ಶಿವಕಾರ್ತಿಕೇಯನ್ ಫ್ಯಾನ್ಸ್‌ಗೆ ದೀಪಾವಳಿ ಧಮಾಕಾ – ‘ಅಯಲಾನ್’ ರಿಲೀಸ್‌ಗೆ ಮುಹೂರ್ತ ಫಿಕ್ಸ್

ಶಿವಕಾರ್ತಿಕೇಯನ್ ಫ್ಯಾನ್ಸ್‌ಗೆ ದೀಪಾವಳಿ ಧಮಾಕಾ – ‘ಅಯಲಾನ್’ ರಿಲೀಸ್‌ಗೆ ಮುಹೂರ್ತ ಫಿಕ್ಸ್

ತಮಿಳು ಚಿತ್ರರಂಗದ ಖ್ಯಾತ ನಟ ಶಿವಕಾರ್ತಿಕೇಯನ್ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಮಾಸ್ ಆಗಿ ತಮಿಳು ಸಿನಿಪ್ರಿಯರನ್ನು ರಂಜಿಸುತ್ತಿರುವ ಶಿವಕಾರ್ತಿಕೇಯನ್ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ‘ಅಯಲಾನ್’ ಬಿಡುಗಡೆಗೆ ಸಜ್ಜಾಗಿದೆ. ಆರ್.ರವಿಕುಮಾರ್ ಕಥೆ ಬರೆದು ನಿರ್ದೇಶಿಸುತ್ತಿರುವ ಅಯಲಾನ್ ಸಿನಿಮಾ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ.

ಇದನ್ನೂ ಓದಿ:  ಅಲ್ಲು ಅರ್ಜುನ್ ಬಹುನಿರೀಕ್ಷಿತ ಸಿನಿಮಾಕ್ಕೆ ಶಾಕ್ – ‘ಪುಷ್ಪಾ-2’ ಶೂಟಿಂಗ್ ಬಂದ್ ?

ಅಭಿಮಾನಿಗಳ ಫೆವೇರಟ್ ನಟ ಶಿವಕಾರ್ತಿಕೇಯನ್‌ ಹೊಸ ಸಿನಿಮಾ‘ಅಯಲಾನ್’ ರಿಲೀಸ್ ಯಾವಾಗ ಆಗುತ್ತೆ ಅಂತಾ ಅಭಿಮಾನಿಗಳು ಕೂಡಾ ಕುತೂಹಲದಿಂದ ಕಾಯುತ್ತಿದ್ದರು. ಶಿವಕಾರ್ತಿಕೇಯನ್ ಅಭಿಮಾನಿಗಳಿಗೆ ದೀಪಾವಳಿ ಧಮಾಕಾ ಸಿಗಲಿದೆ. ದೀಪಾವಳಿ ಹಬ್ಬದಂದೇ ಅಯಲಾನ್ ಸಿನಿಮಾ ರಿಲೀಸ್ ಆಗಲಿದೆ. 24ಎಎಂ ಸ್ಟುಡಿಯೋಸ್ ನಡಿ ಆರ್. ಡಿ. ರಾಜ ಅದ್ಧೂರಿಯಾಗಿ ನಿರ್ಮಿಸಿರುವ ಫ್ಯಾಂಟಸಿ ಎಂಟರ್ ಟೈನರ್ ಅಲಯಾನ್ ಸಿನಿಮಾವನ್ನು ಕೆಜೆಆರ್ ಸ್ಟುಡಿಯೋನ ಕೋಟಪಾಡಿ ಜೆ ರಾಜೇಶ್ ವರ್ಲ್ಡ್ ವೈಡ್ ಬಿಡುಗಡೆ ಮಾಡಲಿದೆ. ಹೇಳಿಕೇಳಿ ಅಲಯಾನ್ ಫ್ಯಾಂಟಿಸಿ ಎಂಟಟ್ರೈನರ್ ಸಿನಿಮಾ. ಹೀಗಾಗಿ ಗುಣಮಟ್ಟದಲ್ಲಿ ಯಾವುದೇ ರೀತಿ ರಾಜಿಯಾಗದೇ ಅದ್ಭುತ ಸಿಜಿ ವರ್ಕ್ ಸಿನಿಮಾದಲ್ಲಿರಲಿದೆ. ಭಾರತೀಯ ಚಿತ್ರರಂಗದಲ್ಲಿ 4500+ VFX ಶಾಟ್ಗಳನ್ನು ಹೊಂದಿರುವ ಮೊದಲ ಪೂರ್ಣ-ಉದ್ದದ ಲೈವ್-ಆಕ್ಷನ್ ಸಿನಿಮಾ ಎಂಬ ಹೆಗ್ಗಳಿಕೆಗೂ ಅಲಯಾನ್ ಪಾತ್ರವಾಗಿದೆ. ಅದ್ಭುತ ಸಿಜಿ ಕೆಲಸ ಹಿಂದಿನ ಕೃರ್ತ ಫ್ಯಾಂಟಮ್ FX ಸಂಸ್ಥೆ. ಹಾಲಿವುಡ್ ಹಲವು ಚಿತ್ರಗಳಿಗೆ ಸಿಜಿ ವರ್ಕ್ ಮಾಡಿರುವ ಈ ಕಂಪನಿ ಈಗ ಅಲಯಾನ್ ಚಿತ್ರಕ್ಕೂ ಕೈ ಜೋಡಿಸಿದೆ. ಇನ್ನೂ ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ ಗೆ ಜೋಡಿಯಾಗಿ ಕನ್ನಡದ ಗಿಲ್ಲಿ ಸಿನಿಮಾ ಬ್ಯೂಟಿ ರಕುಲ್ ಪ್ರೀತ್ ಸಿಂಗ್   ನಟಿಸಿದ್ದು, ಕರುಣಾಕರನ್, ಯೋಗಿ ಬಾಬು, ಶರದ್ ಕೇಳ್ಕರ್, ಇಶಾ ಕೊಪ್ಪಿಕರ್, ಬಾನುಪ್ರಿಯಾ, ಬಾಲಸರವಣನ್ ಸೇರಿದಂತೆ ಹಲವರು ತಾರಾಬಳಗ ಚಿತ್ರದ ಭಾಗವಾಗಿದ್ದಾರೆ. ಆಸ್ಕರ್ ವಿಜೇತ ಮ್ಯೂಸಿಕ್ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಅಲಯಾನ್ ಚಿತ್ರಕ್ಕಿದೆ..

suddiyaana