಮುಂಬೈನ ಪ್ರೀಮಿಯಂ ಪ್ರದೇಶವಾದ ನೇಪಿಯನ್ ಸೀ ರೋಡ್ನಲ್ಲಿರುವ 22 ಅಂತಸ್ತಿನ ಕಟ್ಟಡವನ್ನು ಉಡುಗೊರೆಯಾಗಿ ನೀಡಿದ್ದಾರೆ. ರಿಲಯನ್ಸ್ ಜಿಯೋ ಮತ್ತು ರಿಟೇಲ್‌ನ ನಿರ್ದೇಶಕ ಮನೋಜ್ ಮೋದಿ ರಿಲಯನ್ಸ್ ಇಂಡಸ್ಟ್ರೀಸ್ ನ ದೀರ್ಘಾವಧಿಯ ಉದ್ಯೋಗಿಯಾಗಿದ್ದರು.

suddiyaana