ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ  4 ವರ್ಷ ಜೈಲು ಶಿಕ್ಷೆ! –  ಮಾಡಿದ ತಪ್ಪೇನು ಗೊತ್ತಾ?

ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ  4 ವರ್ಷ ಜೈಲು ಶಿಕ್ಷೆ! –  ಮಾಡಿದ ತಪ್ಪೇನು ಗೊತ್ತಾ?

ಬೆಂಗಳೂರು: ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ ಪಿ ಕುಮಾರಸ್ವಾಮಿಗೆ 4 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ.

ಇದನ್ನೂ ಓದಿ: ತ್ರಿಪುರಾದಲ್ಲಿ ಮತದಾನಕ್ಕೆ ಕೌಂಟ್ ಡೌನ್ – ಯಾರೂ ಒಳಗೆ ಬರಂಗಿಲ್ಲ.. ಹೊರಗೂ ಹೋಗುವಂತಿಲ್ಲ..!

ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಹೂವಪ್ಪ ಗೌಡ ಎಂಬುವವರಿಂದ 1.35 ಕೋಟಿ ರೂ ಸಾಲ ಪಡೆದಿದ್ದರು. ಈ ಸಾಲ ಮರುಪಾವತಿ ಮಾಡುವ ವೇಳೆ ಎಂ.ಪಿ ಕುಮಾರಸ್ವಾಮಿ ಅವರು 8 ಚೆಕ್ ಗಳನ್ನ ನೀಡಿದ್ದರು. ಆದರೆ ಈ ಚೆಕ್ ಗಳು ಬೌನ್ಸ್ ಆಗಿತ್ತು. ಸಾಲ ಮರುಪಾವತಿ ಮಾಡುವಂತೆ ಶಾಸಕರನ್ನು ಪೂವಪ್ಪ ಪದೇ ಪದೆ ಕೇಳುತ್ತಿದ್ದರು. ಆದರೆ ಎಂ ಪಿ ಕುಮಾರಸ್ವಾಮಿ ಕೊಡಬೇಕಾದ ಹಣವನ್ನ ಬಾಕಿ ಉಳಿಸಿಕೊಂಡು ಕಿರಿಕಿರಿ ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಹೂವಪ್ಪ ಗೌಡ ಕೋರ್ಟ್ ಮೊರೆಹೋಗಿದ್ದರು. ಇದೀಗ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದ್ದು, ಎಂ ಪಿ ಕುಮಾರಸ್ವಾಮಿಗೆ 4 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

ಶಾಸಕ ಎಂ ಪಿ ಕುಮಾರಸ್ವಾಮಿ ಹೆಸರಿನಲ್ಲಿ 8 ಕೇಸ್ ಗಳಲ್ಲಿ ತಲಾ 6 ತಿಂಗಳಂತೆ ನ್ಯಾಯಧೀಶೆ ಜೆ. ಪ್ರೀತ್ ರಿಂದ ಶಿಕ್ಷೆ ಪ್ರಕಟವಾಗಿದೆ. ಸಾಲದ ಹಣವನ್ನು ಕೂಡಲೇ ಮರು ಪಾವತಿ ಮಾಡದೇ ಇದ್ದಲ್ಲಿ 8 ಕೇಸ್ ಗಳಲ್ಲಿ 4 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಕೋರ್ಟ್ ಹೇಳಿದೆ.

suddiyaana