ಸಿಎಂಗೆ ಕಾಡುತ್ತಿದ್ಯಾ ಬಂಧನ ಭೀತಿ? – ಭಯದಲ್ಲೇ ಜನರನ್ನ ಎತ್ತಿಕಟ್ಟಿದ್ರಾ?
ಸಿದ್ದರಾಮಯ್ಯನ ಮುಟ್ಟಿದ್ರೆ ಏನಾಗುತ್ತೆ?

ಸಿಎಂಗೆ ಕಾಡುತ್ತಿದ್ಯಾ ಬಂಧನ ಭೀತಿ? – ಭಯದಲ್ಲೇ ಜನರನ್ನ ಎತ್ತಿಕಟ್ಟಿದ್ರಾ?ಸಿದ್ದರಾಮಯ್ಯನ ಮುಟ್ಟಿದ್ರೆ ಏನಾಗುತ್ತೆ?

ಸಿದ್ದರಾಮಯ್ಯ.  ಮೊದಲ ಬಾರಿಗೆ ಕಂಪ್ಲೀಂಟ್ 5 ವರ್ಷ ಮುಖ್ಯಮಂತ್ರಿಯಾಗಿ, 2ನೇ ಬಾರಿಗೆ ಸಿಎಂ ಕುರ್ಚಿಯಲ್ಲಿ ಕುಳಿತಿರೋ ನಾಯಕ.. 40 ವರ್ಷದ ರಾಜಕೀಯ ಜೀವನದಲ್ಲಿ ತನ್ನ ಮಾತುಗಳಿಂದ, ಕೆಲಸಗಳಿಂದ ಸಾಕಷ್ಟು ಜನರಿಗೆ ಹತ್ತಿರವಾಗಿರೋ ಸಿಎಂ. ಆದ್ರೆ ತನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎನ್ನುತ್ತಿದ್ದ ಸಿದ್ದುಗೆ ಈಗ ಮುಡಾ ಉರುಳು ಕೊರಳಿಗೆ ಸುತ್ತಿಕೊಂಡಿದೆ. ಇದರಿಂದ ಬಜಾವ್ ಆಗೋಕೆ ಜನನ್ನ ಬಿಜೆಪಿ ವಿರುದ್ಧ ಎತ್ತಿಕಟ್ಟಿದ್ರಾ? ಬಂಧನ ಭೀತಿ ಸಿಎಂಗೆ ಕಾಡುತ್ತಿದ್ಯಾ? ಅನ್ನೋ ಪ್ರಶ್ನೆ ಕಾಡುತ್ತಿದೆ.

ಇದನ್ನೂ ಓದಿ:  ಸುಳ್ಳು.. ದ್ವೇಷ.. BCCIಗೆ ಬಳೆ ತೊಡಿಸಿ – ನಾಲಗೆ ಹರಿ ಬಿಟ್ಟ ಪಾಕ್ ಕ್ರಿಕೆಟಿಗರು

ನನ್ನ ಕಂಡರೆ ಬಿಜೆಪಿಯವರಿಗೆ ಹೊಟ್ಟೆ ಉರಿ.  ಬಡವರ ಪರ ಕೆಲಸ ಮಾಡುತ್ತೇನೆ ಅಂತ ನನ್ನನ್ನು ಇಳಿಸಲು ಪ್ರಯತ್ನಿಸುತ್ತಿದ್ದಾರೆ. ನಾನು 40 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಸಚಿವ, ಡಿಸಿಎಂ, ಪ್ರತಿಪಕ್ಷ ನಾಯಕ, ಸಿಎಂ ಕೂಡ ಆಗಿದ್ದೇನೆ. ನನ್ನನ್ನು ಮುಟ್ಟಿದರೆ ನಮ್ಮ ಕರ್ನಾಟಕ ಜನ ಸುಮ್ಮನೆ ಬಿಡಲ್ಲ ಎಂದು ಪ್ರತಿಪಕ್ಷ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಷಡ್ಯಂತ್ರಗಳಿಗೆ ಜಗ್ಗಲ್ಲ, ಬಗ್ಗಲ್ಲ

ಕರ್ನಾಟಕದ ಜನ ನನ್ನನ್ನು ಮುಟ್ಟಿದ್ರೆ ಸುಮ್ಮನೆ ಬಿಡಲ್ಲ ಎನ್ನುವ ಮೂಲಕ ಹೈಕಮಾಂಡ್ ಗೆ ಪರೋಕ್ಷ ಸಂದೇಶ ರವಾನೆ ಮಾಡಿದ್ರ ಸಿಎಂ ಎಂಬ ಅನುಮಾನ ಹುಟ್ಟುಹಾಕಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡೋದೇ ಬಿಜೆಪಿ ನಾಯಕರ ಕೆಲಸ ಎಂದರು. ಇಡಿ, ಐ.ಟಿ, ಸಿ.ಬಿ.ಐ ಹಾಗೂ ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಂಡು ಆಟ ಆಡ್ತೀರಾ? ಅರವಿಂದ್ ಕೇಜ್ರವಾಲ್ ಆಯ್ತು. ಈಗ ನಾನು ಮತ್ತು ನನ್ನ ಪತ್ನಿಯನ್ನು ಟಾರ್ಗೆಟ್ ಮಾಡಿದ್ದಾರೆ. ನಾನು ನಿನ್ನೆ ಮೊನ್ನೆ ಮಂತ್ರಿಯಾದವನಲ್ಲ. 40 ವರ್ಷದಿಂದ ಮಂತ್ರಿಯಾಗಿದ್ದೀನಿ. ಸುಳ್ಳು ಕೇಸಲ್ಲಿ ನನ್ನನ್ನು, ನನ್ನ ಧರ್ಮಪತ್ನಿಯನ್ನು ಎಳೀತೀರಾ? ರಾಜ್ಯದ ಜನರೇನು ಮೂರ್ಖರಾ. ರಾಜ್ಯದ ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನಾನು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಷಡ್ಯಂತ್ರಗಳಿಗೆ ಜಗ್ಗಲ್ಲ, ಬಗ್ಗಲ್ಲ. ನೀವೆಲ್ಲರೂ ನನ್ನ ಜೊತೆ ನಿಲ್ಲಬೇಕು. ನೂರಕ್ಕೆ ನೂರರಷ್ಟು ನಿಲ್ಲಬೇಕು, ಜಾತಿ ಧರ್ಮ ಬಿಟ್ಟು ಅಭಿವೃದ್ಧಿ ಮಾಡುವವರ ಜೊತೆ ನೀವು ಇರಬೇಕು, ನಿಮ್ಮ ಪ್ರತಿನಿಧಿಯಾಗಿ ನಾವು ಕೆಲಸ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅಬ್ಬರಿಸಿದರು. ಅಷ್ಟೇ ಅಲ್ಲ ಜನಾದೇಶದಿಂದ ಆಯ್ಕೆಯಾದ ಮುಖ್ಯಮಂತ್ರಿಯ ತಂಟೆಗೆ ಬಂದರೆ ಸುಮ್ಮನಿರಲ್ಲ ಎನ್ನುವ ಎಚ್ಚರಿಕೆ ಕೊಡಬೇಕಿದೆ ಎಂದಿದ್ದಾರೆ.

ಸಿದ್ದರಾಮಯ್ಯಗೆ ಕಾಡುತ್ತಿದ್ಯಾ ಅರೆಸ್ಟ್ ಆಗುವ ಭೀತಿ?

ನಾವು ಈ ಮಾತಿನಿಂದ ಗಮನಿಸಬೇಕಾದ ಅಂಶವಂದ್ರೆ ಒಂದು ವೇಳೆ ಮುಡಾ ಕೇಸ್‌ನಿಂದ ನಾನು ಅರೆಸ್ಟ್ ಆದ್ರೆ ನೀವು ನನ್ನ ಜೊತೆಗೆ ಇರಬೇಕು.. ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಬೇಕು ಅನ್ನೋ  ಪರೋಕ್ಷ ಸಂದೇಶವನ್ನ ನೀಡಿದಂತಿದೆ. ಈಗಾಗಲೇ ಮುಡಾ ವಿಚಾರವಾಗಿ ಇಡಿ ವಿಚಾರಣೆ ತೀವ್ರಗೊಳಿಸಿದೆ.. ಮುಂದೆ ಅರೆಸ್ಟ್ ಆಗುವ ಸಂದರ್ಭ ಬಂದ್ರೂ ಬರಬಹುದು. ಹೀಗಾಗಿ ಸಿದ್ದರಾಮಯ್ಯಗೆ ಒಳಗೊಳಗೆ ಭಯ ಶುರುವಾಗಿರಬಹುದು. ಹೀಗಾಗಿ ತನ್ನ ಜಿಲ್ಲೆಯಲ್ಲೇ ನನ್ನ ಮುಟ್ಟಿದ್ರೆ, ಜನ ಸುಮ್ಮನೆ ಬಿಡಲ್ಲ ಅಂತಾ ಹೇಳಿ ಕೇಂದ್ರಕ್ಕೆ ಎಚ್ಚರಿಕೆ ನೀಡೋದ್ರಾ ಜೊತೆ ಭಾವನಾತ್ಮಕ ಅಸ್ತ್ರವನ್ನ ಸಿದ್ದರಾಮಯ್ಯ ಪ್ರಯೋಗ ಮಾಡಿದ್ದಾರೆ.

ಸಿದ್ದರಾಮಯ್ಯ ಇಂತಹ ಮಾತು ಹೇಳಿರುವ ಜಾಗ ಮೈಸೂರಿನ ತಿ ನರಸೀಪುರದಲ್ಲಿ. ಇದು ಸಿದ್ದರಾಮ್ಯರ ಆಪ್ತರು ಹಾಗೂ ಈ ಭಾಗದ ಪ್ರಭಾವಿ ಶಾಸಕರಾಗಿರೋ ಮಹದೇವಪ್ಪ ಅವರ ಕ್ಷೇತ್ರ. ಅಲ್ಲದೇ ಮೈಸೂರಿನಲ್ಲಿ ಸಿದ್ದರಾಮಯ್ಯಗೆ ಅಪಾರ ಅಭಿಮಾನಿಗಳ ಬಳಗವಿದೆ. ಹೀಗಾಗಿ ಒಂದು ವೇಳೆ  ಸಿದ್ದರಾಮಯ್ಯರನ್ನ ಬಂಧಿಸುವ ಪ್ರಸಂಗ ಬಂದ್ರೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ, ಪ್ರತಿಭಟನೆ ಧಂಗೆ ಏಳುವ ಸಾಧ್ಯತೆಗಳಿರುತ್ತೆ. ಅದು ಮೈಸೂರಿನಿಂದಲೇ ಶುರುವಾಗಲಿ ಅನ್ನೋದು ಕೂಡ  ಸಿದ್ದು ಪ್ಲ್ಯಾನ.. ಇಲ್ಲಿಂದ ಆ ಕಿಡಿ ಇಡೀ ಕರ್ನಾಟಕವನ್ನ ವ್ಯಾಪಿಸಬಹುದು. ಅಲ್ಲದೇ ಈ ಹಿಂದೆ ಸಿದ್ದರಾಮಯ್ಯ ಒಮ್ಮೆ ಹೇಳಿದ್ರು, ಮುಡಾ ಕೇಸ್‌ನಿಂದ ಅವರ ಪಾಪ್ಯುಲಾರಿಟಿ ಹೆಚ್ಚಾಗುತ್ತಿದ್ಯಾಂತೆ, ಅಹಿಂದ ವರ್ಗಗಳ ಬೆಂಬಲ ಹೆಚ್ಚಾಗಿದೆ ಅನ್ನೋದು. ಆ ಸಮುದಾಯದ ಜನ ಸಿದ್ದರಾಮಯ್ಯ ನಮ್ಮ ಪರ ಕೆಲಸ ಮಾಡ್ತಾರೆ, ಅದಕ್ಕೆ ಬಿಜೆಪಿ ಅವರನ್ನ ಟಾರ್ಗೆಟ್ ಮಾಡಿದೆ ಅನ್ನೋ ರೀತಿಯಲ್ಲಿ ಯೋಚಿಸುತ್ತಿದ್ದಾರೆ. ಹೀಗಾಗಿಯೇ ನನ್ನ ಮುಟ್ಟಿದ್ರೆ ಕರ್ನಾಟಕದ ಜನ ಸುಮ್ಮನಿರಲ್ಲ ಅಂತಾ ಕೇಂದ್ರ ಸರ್ಕಾರಕ್ಕೆ  ಸಿದ್ದರಾಮಯ್ಯ ನೇರಾ ಎಚ್ಚರಿಕೆಯನ್ನ ನೀಡಿದ್ರಾ ಅನ್ನೋ ಚರ್ಚೆ ಶುರುವಾಗಿದೆ.

ಅಲ್ಲದೇ ನಿಮ್ಮ ಸುದ್ದಿಯಾನ ಈ ಬಗ್ಗೆ ಜನರ ಅಭಿಪ್ರಾಯ ಸಂಗ್ರಹ ಮಾಡಿತ್ತು. ‘ನನ್ನನ್ನು ಮುಟ್ಟಿದ್ರೆ ಇಡೀ ಕರ್ನಾಟಕದ ಜನ ಸುಮ್ಮನಿರಲ್ಲ’ ಎಂದಿರುವ ಸಿಎಂ ಸಿದ್ದರಾಮಯ್ಯ ಮಾತಿನ ಮರ್ಮವೇನು? ಅನ್ನೋ ಬಗ್ಗೆ. ಅದಕ್ಕೆ ಸಿದ್ದರಾಮಯ್ಯ ಬಂಧನ ಭೀತಿಯಿದೆ ಎಂದು 68 ಜನ ಹೇಳಿದ್ರೆ, ಸಿಎಂ ವಿರುದ್ಧ ಮಸಲತ್ತು ಮಾಡಿದ್ದಾರೆಂದು 9 ಜ%  ಜನ ಹೇಳಿದ್ದಾರೆ. ಸಿಎಂನ್ನ ಟಚ್ ಮಾಡೋಕೆ ಅಗಲ್ಲ ಅಂತಾ 23% ಜನ ಹೇಳಿದ್ದಾರೆ.

ಇನ್ನೂ ಸಿಎಂ ಹೇಳಿಕೆಗೆ ಕೇಂದ್ರ ಸಚಿವ ವಿ ಸೋಮಣ್ಣ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ‘ಅವರನ್ನು ಮುಟ್ಟಿದ್ರೆ ಪೊಲೀಸರು ಸುಮ್ಮನೇ ಬಿಡ್ತಾರಾ? ಒಬ್ಬ ಮುಖ್ಯಮಂತ್ರಿಯನ್ನು ಮುಟ್ಟಿದ್ರೆ ಪೊಲೀಸ್ನವರು ಕೇಸ್ ಹಾಕ್ತಾರೆ. ನಿಮ್ಮನ್ನು ಯಾರೂ ಮುಟ್ಟೋದು ಬೇಡ ಬಿಡಿ’ ಎಂದು ಸೋಮಣ್ಣ ಹೇಳಿದ್ದಾರೆ. ಈ ರೀತಿ ಮುಖ್ಯಮಂತ್ರಿಗಳೇ ಧಮ್ಕಿ ಹಾಕಿದ್ರೆ ತಪ್ಪು ಸಂದೇಶ ರವಾನೆಯಾಗುತ್ತದೆ.  ಜನರ ಅಭಿಪ್ರಾಯಗಳಿಗೆ ವಿರುದ್ಧವಾಗಿ ಮಾತನಾಡಿದ್ದಾರೆ ಎಂದು ಸೋಮಣ್ಣ ವ್ಯಂಗ್ಯ ಮಾಡಿದ್ದಾರೆ. ಇದೆಲವನ್ನೂ ಗಮನಿಸಿದ್ರೆ ಸಿದ್ದರಾಮಯ್ಯಗೆ ಬಂಧನ ಭೀತಿ ಎದುರಾಗಿದ್ದು ಮಾತ್ಪ ನಿಜ.

Shwetha M