ಕಡೆಗೂ ಒಂದಾದ ವಿದ್ಯಾ, ಭದ್ರೇಗೌಡ – ವಿನಂತಿ ಕುತಂತ್ರ ಬಯಲು.. ಜೈಲು ಸೇರ್ತಾಳಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಮುದ್ದುಸೊಸೆ ಧಾರಾವಾಹಿಗೆ ದೊಡ್ಡ ವೀಕ್ಷಕರ ಬಳಗ ಇದೆ. ಇದೀಗ ಸೀರಿಯಲ್ ಸ್ಟೋರಿ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ವಿದ್ಯಾ ಗಂಡನನ್ನ ಪಾರು ಮಾಡಲು ಹರಸಾಹಸ ಪಡುತ್ತಿದ್ದಾಳೆ. ಇದೀಗ ಭ್ರದೇಗೌಡ ಹಾಗೂ ವಿದ್ಯಾಳನ್ನ ಒಂದು ಮಾಡಲು ದೇವರೇ ಬಂದಿದ್ದಾರೆ.
ಇದನ್ನೂ ಓದಿ: ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ ಹೊಸ ಇನ್ನಿಂಗ್ಸ್ – ಗೆಳತಿ ವಂಶಿಕಾ ಚಡ್ಡಾ ಜೊತೆ ಮದುವೆ
ವಿದ್ಯಾ ಹಾಗೂ ಭದ್ರೇಗೌಡ ಒಟ್ಟಾಗಿ ಬಾಳುವುದನ್ನ ಅದೇ ಮನೆಯವರಿಗೆ ಸಹಿಸೋದಿಕ್ಕೆ ಆಗ್ತಿಲ್ಲ. ಅವರಿಬ್ಬರನ್ನ ದೂರ ಮಾಡಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ಭದ್ರೇಗೌಡನ ಜನ್ಮದಿನದಂದು ವಿನಂತಿ ಅಮಲು ಬರಿಸುವ ವಸ್ತು ಹಾಕಿದ ಕೇಕ್ ತಂದಿದ್ದಳು. ಅದನ್ನು ತಿಂದ ಭದ್ರೇಗೌಡ ನಿದ್ದೆ ಮಾಡಿದ್ದನು. ಆಮೇಲೆ ವಿನಂತಿ ಅವನ ಬೆಡ್ನಲ್ಲಿ ಮಲಗಿದ್ದಳು. ಮರುದಿನ ಭದ್ರನಿಗೆ ಮನೆಯವರು ವಿಶ್ ಮಾಡಲು ಬಂದಿದ್ದರು. ಈ ವೇಳೆ ಭದ್ರನ ಜೊತೆ ವಿನಂತಿಯನ್ನ ನೋಡಿ ಮನೆಯವರು ಶಾಕ್ ಆಗಿದ್ರು. ಇವರಿಬ್ಬರ ಮಧ್ಯೆ ಏನೋ ನಡೆದಿದೆ ಎಂದು ಭಾವಿಸಿದ್ದರು. ಬಳಿಕ ಭದ್ರನ ಜೊತೆ ವಿನಂತಿ ಮದುವೆ ಮಾಡಲು ರೆಡಿಯಾಗಿದ್ರು. ಆದ್ರೆ ವಿದ್ಯಾ ಗಂಡನನ್ನ ಯಾವುದೇ ಕಾರಣಕ್ಕೂ ಬಿಟ್ಟುಕೊಟ್ಟಿಲ್ಲ. ಇತ್ತ ಅದೇ ಟೈಮ್ಗೆ ಶಿವರಾಮೇಗೌಡ ಜೈಲಿಗೆ ಹೋಗಲು ವಿನಂತಿ ಕಾರಣ ಎನ್ನೋದು ರಿವೀಲ್ ಆಯ್ತು. ಹೀಗಾಗಿ ಅವಳನ್ನು ಮನೆಯಿಂದ ಹೊರಹಾಕಿದರು. ಆದರೆ ವಿನಂತಿ ಮಾತ್ರ ಭದ್ರನನ್ನು ಮದುವೆ ಆಗಲು ಮತ್ತೆ ಸುಳ್ಳಿನ ಕೋಟೆ ಕಟ್ಟಿದ್ದಾರೆ.
ನಾನು ನನ್ನ ಹೆಂಡ್ತಿಗೆ ಮೋಸ ಮಾಡಿಲ್ಲ ಎಂದು ಭದ್ರೇಗೌಡ ಹೇಳಿದ್ದಾನೆ. ನನ್ನ ಗಂಡ ಎಂದೂ ಈ ಥರ ಮಾಡೋನಲ್ಲ ಎಂದು ವಿದ್ಯಾ ಕೂಡ ಹೇಳಿದ್ದಾಳೆ. ಇವರಿಬ್ಬರು ದೇವರ ಮುಂದೆ ಪ್ರಮಾಣ ಮಾಡಿ, ಕೆಂಡ ಹಾಯ್ದಿದ್ದಾರೆ. ಅತ್ತ ಶಿವರಾಮೇಗೌಡನ ಮೈಮೇಲೆ ದೇವರು ಬಂದಿದ್ದಾರೆ.
ಶಿವರಾಮೇಗೌಡನ ಮೈಮೇಲೆ ಬಂದ ದೇವರು, ಸತ್ಯ ಹೇಳಿದ್ರೆ ಬದುಕಿಕೊಳ್ತೀಯಾ, ಇಲ್ಲ ಅಂದ್ರೆ ಸಾಯ್ತೀಯಾ ಎಂದು ಹೇಳಿದ್ದಾನೆ. ಆಗ ವಿನಂತಿ ಸತ್ಯ ಹೇಳಬಹುದು, ದೇವರ ಪರಾಕಾಷ್ಠೆ ಮೇಲೆ ವಿನಂತಿ ಮೋಸ ಬಯಲಾಗುವ ಸಾಧ್ಯತೆ ಇದೆ. ಇದು ನಿಜಕ್ಕೂ ರೋಚಕ ಎಪಿಸೋಡ್ ಎನ್ನಬಹುದು. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ನೋಡಿರಿ

