ಚೆಂಡನ್ನು ಮುಟ್ಟಿ ಔಟಾದ ಮುಫ್ತಿಕರ್ ರಹೀಮ್ – MCC ರೂಲ್ಸ್ ಬಲೆಯೊಳಗೆ ಬಿದ್ದ ಬಾಂಗ್ಲಾ ಟೀಮ್..!

ಚೆಂಡನ್ನು ಮುಟ್ಟಿ ಔಟಾದ ಮುಫ್ತಿಕರ್ ರಹೀಮ್ – MCC ರೂಲ್ಸ್ ಬಲೆಯೊಳಗೆ ಬಿದ್ದ ಬಾಂಗ್ಲಾ ಟೀಮ್..!

2023ರ ನವೆಂಬರ್​ 6ರಂದು ಶ್ರೀಲಂಕಾ VS ಬಾಂಗ್ಲಾದೇಶ ನಡುವಿನ ವರ್ಲ್ಡ್​ಕಪ್ ಮ್ಯಾಚ್ ವೇಳೆ ನಡೆದ ಹೈಡ್ರಾಮಾ ಅನೇಕರು ನೋಡಿದ್ದಾರೆ. ಬ್ಯಾಟಿಂಗ್​​ಗೆ ಇನ್ನೂ ರೆಡಿಯಾಗಿಲ್ಲ ಅನ್ನೋ ಕಾರಣಕ್ಕೆ ಶ್ರೀಲಂಕಾದ ಬ್ಯಾಟ್ಸ್​ಮನ್​​ ಆ್ಯಂಜಲೋ ಮ್ಯಾಥ್ಯೂಸ್ ಟೈಮ್ಡ್ ಔಟ್ ಆಗಿದ್ದರು. ಹೆಲ್ಮೆಟ್ ಕಿತ್ತು ಹೋಗಿರುವುದರಿಂದ ಮ್ಯಾಥ್ಯೂಸ್​ಗೆ ಬಾಲ್ ಫೇಸ್​​ ಮಾಡೋಕೆ ಸಾಧ್ಯವಾಗಿರಲಿಲ್ಲ. ಬಾಂಗ್ಲಾ ಕ್ಯಾಪ್ಟನ್ ಶಕೀಬುಲ್ ಹಸನ್​ ಅಂತೂ ಯಾವುದೇ ಸಿಂಪಥಿ ತೋರಿಸದೆ ಟೈಮ್ ಔಟ್​ಗೆ ಅಂಪೈರ್ ಬಳಿ ಅಪೀಲ್ ಮಾಡಿದ್ದರು. ಒಬ್ಬ ಬ್ಯಾಟ್ಸ್​​ಮನ್ ಔಟಾದ ಮೇಲೆ ಮತ್ತೊಬ್ಬ ಬ್ಯಾಟ್ಸ್​ಮನ್​ ರೂಲ್ಸ್ ಪ್ರಕಾರ 2 ನಿಮಿಷಗಳ ಒಳಗಾಗಿ ಬಾಲ್ ಫೇಸ್​ ಮಾಡೋಕೆ ರೆಡಿಯಾಗಿರಬೇಕು. ಆದ್ರೆ ಮ್ಯಾಥ್ಯೂಸ್​ ಬಾಲ್​ ಫೇಸ್​​ ಮಾಡೋಕೆ ಸಿದ್ಧವಾಗಿರಲಿಲ್ಲ ಅಂತಾ ಟೈಮ್ಡ್ ಔಟ್ ಆಗಿದ್ದರು. ಇದು ನಡೆದಿದ್ದು ನವೆಂಬರ್ 6ರಂದು. ಇದಾಗಿ ಒಂದೇ ತಿಂಗಳಲ್ಲಿ ಅಂದ್ರೆ ಡಿಸೆಂಬರ್​ 6ರಂದು ಬಾಂಗ್ಲಾದೇಶ ಆಟಗಾರರಿಗೂ ಎಂಸಿಸಿ ರೂಲ್ಸ್​​ ಒಂದರ ಬಿಸಿ ತಟ್ಟಿದೆ. ಕಾಲ ಚಕ್ರ ಹೇಗೆ ಉರುಳುತ್ತೆ ಅನ್ನೋದು ಈಗ ಬಾಂಗ್ಲಾ ಪ್ಲೇಯರ್ಸ್​ಗಳಿಗೂ ಅರ್ಥವಾಗಿದೆ. ಅದಕ್ಕೆ ಕಾರಣ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್​ ಮ್ಯಾಚ್​​ನಲ್ಲಿ ಬಾಂಗ್ಲಾ ಬ್ಯಾಟ್ಸ್​ಮನ್ ಮುಫ್ತಿಕರ್ ರೆಹ್ಮಾನ್ ಔಟಾಗಿರೋದು.

ಇದನ್ನೂ ಓದಿ: ಡಿಸೆಂಬರ್ 19ರಂದು ಐಪಿಎಲ್ ಹರಾಜು ಪ್ರಕ್ರಿಯೆ- ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸೇರುವ ಆಟಗಾರರು ಯಾರು?

ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್​ ನಡುವೆ ಮೀರ್​​ಪುರ್​ನಲ್ಲಿ ನಡೆದ 2ನೇ ಟೆಸ್ಟ್​ ಮ್ಯಾಚ್​​ನಲ್ಲಿ ಬಾಂಗ್ಲಾದೇಶ ಬ್ಯಾಟಿಂಗ್​ ಮಾಡ್ತಿತ್ತು. ಮ್ಯಾಚ್​​ನ 41ನೇ ಓವರ್​ನಲ್ಲಿ ನ್ಯೂಜಿಲ್ಯಾಂಡ್​ನ ಕೈಲ್ ಜ್ಯಾಮ್ಸನ್ ಬೌಲಿಂಗ್ ಮಾಡ್ತಿದ್ರು. ಬಾಂಗ್ಲಾದ ಮುಫ್ತಿಕರ್ ರಹೀಮ್ ಕ್ರೀಸ್​ನಲ್ಲಿದ್ರು. ಈ ವೇಳೆ ಜ್ಯಾಮ್ಸನ್ ಔಟ್​ ಸೈಡ್​ ದಿ ಆಫ್​​​ ಸ್ಟಂಪ್​ಗೆ ಬಾಲ್ ಎಸೀತಾರೆ. ಆ ಬಾಲ್​​ನ್ನ ಮುಫ್ತಿಕರ್ ರಹೀಮ್ ಡಿಫೆನ್ಸ್ ಮಾಡ್ತಾರೆ. ಡಿಫೆನ್ಸ್ ಮಾಡಿದ ಕೂಡಲೇ ಬಾಲ್ ಅಲ್ಲೇ ನೆಲಕ್ಕೆ ಬಿದ್ದು ಬೌನ್ಸ್ ಆಗುತ್ತೆ. ಬೌನ್ಸ್ ಆದ ಬಾಲ್​ನ್ನ ಬ್ಯಾಟ್ಸ್​ಮನ್ ಮುಫ್ತಿಕರ್ ರಹೀಮ್ ಕೈಯಲ್ಲಿ ತಳ್ತಾರೆ. ಆಗ ಬೌಲರ್​ ಜ್ಯಾಮ್ಸನ್ ಅಪೀಲ್​ ಮಾಡ್ತಾರೆ. ಗ್ರೌಂಡ್​ ಅಂಪೈರ್​​ ಫೈನಲ್ ಡಿಸೀಶನನ್ನ ಥರ್ಡ್ ಅಂಪೈರ್​ಗೆ ನೀಡ್ತಾರೆ. ಥರ್ಡ್ ಅಂಪೈರ್ ಔಟ್ ಕೊಡ್ತಾರೆ. ಫೀಲ್ಡಿಂಗ್​ಗೆ ಅಡ್ಡಿ ಪಡಿಸಿದ ಕಾರಣಕ್ಕೆ ಇಲ್ಲಿ ಮುಫ್ತಿಕರ್ ರಹೀಮ್​ ಔಟ್ ಆಗಿದ್ದಾರೆ. ಎಂಸಿಸಿ ರೂಲ್ಸ್ ಪ್ರಕಾರ ಬ್ಯಾಟ್ಸ್​ಮನ್​ ಈ ರೀತಿ ಕೈಯಲ್ಲಿ ಬಾಲ್​ನ್ನ ಹಿಡಿಯುವಂತೆಯೂ ಇಲ್ಲ, ತಳ್ಳುವಂತೆಯೂ ಇಲ್ಲ. ಅದು ಕೂಡ ಡಿಫೆನ್ಸ್ ಮಾಡಿದ ಬಾಲ್ ವಿಕೆಟ್​​ನತ್ತ ಹೋಗಿರಲಿಲ್ಲ. ಒಂದು ವೇಳೆ ವಿಕೆಟ್​​ನತ್ತ ಹೋಗ್ತಿದ್ರೂ ಬ್ಯಾಟ್ಸ್​​ಮನ್​​ ಕೈಯಿಂದ ಬಾಲ್​​ನ್ನ ತಡೆಯುವಂತೆ ಇಲ್ಲ. ಆದ್ರೆ, ಕಾಲಿನಿಂದ ಬೇಕಿದ್ರೆ ತಡೀಬಹುದು. ಇದನ್ನ ಸಾಮಾನ್ಯವಾಗಿ ಎಲ್ಲಾ ಪ್ಲೇಯರ್ಸ್​​ಗಳೂ ಮಾಡ್ತಾರೆ. ಆದ್ರೆ ಇಲ್ಲಿ, ಮುಫ್ತಿಕರ್ ರಹೀಮ್ ಡಿಫೆನ್ಸ್ ಮಾಡಿ ನೆಲಕ್ಕೆ ಬಿದ್ದು ಬೌನ್ಸ್ ಆದ ಬಾಲ್ ವಿಕೆಟ್​​ನಿಂದ ತುಂಬಾನೆ ಡಿಸ್ಟೆನ್ಸ್​​ನಲ್ಲಿ ಹೋಗ್ತಿತ್ತು. ಆಫ್​ ಸೈಡ್​ ದಿ ಆಫ್ ಸ್ಟಂಪ್​ ಮೂಲಕವೇ ಹೋಗ್ತಾ ಇತ್ತು. ಆದ್ರೂ ಮುಫ್ತಿಕರ್​ ಆ ಬಾಲ್​ನ್ನ ಕೈಯಿಂದ ಪುಶ್ ಮಾಡ್ತಾರೆ. ಹೀಗಾಗಿ ರೂಲ್ಸ್ ಬ್ರೇಕ್ ಆಗಿದ್ರಿಂದ ಔಟ್ ಆಗ್ತಾರೆ.

ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರವನ್ನ ಹೇಳಲೇಬೇಕು. ಮುಫ್ತಿಕರ್ ರಹೀಮ್ ಏನೂ ಉದ್ದೇಶಪೂರ್ವಕವಾಗಿ ಬಾಲ್​​ನ್ನ ಪುಶ್ ಮಾಡಿಲ್ಲ. ಎಲ್ಲಿ ಬಾಲ್ ವಿಕೆಟ್​​ಗೆ ಬೀಳುತ್ತೋ ಅನ್ನೋ ಭಯ ಕೂಡ ಅವರಿಗೆ ಇರಲಿಲ್ಲ. ಆಗಿರೋದಿಷ್ಟೇ, ನೆಟ್​ ಪ್ರಾಕ್ಟೀಸ್ ವೇಳೆ ಬ್ಯಾಟ್ಸ್​​ಮನ್​ಗಳು ಯಾವಾಗಲೂ ಡಿಫೆನ್ಸ್​ ಮಾಡಿದಾಗಲೆಲ್ಲಾ ಬಾಲ್​ನ್ನ ಇದೇ ರೀತಿ ಕೈಯಲ್ಲಿ ಹಿಡೀತಾರೆ. ಯಾಕಂದ್ರೆ ನೆಟ್ಸ್​​ನೊಳಗೆ ಪ್ರಾಕ್ಟೀಸ್ ಮಾಡೋ ಸಂದರ್ಭದಲ್ಲಿ ಬ್ಯಾಟ್ಸ್​​ಮನ್​ ಹಿಂದೆ ವಿಕೆಟ್​ ಕೀಪರ್​​ ಇರೋದಿಲ್ಲ. ಬಾಲ್​ ಎತ್ತಿ ಕೊಡೋಕೂ ಯಾರೂ ಇರೋದಿಲ್ಲ. ಒಂದೋ ಬ್ಯಾಟ್ಸ್​​ಮನ್​ ಬಾಲ್​ನ್ನ ಕಲೆಕ್ಟ್ ಮಾಡಬೇಕು. ಇಲ್ಲಾ ಬಾಲ್ ಎಸೆದವನೇ ಕಲೆಕ್ಟ್ ಮಾಡಬೇಕು. ನೆಟ್​ ಪ್ರಾಕ್ಟೀಸ್​ ವೇಳೆ ಡಿಫೆನ್ಸ್ ಮಾಡಿದಾಗ ಎಲ್ಲಾ ಬ್ಯಾಟ್ಸ್​​ಮನ್​ಗಳು ಕೂಡ ಬಾಲ್​ ನೆಲಕ್ಕೆ ಬೌನ್ಸ್ ಆಗುತ್ತಲೇ ಅದನ್ನ ಹಿಡಿದು ಮತ್ತೆ ಬೌಲರ್​​ನತ್ತ ಎಸೀತಾರೆ. ಈ ಅಭ್ಯಾಸಬಲವೇ ಈಗ ಮುಫ್ತಿಕರ್ ರಹೀಮ್​ರನ್ನ ಪೆವಿಲಿಯನ್​​ಗೆ ಕಳುಹಿಸಿರೋದು. ನೆಟ್ಸ್​​ನಲ್ಲಿ ಇದೇ ರೀತಿ ಡಿಫೆನ್ಸ್​ ಮಾಡಿದ ಕೂಡಲೇ ಬಾಲ್ ಹಿಡಿದು ಅಭ್ಯಾಸ್ ಆಗಿದ್ರಿಂದ, ಅಂತಾರಾಷ್ಟ್ರೀಯ ಮ್ಯಅಚ್ ನಡೆಯೋ ವೇಳೆಯೂ ಮುಫ್ತಿಕರ್ ರಹೀಮ್ ನೆಟ್ಸ್​​ನಲ್ಲಿ ಬಾಲ್​ ಹಿಡಿದಂತೆ ಇನ್ನೂ ಬಾಲ್​ ಕಲೆಕ್ಟ್ ಮಾಡಿದ್ದಾರೆ. ಅಫ್​ಕೋಸ್ ಮುಫ್ತಿಕರ್ ರಹೀಮ್​ ಮಾಡಿರೋದು ಕಂಪ್ಲೀಟ್ ರಾಂಗ್. ಇಟ್ಸ್ ಎ ಬ್ಲಂಡರ್​.. ಇಲ್ಲಿ ಫೀಲ್ಡರ್ ಮಾಡಬೇಕಿದ್ದ ಕೆಲಸವನ್ನ ಮುಫ್ತಿಕರ್ ರಹೀಮ್ ಮಾಡಿದ್ದಾರೆ. ಎಂಸಿಸಿ ರೂಲ್ಸ್ ಪ್ರಕಾರ ಫೀಲ್ಡಿಂಗ್​​ಗೆ ಅಡ್ಡಿ ಪಡಿಸಿದಂತಾಗುತ್ತೆ. ಹೀಗಾಗಿ ಮುಫ್ತಿಕರ್ ರಹೀಮ್​ ಔಟ್ ಆಗಿದ್ದಾರೆ.

ಇನ್ನು ಬಾಂಗ್ಲಾದೇಶದ ಮತ್ತೊಬ್ಬ ಪ್ಲೇಯರ್ ಮೆಹದಿ ಹಸನ್ ಕೂಡ ಫ್ಲೋನಲ್ಲಿ ಮುಫ್ತಿಕರ್ ಈ ರೀತಿ ಮಾಡಿದ್ದಾರೆ. ಆಡೋ ವೇಳೆ ಪ್ಲೇಯರ್​​ನ ಮೈಂಡ್​​ ಹಲವು ಸಂಗತಿಗಳು ಓಡಾಡ್ತಾ ಇರುತ್ತೆ. ಹೀಗಾಗಿ ಫ್ಲೋನಲ್ಲಿ ಮುಫ್ತಿಕರ್ ಬಾಲ್ ಹಿಡಿದಿದ್ದಾರೆ ಅಂತಾ ಹೇಳಿದ್ರು. ಆದ್ರೆ ಮ್ಯಾಚ್​ ವೇಳೆ ಕಾಮೆಂಟ್ರಿ ಮಾಡ್ತಿದ್ದ ಬಾಂಗ್ಲಾದೇಶದ ಮಾಜಿ ಕ್ಯಾಪ್ಟನ್ ತಮೀಮ್ ಇಕ್ಬಾಲ್ ಮಾತ್ರ ಮುಫ್ತಿಕರ್ ರಹೀಮ್ ನಡೆಯನ್ನ ಕ್ರಿಟಿಸೈಸ್ ಮಾಡಿದ್ದಾರೆ. 80ಕ್ಕೂ ಹೆಚ್ಚು ಟೆಸ್ಟ್ ಮ್ಯಾಚ್​ಗಳನ್ನಾಡಿದ ಕ್ರಿಕೆಟರ್​ಗೆ ರೂಲ್ಸ್​ ಏನು ಅನ್ನೋ ಜ್ಞಾನ ಇರ್ಬೇಕು. ಇಂಟೆನ್ಷನಲಿ ಮಾಡಿಲ್ಲ ಅಂದ್ರೂ ಕೂಡ ಇದಕ್ಕೆ ಎಕ್ಸ್​​ಕ್ಯೂಸ್ ಕೊಡೋಕೆ ಆಗಲ್ಲ ಎಂದಿದ್ದಾರೆ. ಇಲ್ಲಿ ತಮೀಮ್ ಇಕ್ಬಾಲ್ ಹೇಳಿರೋದು ಕೂಡ ನಿಜಾನೇ. ಯಾಕಂದ್ರೆ ಮುಫ್ತಿಕರ್ ರಹೀಮ್ ಏನೂ ನಿನ್ನೆ, ಮೊನ್ನೆ ಬಂದಿರೋ ಪ್ಲೇಯರ್ ಅಲ್ಲ. ಬಾಂಗ್ಲಾ ಟೀಂನ ಸೀನಿಯರ್ ಕ್ರಿಕೆಟರ್ 87 ಅಂತಾರಾಷ್ಟ್ರೀಯ ಟೆಸ್ಟ್​ ಮ್ಯಾಚ್​​ಗಳನ್ನ ಆಡಿದ್ದಾರೆ. 265 ವಂಡೇ ಮ್ಯಾಚ್​ಗಳನ್ನ ಆಡಿದ್ದಾರೆ. ಇಷ್ಟೊಂದು ಎಕ್ಸ್​ಪೀರಿಯನ್ಸ್ ಪ್ಲೇಯರ್ ಆಗಿರೋವಾಗ ಮುಫ್ತಿಕರ್​ ರಹೀಮ್​ ಈ ರೀತಿ ಮಾಡಿರೋದು ನಿಜಕ್ಕೂ ಬ್ಲಂಡರೇ.

ಇಲ್ಲಿ ಇನ್ನೊಂದು ಇಂಪಾರ್ಟೆಂಟ್ ಇನ್ಫಾರ್ಮೇಷನ್ ಕೂಡ ಕೊಡ್ತೀನಿ. ಆ್ಯಕ್ಚುವಲಿ ಬಾಲ್​ ತಳ್ಳಿದ್ದಕ್ಕೆ ಮುಫ್ತಿಕರ್ ರಹೀಮ್​ಗೆ ಔಟ್ ಕೊಟ್ಟಾಗ ಹ್ಯಾಂಡಲಿಂಗ್ ದ ಬಾಲ್ ಅನ್ನೋ ಆರೋಪದಡಿ ಥರ್ಡ್ ಅಂಪೈರ್ ಈ ಡಿಸೀಶನ್ ತೆಗೆದುಕೊಂಡಿದ್ರು. ಆದ್ರೆ ಬಳಿಕ ಇದನ್ನ ಅಪ್​​ಗ್ರೇಡ್ ಮಾಡಲಾಗಿತ್ತು. ಇದು ಹ್ಯಾಂಡಲಿಂಗ್ ದ ಬಾಲ್ ಅಲ್ಲ, ಒಬ್​​ಸ್ಟ್ರಕ್ಟಿಂಗ್​ ದಿ ಫೀಲ್ಡ್​ ಅಂತಾ. ಅಂದ್ರೆ ಫೀಲ್ಡಿಂಗ್​ಗೆ ಅಡ್ಡಿ ಪಡಿಸಿದ ಕಾರಣ. ಹಾಗಿದ್ರೆ ಹ್ಯಾಂಡಲಿಂಗ್ ದಿ ಬಾಲ್​ನಿಂದ ಒಬ್​​ಸ್ಟ್ರಕ್ಟಿಂಗ್​ ದಿ ಫೀಲ್ಡ್​ಗೆ ಅಪ್​ಗ್ರೇಡ್ ಮಾಡಿದ್ದು ಯಾಕೆ ಅನ್ನೋದು ಕೂಡ ಇಂಪಾರ್ಟೆಂಟ್. ಕಾರಣ ಇಷ್ಟೇ, 2017ರಲ್ಲಿ ಕ್ರಿಕೆಟ್​​ನ ಎಂಸಿಸಿ ರೂಲ್ಸ್​​ನಲ್ಲಿ ಸಾಕಷ್ಟು ಚೇಂಜೆಸ್​​ಗಳನ್ನ ಮಾಡಲಾಗಿತ್ತು. ಈ ಪೈಕಿ ಹ್ಯಾಂಡಲಿಂಗ್ ದಿ ಬಾಲ್ ಕೂಡ ಒಂದು. ಹ್ಯಾಂಡಲಿಂಗ್​ ದಿ ಬಾಲ್​​ ಅನ್ನೋ ರೂಲ್ಸ್​​ನ್ನ ರಿಮೂವ್ ಮಾಡಿ ಅದನ್ನ ಒಬ್​​ಸ್ಟ್ರಕ್ಟಿಂಗ್​ ದಿ ಫೀಲ್ಡ್ ಅಂದ್ರೆ ಫೀಲ್ಡಿಂಗ್​​ಗೆ ಅಡ್ಡಿ ಅನ್ನೋ ಕೆಟಗರಿಯಡಿ ತರಲಾಗಿತ್ತು. ಹೀಗಾಗಿ ಈಗ ಹ್ಯಾಂಡಲಿಂಗ್ ದಿ ಬಾಲ್​ ಅನ್ನೋ ವರ್ಡ್​ ಎಂಸಿಸಿ ರೂಲ್ಸ್​ ಬುಕ್​ನಲ್ಲಿ ಇಲ್ವೇ ಇಲ್ಲ. ಮುಫ್ತಿಕರ್ ರಹೀಮ್​ ಫೀಲ್ಡಿಂಗ್​​ಗೆ ಅಡ್ಡಿ ಪಡಿಸಿದ ಕಾರಣಕ್ಕಾಗಿ ಔಟ್ ಆಗಿದ್ದಾರೆ.

ಆದ್ರೆ ಈ ರೂಲ್ಸ್​ನಲ್ಲಿ ಇನ್ನೊಂದು ಟ್ವಿಸ್ಟ್ ಕೂಡ ಇದೆ. ಒಂದು ವೇಳೆ ಬ್ಯಾಟ್ಸ್​ಮನ್​ ತನಗೆ ಇಂಜ್ಯೂರಿಯಾಗದಂತೆ ತಪ್ಪಿಸಿಕೊಳ್ಳೋಕೆ ಬಾಲ್​ನ್ನ ಕೈಯಿಂದ ತಳ್ಳಿದ್ರೆ ಅಥವಾ ತಡೆದ್ರೆ ಆಗ ಅದನ್ನ ಔಟ್ ಅಂತಾ ಪರಿಗಣಿಸೋದಿಲ್ಲ. ಒಂದು ವೇಳೆ ಇಲ್ಲಿ ಬಾಲ್ ಬೌನ್ಸ ಆಗಿ ಮುಫ್ತಿಕರ್ ರಹೀಮ್ ಮುಖಕ್ಕೆ ಬಡಿಯೋ ಹಾಗೆ ಇರ್ತಿದ್ರೆ, ಅಥವಾ ದೇಹದ ಯಾವುದೇ ಭಾಗಕ್ಕೆ ಬಡಿಯುವಂತೆ ಇರ್ತಿದ್ರೆ ಆಗ ಬಾಲ್​ನ್ನ ಮುಫ್ತಿಕರ್ ಕೈನಿಂದ ಪುಶ್ ಮಾಡ್ತಿದ್ರೆ ಯಾವುದೇ ಪ್ರಾಬ್ಲಾಂ ಆಗ್ತಿರಲಿಲ್ಲ. ಮುಫ್ತಿಕರ್ ರಹೀಮ್ ಔಟ್ ಆಗ್ತಾ ಇರಲಿಲ್ಲ. ಆದ್ರೆ ಇಲ್ಲಿ ಮುಫ್ತಿಕರ್​ ಬಾಲ್​ ಬಡಿದು ಇಂಜ್ಯೂರಿಗೆ ಒಳಗಾಗುವಂಥಾ ಸನ್ನಿವೇಶವೇ ಇರಲಿಲ್ಲ. ಆದ್ರೂ ಬಾಲ್​ನ್ನ ತಳ್ಳಿದ್ರು. ಹೀಗಾಗಿ ಫೀಲ್ಡಿಂಗ್​ಗೆ ಅಡ್ಡಿ ಪಡಿಸಿದ್ದಕ್ಕೆ ಔಟ್ ಆದ್ರು.

ಕ್ರಿಕೆಟ್​ನಲ್ಲಿ ಈ ರೀತಿ ಫೀಲ್ಡಿಂಗ್​ಗೆ ಅಡ್ಡಿ ಪಡಿಸಿದ್ದಕ್ಕೆ ಔಟಾಗಿರೋದು ಇದೇ ಮೊದಲೇನಲ್ಲ. ಈ ಹಿಂದೆ 2007ರಲ್ಲಿ ಭಾರತ ವಿರುದ್ಧದ ಮ್ಯಾಚ್ ವೇಳೆ ಪಾಕಿಸ್ತಾನದ ಇಂಜಮಾಮ್​ ಉಲ್​ ಹಕ್ ಕೂಡ ಬಾಲ್​ ತಡೆದಿದ್ದಕ್ಕೆ ಔಟಾಗಿದ್ರು. ಇಂಜಮಾಮ್ ಹೊಡೆದ ಬಾಲ್ ಮಿಡ್ ಆಫ್​ನತ್ತ ಹೋಗುತ್ತಲೇ ಅಲ್ಲಿ ಫೀಲ್ಡಿಂಗ್ ಮಾಡ್ತಿದ್ದ ಸುರೇಶ್​ ರೈನಾ ಬಾಲ್ ಕಲೆಕ್ಟ್ ಮಾಡ್ತಾರೆ. ಆಗ ಇಂಜಮಾಮ್ ಉಲ್ ಹಕ್ ಸಿಂಗಲ್ ತೆಗೆಯೋಕೆ ಮುಂದಾಗಿರ್ತಾರೆ. ಕೂಡಲೇ ಸುರೇಶ್ ರೈನಾ ಬಾಲ್​ ಥ್ರೋ ಮಾಡ್ತಾರೆ. ಆದ್ರೆ ಇಂಜಮಾಮ್ ಉಲ್ ಹಕ್ ಬ್ಯಾಟ್​​ನಿಂದ ಬಾಲ್​ನ್ನ ತಡೀತಾರೆ. ಅಂಪೈರ್ ಸೈಮನ್ ಟೌಫೆಲ್​ ಕೂಡಲೇ ಔಟ್ ಕೊಡ್ತಾರೆ. ಆ್ಯಕ್ಚುವಲಿ ಸುರೇಶ್ ರೈನಾ ಎಸೆದ ಬಾಲ್ ಇಂಜಮಾಮ್ ಉಲ್ ಹಕ್ ಮೈಮೇಲೆಯೇ ಬೀಳುವಂತಿತ್ತು. ಆದ್ರೆ ಅಲ್ಲಿ ಆಗಿದ್ದೇನಂದ್ರೆ ಇಂಜಮಾಮ್ ಅದಾಗ್ಲೇ ಕ್ರೀಸ್ ಬಿಟ್ಟಿದ್ರು. ಒಂದು ವೇಳೆ ಕ್ರೀಸ್​​ನೊಳಗೆ ಇದ್ದು ತಮ್ಮ ಮೈಮೇಲೆ ಬೀಳುವಂತಿದ್ದ ಬಾಲ್​ನ್ನ ಬ್ಯಾಟ್​​ನಿಂದ ತಡೀತಿದ್ರೆ ಏನೂ ಸಮಸ್ಯೆಯಾಗ್ತಾ ಇರಲಿಲ್ಲ. ಆದ್ರೆ, ಇಂಜಮಾಮ್ ಕ್ರೀಸ್ ಬಿಟ್ಟಿದ್ರು..ಬಳಿಕ ವಿಕೆಟ್​ನತ್ತ ಹೋಗೋ ಬಾಲ್​ನ್ನ ಬ್ಯಾಟ್​ನಿಂದ ತಡೆದ್ರು. ಹೀಗಾಗಿ ಅಂದು ಇಂಜಮಾಮ್ ಉಲ್ ಹಕ್ ಔಟ್ ಆಗ್ತಾರೆ. ಅಂತೂ ಒಂದು ತಿಂಗಳ ಅಂತರದಲ್ಲಿ ಈಗ ಕ್ರಿಕೆಟಿಗರು ಎರಡು ಪಾಠ ​ಕಲಿತಿದ್ದಾರೆ. ಒಂದು ಟೈಮ್ ಔಟ್.. ಮತ್ತೊಂದು ಫೀಲ್ಡಿಂಗ್​​ಗೆ ಅಡ್ಡಿ ಪಡಿಸಬಾರದು ಅನ್ನೋದು. ಅದ್ರಲ್ಲೂ ಈಗ ಬಾಂಗ್ಲಾ ಬ್ಯಾಟ್ಸ್​ಮನ್ ಮುಫ್ತಿಕರ್ ಔಟಾಗಿರೋದು ಶ್ರೀಲಂಕನ್ನರಿಗೆ ಖುಷಿಯಾಗಿರುತ್ತೆ. ಯಾಕಂದ್ರೆ ವರ್ಲ್ಡ್​​ಕಪ್​ನಲ್ಲಿ ಆ್ಯಂಜಲೋ ಮ್ಯಾಥ್ಯೂಸ್ ಕೂಡ ಎಂಸಿಸಿ ರೂಲ್ಸ್​ನಿಂದಾಗಿಯೇ ಔಟಾಗಿದ್ರು. ಹೆಲ್ಮೆಟ್ ಹಾಳಾದ್ರೂ ಬಾಂಗ್ಲಾ ಕ್ರಿಕಟಿಗರು ಸಿಂಪಥಿ ತೋರಿಸಲಿಲ್ಲ. ಈಗ ಅದೇ ಬಾಂಗ್ಲಾ ಪ್ಲೇಯರ್ಸ್​ ಎಂಸಿಸಿ ರೂಲ್ಸ್ ಬಲೆಯೊಳಗೆ ಬಿದ್ದಿದ್ದಾರೆ.

Sulekha