ಮನಸ್ತುಂಬಾ ಓದು.. ಮನಸೊಪ್ಪದ ಮದ್ವೆ.. ಮಾವನನ್ನೇ ಜೈಲಿಗೆ ಹಾಕಿಸಿದ ವಿದ್ಯಾ – ತ್ರಿವಿಕ್ರಮ್ ಗೆ ಪ್ರತಿಮಾ ಮ್ಯಾಚ್ ಆಗಲ್ವಾ?

ಕಲರ್ಸ್ ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಮುಕ್ತಾಯವಾಗುತ್ತಿದೆ. ಇದೀಗ ಈ ಸೀರಿಯಲ್ ಜಾಗಕ್ಕೆ ಹೊಸ ಸೀರಿಯಲ್ ಬರ್ತಿದೆ. ಮುದ್ದು ಸೊಸೆ ಸೀರಿಯಲ್ ಏಪ್ರೀಲ್ 14 ರಿಂದ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಇದ್ರಲ್ಲಿ ಬಿಗ್ ಬಾಸ್ ಖ್ಯಾತಿಯ ತ್ರಿವಿಕ್ರಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೀಗ ಸೀರಿಯಲ್ ಆರಂಭಕ್ಕೂ ಮುನ್ನವೇ ಅಪಸ್ವರ ಎದ್ದಿದೆ. ತ್ರಿವಿಕ್ರಮ್ ಗೆ ಹಿರೋಯಿನ್ ಮ್ಯಾಚ್ ಆಗಲ್ಲ.. ಆಕೆಯ ಬದಲು ಈ ನಟಿಯನ್ನ ಆಯ್ಕೆ ಮಾಡಿ ಅಂತಾ ಹೇಳ್ತಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಮುಕ್ತಾಯವಾಗ್ತಿದೆ. ಇದೀಗ ಹೊಸ ಸೀರಿಯಲ್ ಮುದ್ದುಸೊಸೆ ಇದೇ ಏಪ್ರಿಲ್ 14ರಿಂದ ಆರಂಭವಾಗ್ತಿದೆ. ಬಿಗ್‌ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಗೆ ಓದಿ ಡಾಕ್ಟರ್ ಆಗೋ ಕನಸು. ಆದ್ರೆ ಆಕೆಗೆ ಇಷ್ಟವಿಲ್ಲ ಮದುವೆ.. ಗೌಡ್ರ ಸೊಸೆ ನೀನೆ ಅಂತಾ ಹಿಂದೆ ಬಿದ್ದಿರೋ ನಾಯಕ.. ಇವೆಲ್ಲವನ್ನ ಮೆಟ್ಟಿನಿಂತು ನಾಯಕಿ ಹೇಗೆ ತನ್ನ ಕನಸನ್ನ ನನಸು ಮಾಡಿಕೊಳ್ತಾಳೆ? ಹಾಗೇ ಈ ಸೀರಿಯಲ್ ನಲ್ಲಿ ಕೌಟುಂಬಿಕ, ಸಾಮಾಜಿಕ ಅಂಶಗಳು ಕೂಡ ಇದೆ ಅಂತಾ ಪ್ರೋಮೋ ನೋಡಿದಾಗ ಗೊತ್ತಾಗುತ್ತೆ.
ಮುದ್ದುಸೊಸೆ ಸೀರಿಯಲ್‌ನ ಪ್ರೊಮೊ ಈಗಾಗಲೇ ಬಿಡುಗಡೆಯಾಗಿದೆ. ತ್ರಿವಿಕ್ರಮ್ ಇಲ್ಲಿ ಭದ್ರನಾಗಿ ನಟಿಸಿದ್ದಾನೆ. ನಾಯಕ ಭದ್ರ ಮತ್ತು ವಿದ್ಯಾ ಮದುವೆ ನಡೆಯುತ್ತ ಇರುತ್ತದೆ. ಇದು ಅಪ್ರಾಪ್ತಯ ಮದುವೆ. ವಿದ್ಯಾ ಎಸ್‌ಎಸ್‌ಎಲ್‌ಸಿ ಓದುತ್ತಿರುವ ಹುಡುಗಿ. ನಾನು ಓದಬೇಕು, ಈ ವಯಸ್ಸಿನಲ್ಲಿ ನನಗೆ ಮದುವೆ ಬೇಡ ಎಂಬ ಇವಳ ಅಳಲು ಕೇಳುವವರು ಯಾರೂ ಇಲ್ಲ. ಮದುವೆ ದಿನ ಆಕೆ ದಿಟ್ಟ ನಿರ್ಧಾರ ಕೈಗೊಳ್ಳುತ್ತಾಳೆ. ತಾನೇ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡುತ್ತಾಳೆ. ಮದುವೆಗೆ ಊರಿನವರೆಲ್ಲಾ ಸೇರಿರ್ತಾರೆ. ಇನ್ನೇನೂ ತಾಳಿಕಟ್ಟಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ಪೊಲೀಸರ ಎಂಟ್ರಿಯಾಗುತ್ತದೆ. ಈ ಸಮಯದಲ್ಲಿ ನಾಯಕನ ತಂದೆಗೆ ಅವಮಾನವಾಗುತ್ತದೆ. ಪೊಲೀಸರ ಮೇಲೆ ಕೈ ಮಾಡಲು ಹೀರೋನ ತಂದೆ ಮುಂದಾಗುತ್ತಾರೆ. ಪೊಲೀಸರು ಹೀರೋನ ತಂದೆಯನ್ನು ವಶಕ್ಕೆ ಪಡೆಯುತ್ತಾರೆ. ಈ ಸಮಯದಲ್ಲಿ ತನ್ನ ತಂದೆಗೆ ಅವಮಾನ ಮಾಡಿದವರನ್ನು ಬಿಡೋಲ್ಲ ಎಂದು ಭದ್ರ ಅಬ್ಬರಿಸುತ್ತಾನೆ. ಅಷ್ಟೇ ಅಲ್ಲ ನಾಯಕಿಯ ಮುಖ ನೋಡುತ್ತ ಈ ಜನ್ಮದಲ್ಲಿ ಇವಳೇ ನನ್ನ ಹೆಂಡತಿ ಎಂದು ಡೈಲಾಗ್ ಹೊಡೆಯುತ್ತಾನೆ ನಾಯಕ. ಇನ್ನು ಸ್ವಲ್ಪ ದಿನದಲ್ಲಿ ನಿನಗೆ ಹದಿನೆಂಟು ವರ್ಷ ತುಂಬುತ್ತದೆ. ಅಪ್ಪಯ್ಯನನ್ನು ಜೈಲಿನಿಂದ ಬಿಡಿಸಿಕೊಂಡು ಬರುವೆ ಎಂದು ನಾಯಕ ಹೋಗುತ್ತಾನೆ. ಇದೇ ಸಮಯದಲ್ಲಿ ಈತನಿಗೆ ಒಂದು ಫೋನ್ ಬರುತ್ತದೆ. ಮದುವೆ ನಿಲ್ಲಿಸಲು ಫೋನ್ ಮಾಡಿದ್ದು ಯಾರು ಎಂದು ಗೊತ್ತಾಯ್ತು ಎನ್ನುತ್ತಾನೆ. ಇದೀಗ ವಿದ್ಯಾಳೆ ಪೊಲೀಸರಿಗೆ ಫೋನ್ ಮಾಡಿ ಮದುವೆ ನಿಲ್ಲಿಸಿದ್ದು ಅಂತಾ ಗೊತ್ತಾಗುತ್ತಾ? ಒಂದ್ವೇಳೆ ಈ ವಿಚಾರ ಗೊತ್ತಾದ್ರೆ ಮುಂದೇನಾಗ್ಬೋದು ಅನ್ನೋ ಕುತೂಹಲ ವೀಕ್ಷಕರನ್ನ ಕಾಡ್ತಿದೆ. ಇವೆಲ್ಲದ್ರ ಮಧ್ಯೆ ಸೀರಿಯಲ್ ಪ್ರೇಮಿಗಳು ಅಸಮಧಾನ ಹೊರ ಹಾಕಿದ್ದಾರೆ. ತ್ರಿವಿಕ್ರಮ್ ಗೆ ಈ ನಾಯಕಿ ಸೂಟ್ ಆಗಲ್ಲ ಅಂತಾ ಹೇಳ್ತಿದ್ದಾರೆ.
ಮುದ್ದು ಸೊಸೆ ಸೀರಿಯಲ್ ನಲ್ಲಿ ನಟಿ ಪ್ರತಿಮಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸೀರಿಯಲ್ ಗೂ ಮುನ್ನ ಅಂತರಪಟ, ದೊರೆಸಾನಿ ಸೀರಿಯಲ್‌ಗಳಲ್ಲಿ ಪ್ರತಿಮಾ ನಟಿಸಿದ್ದರು. ಅಂತರಪಟದಲ್ಲಿ ನಟಿಸುವಾಗಲೇ ತೆಲುಗಿನ ‘ಸಿವಂಗಿ’ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಈ ಸೀರಿಯಲ್ ನಲ್ಲಿ ಆನಂದಿಯಾಗಿ ತೆಲುಗು ಪ್ರೇಕ್ಷಕರ ಮನಗೆದ್ದಿದ್ದರು. ಇದೀಗ ಮುದ್ದು ಸೊಸೆಯಾಗಿ ಕನ್ನಡಕ್ಕೆ ಮರಳಿದ್ದಾರೆ. ಮುದ್ದು ಸೊಸೆಯಲ್ಲಿ ಅವರು ‘ವಿದ್ಯಾ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೀಗ ವೀಕ್ಷಕರು ಈಕೆ ತ್ರಿವಿಕ್ರಮ್ ಗೆ ಜೋಡಿಯಾಗಿ ಸೂಟ್ ಆಗಲ್ಲ ಅಂತಾ ಹೇಳ್ತಿದ್ದಾರೆ. ತ್ರಿವಿಕ್ರಮ್ ಮೈಕಟ್ಟು, ಸ್ಟೈಲ್ ಗೆ ಪ್ರತಿಮಾ ತಕ್ಕ ಜೋಡಿಯಲ್ಲ.. ಅಣ್ಣ – ತಂಗಿಯಂತೆ ಕಾಣಿಸ್ತಾರೆ. ತ್ರಿವಿಕ್ರಮ್ ಗೆ ಮೋಕ್ಷಿತಾ ಬೆಸ್ಟ್ ಜೋಡಿ ಅನ್ನೋದು ಬಹುತೇಕರ ಅಭಿಪ್ರಾಯ. ಮೋಕ್ಷಿ ಹಾಗೂ ತ್ರಿವಿಕ್ರಮ್ ಜೋಡಿ ಮಾಡಿ, ಸೀರಿಯಲ್ ಸೂಪರ್ ಹಿಟ್ ಎಂದು ಫ್ಯಾನ್ಸ್ ಹೇಳ್ತಿದ್ದಾರೆ. ಇನ್ನೂ ಕೆಲವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸುದ್ದಿಯಲ್ಲಿದ್ದಿದ್ದು ಭವ್ಯ ಮತ್ತು ತ್ರಿವಿಕ್ರಮ್. ಹೀಗಾಗಿ ಭವ್ಯ ಕೂಡ ತ್ರಿವಿಕ್ರಮ್ ಜೊತೆ ನಟಿಸ್ಬೇಕು ಅಂತಾ ಹೇಳಿದ್ದಾರೆ.