ಧೋನಿಯ ನಂ.7 ಜೆರ್ಸಿಗೆ ನಿವೃತ್ತಿ – ಧೋನಿ ನಂಬರ್​​ ಇನ್ನುಮುಂದೆ ಯಾರಿಗೂ ಸಿಗಲ್ವಾ? 

ಧೋನಿಯ ನಂ.7 ಜೆರ್ಸಿಗೆ ನಿವೃತ್ತಿ – ಧೋನಿ ನಂಬರ್​​ ಇನ್ನುಮುಂದೆ ಯಾರಿಗೂ ಸಿಗಲ್ವಾ? 

ಎಂ.ಎಸ್. ಧೋನಿ.. ಭಾರತದ ಕ್ರಿಕೆಟ್ ದಂತಕಥೆ.. ಮೂರು ಐಸಿಸಿ ಟ್ರೋಫಿಗಳನ್ನ ಗೆದ್ದ ಏಕೈಕ ಟೀಂ ಇಂಡಿಯಾ ಕ್ಯಾಪ್ಟನ್. ಮಹೇಂದ್ರ ಸಿಂಗ್ ಧೋನಿಯ ವ್ಯಾಲ್ಯೂ ಏನು ಅನ್ನೋದು ಪ್ರತಿ ಬಾರಿ ಐಸಿಸಿ ಟೂರ್ನಿಯಾದಾಗಲೂ ಭಾರತೀಯರಿಗೆ ಅರ್ಥವಾಗುತ್ತೆ. ಯಾಕಂದ್ರೆ 2011ರಲ್ಲಿ ವರ್ಲ್ಡ್​​ಕಪ್​​ ಗೆದ್ದ ಬಳಿಕ ನಾವು ಇದುವರೆಗೂ ಯಾವುದೇ ಐಸಿಸಿ ಟೂರ್ನಿಗಳನ್ನ ಗೆದ್ದಿಲ್ಲ. ಈ ಬಾರಿಯ ವಂಡೇ ವರ್ಲ್ಡ್​​ಕಪ್​​ ಫೈನಲ್​ನಲ್ಲಿ ಸೋತ ಬಳಿಕವೂ ಧೋನಿ ಎಲ್ಲರಿಗೂ ಮತ್ತೊಮ್ಮೆ ನೆನಪಾಗಿರೋದು ಸುಳ್ಳಲ್ಲ. ಧೋನಿ ನಿಜಕ್ಕೂ ಗ್ರೇಟ್..ಎಂಎಸ್​ಡಿ ಕ್ಯಾಪ್ಟನ್ಸಿಯಲ್ಲಿ ಮೂರು ವರ್ಲ್ಡ್​ಕಪ್​ ಗೆದ್ದಿದ್ದೀವಲ್ಲಾ ಅನ್ನೋ ಒಂದು ಫೀಲಿಂಗ್ ಪ್ರತಿಯೊಬ್ಬ ಭಾರತೀಯನಿಗೂ ಇರುತ್ತೆ. ಹೀಗಾಗಿ ಎವರ್​ಗ್ರೀನ್, ಕ್ರಿಕೆಟ್ ಪ್ರಿಯರ ಹಾರ್ಟ್​ನಲ್ಲಿ ಶಾಶ್ವತ ಸ್ಥಾನ ಪಡೆದಿರೋ ಧೋನಿಗೆ ಈಗ ಬಿಸಿಸಿಐ ಮತ್ತೊಂದು ರೀತಿಯಲ್ಲಿ ಗೌರವ ನೀಡಿದೆ. ಟೀಂ ಇಂಡಿಯಾ ಪರ ಆಡೋವಾಗ ಎಂಎಸ್. ಧರಿಸುತ್ತಿದ್ದ 7 ನಂಬರ್​ನ ಜೆರ್ಸಿಗೆ ರಿಟೈರ್​​ಮೆಂಟ್ ನೀಡಲಾಗಿದೆ. ಜೆರ್ಸಿಗೆ ಯಾವ ರೀತಿಯ ರಿಟೈರ್​ಮೆಂಟ್? ಇದ್ರಿಂದ ಏನೆಲ್ಲಾ ಬದಲಾವಣೆಗಳಾಗುತ್ತೆ? ಟೀಂ ಇಂಡಿಯಾದ ಈಗಿನ ಪ್ಲೇಯರ್​ಗಳಿಗೆ ಬಿಸಿಸಿಐ ನೀಡಿರೋ ಖಡಕ್ ಸೂಚನೆ ಏನು? ಇವೆಲ್ಲದರ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ ಮತ್ತು ಅರ್ಶ್ ದೀಪ್ ಸಿಂಗ್ ನಡುವೆ ಗಲಾಟೆ – ಬಸ್ ನಲ್ಲೇ ಜಗಳ ಮಾಡಿಕೊಂಡ ಆಟಗಾರರು

ಟೀಂ ಇಂಡಿಯಾ ಪರ ಆಡೋ ಪ್ರತಿಯೊಬ್ಬ ಕ್ರಿಕೆಟಿಗನ ಜೆರ್ಸಿಯಲ್ಲೂ ಕೂಡ ಒಂದು ಅಥವಾ ಎರಡಂಕಿಯ ನಂಬರ್ ಇರುತ್ತೆ. ತಮಗೆ ಇಷ್ಟವಾದ ನಂಬರ್​​ನ್ನ ಚೂಸ್ ಮಾಡಿಕೊಂಡು ಜೆರ್ಸಿಯಲ್ಲಿ ಹಾಕ್ಕೋಬಹುದು. ಆಲ್​ಮೋಸ್ಟ್ ಎಲ್ಲಾ ಪ್ಲೇಯರ್​ಗಳು ಕೂಡ ತಮ್ಮ ಲಕ್ಕಿ ನಂಬರ್​​ನ್ನೇ ಜೆರ್ಸಿಯಲ್ಲಿ ಹಾಕ್ಕೊಂಡಿರ್ತಾರೆ. ಹಾಗಂತಾ ಜೆರ್ಸಿಯಲ್ಲಿ ನಂಬರ್ ಇರಲೇಬೇಕು ಅನ್ನೋದು ಕಂಪಲ್ಸರಿ ಅಂತೂ ಅಲ್ಲ. ವಿರೇಂದ್ರ ಸೆಹ್ವಾಗ್ ಒಂದಷ್ಟು ಟೈಮ್​ ನಂಬರ್​ ಇಲ್ಲದ ಜೆರ್ಸಿಯನ್ನೇ ಧರಿಸ್ತಿದ್ರು. ಆದ್ರೆ ಕೆಲ ಜೆರ್ಸಿ ನಂಬರ್​ಗಳು ಆಟಗಾರರ ಐಡೆಂಟಿಟಿಯಾಗಿದೆ. ಪ್ಲೇಯರ್​ನಷ್ಟೇ ಜೆರ್ಸಿ ನಂಬರ್ ಕೂಡ ಫೇಮಸ್ ಆಗಿದೆ. ಕೇವಲ ಜೆರ್ಸಿ ಮೂಲಕವೇ ಆಟಗಾರರನ್ನ ಐಡೆಂಟಿಟಿ ಮಾಡಬಹುದು. ಇಂಡಿಯನ್ ಕ್ರಿಕೆಟ್​ನಲ್ಲಿ 10 ನಂಬರ್​ ಜೆರ್ಸಿ ಅಂದ ಕೂಡಲೇ ನೆನಪಾಗೋದು ಸಚಿನ್ ತೆಂಡೂಲ್ಕರ್. 7 ನಂಬರ್ ಜೆರ್ಸಿ ಅಂದ ಕೂಡಲೇ ಅದು ಮಹೇಂದ್ರ ಸಿಂಗ್ ಧೋನಿಯ ಜೆರ್ಸಿ ನಂಬರ್ ಅನ್ನೋದು ಫಿಕ್ಸ್ ಆಗಿದೆ. ಫುಟ್ಬಾಲ್​​ನಲ್ಲಿ ಮರಡೋನಾ, ಮೆಸ್ಸಿ 10 ನಂಬರ್ ಜೆರ್ಸಿ ಹೊಂದಿದ್ರು. ಕ್ರಿಶ್ಚಿಯಾನೊ ರೊನಾಲ್ಡೊ 7 ನಂಬರ್​ನ ಜೆರ್ಸಿ ಧರಿಸ್ತಾರೆ. ಹೀಗಾಗಿ ಸಿಆರ್​7 ಅಂತಾನೂ ರೊನಾಲ್ಡೊ ಫೇಮಸ್ ಆಗಿದ್ದಾರೆ. ಅಷ್ಟೇ ಯಾಕೆ, ಸಿಆರ್​7 ಹೆಸರಲ್ಲಿ ರೊನಾಲ್ಡೋರ ಕಂಪನಿ ಕೂಡ ಇದೆ. ರೆಸ್ಟೋರೆಂಟ್​ನಿಂದ ಹಿಡಿದು ಹಲವು ಪ್ರಾಡಕ್ಟ್​​ಗಳು ಕೂಡ ಸಿಆರ್​7 ಹೆಸರಲ್ಲಿದೆ. ಹೀಗಾಗಿ ಸ್ಪೋರ್ಟ್ಸ್​ ವರ್ಲ್ಡ್​​ನಲ್ಲಿ ಜೆರ್ಸಿ ನಂಬರ್​ಗೆ ಇರೋ ವ್ಯಾಲ್ಯೂನೇ ಬೇರೆ. ಮಹೇಂದ್ರ ಸಿಂಗ್ ಧೋನಿ ಡೇ-1 ನಿಂದಲೂ 7 ನಂಬರ್​ನ ಜೆರ್ಸಿಯನ್ನೇ ಧರಿಸ್ತಿದ್ರು. ಟೀಂ ಇಂಡಿಯಾ ಮಾತ್ರವಲ್ಲ ಐಪಿಎಲ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡೋವಾಗಲೂ ಅಷ್ಟೇ ಮಾಹಿ 7 ನಂಬರ್​ನ ಜೆರ್ಸಿಯನ್ನೇ ಧರಿಸ್ತಾರೆ. ಧೋನಿ ರಿಟೈರ್​ಮೆಂಟ್ ಬಳಿಕ ಅಂಥಾ ಪ್ಲೇಯರ್​ ಆಗಲಿ, ಕ್ಯಾಪ್ಟನ್ ಆಗಲಿ ಟೀಂ ಇಂಡಿಯಾಗೆ ಸಿಕ್ಕಿಲ್ಲ. ಮುಂದೆಯೂ ಸಿಗೋದಿಲ್ಲ.. ಧೋನಿಯಂತವರೆಲ್ಲಾ ವನ್ಸ್ ಇನ್ ಎ ಲೈಫ್ ಟೈಮ್ ಸಿಗ್ತಾರಷ್ಟೇ. ಯಾವತ್ತಿಗೂ ವರ್ಲ್ಡ್​​ ಕ್ರಿಕೆಟ್​​ನ ಗ್ರೇಟೆಸ್ಟ್​ ಕ್ಯಾಪ್ಟನ್, ಬೆಸ್ಟ್ ಫಿನಿಷರ್ಸ್, ಮ್ಯಾಚ್​ ವಿನ್ನರ್ಸ್​ಗಳ ಸ್ಥಾನದಲ್ಲಿ ಧೋನಿ ಹೆಸರು ಇದ್ದೇ ಇರುತ್ತೆ. ಅದ್ರಲ್ಲೂ ಭಾರತೀಯ ಕ್ರಿಕೆಟ್​ಗೆ ಧೋನಿ ಕೊಟ್ಟಿರೋ ಕೊಡುಗೆ ಎಂಥಾದ್ದು ಅನ್ನೋದನ್ನ ಬಿಡಿಸಿ ಹೇಳಬೇಕಾದ ಅವಶ್ಯಕತೆಯೇ ಇಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಧೋನಿ ರಿಟೈರ್ ಆಗಿ ನಾಲ್ಕು ವರ್ಷಗಳೇ ಆಯ್ತು. ಆದ್ರೂ ಮಾಹಿಯ ಫ್ಯಾನ್ ಫಾಲೋವಿಂಗ್ ಕಡಿಮೆಯಾಗಿಯೇ ಇಲ್ಲ. ಸಚಿನ್ ತೆಂಡೂಲ್ಕರ್ ಬಳಿಕ ಅತೀ ಹೆಚ್ಚು ಜನಪ್ರೀಯತೆ ಪಡೆದ ಭಾರತೀಯ ಕ್ರಿಕೆಟರ್ ಅಂದ್ರೆ ಅದು ಧೋನಿಯೇ.. ಜೊತೆಗೆ ಈಗ ಈ ಸಾಲಿನಲ್ಲಿ ವಿರಾಟ್ ಕೊಹ್ಲಿ ಕೂಡ ಇದ್ದಾರೆ. ಆದ್ರೀಗ ಧೋನಿಯ ಕಾಂಟ್ರಿಬ್ಯೂಷನ್​ ಪರಿಗಣಿಸಿ ಬಿಸಿಸಿಐ ಮಹತ್ವದ ನಿರ್ಧಾರವನ್ನ ಕೈಗೊಂಡಿದೆ. ಧೋನಿ ಧರಿಸ್ತಿದ್ದ ಜೆರ್ಸಿ ನಂಬರ್-7ಗೆ ರಿಟೈರ್​ಮೆಂಟ್ ನೀಡಲಾಗಿದೆ. ಅಂದ್ರೆ ಇನ್ಮುಂದೆ ಟೀಂ ಇಂಡಿಯಾದ ಪರ ಆಡೋವಾಗಲೇ ಇರಲಿ, ಫಸ್ಟ್​ ಕ್ಲಾಸ್ ಕ್ರಿಕೆಟ್​ನಲ್ಲೇ ಇರಲಿ ಯಾವ ಭಾರತೀಯ ಕ್ರಿಕೆಟರ್ ಕೂಡ 7 ನಂಬರ್​ನ ಜೆರ್ಸಿಯನ್ನ ಧರಿಸುವಂತಿಲ್ಲ. ಜೂನಿಯರ್ ಕ್ರಿಕೆಟರ್​ ಆಗಿರಲಿ, ಸೀನಿಯರ್ ಕ್ರಿಕೆಟರೇ ಆಗಿರ್ಲಿ 7 ನಂಬರ್​ನ ಜೆರ್ಸಿಯನ್ನ ಧರಿಸಿ ಗ್ರೌಂಡ್​​ಗೆ ಇಳಿಯುವಂತೆಯೇ ಇಲ್ಲ. ಈ 7 ನಂಬರ್​ ಜೆರ್ಸಿಯನ್ನ ಶಾಶ್ವತವಾಗಿ ಧೋನಿ ಹೆಸರಿಗೆ ನಮೂದಿಸಲಾಗಿದೆ. ಧೋನಿ ಹೆಸರಲ್ಲಿರೋ 7 ನಂಬರ್​​ನ ಜೆರ್ಸಿ ಇನ್ಮುಂದೆ ಬಿಸಿಸಿಐ ಕಚೇರಿಯಲ್ಲಿರುತ್ತೆ. ಹಾಗೆಯೇ 7 ನಂಬರ್​ನ ಜೆರ್ಸಿಗೆ ರಿಟೈರ್​ಮೆಂಟ್ ನೀಡ್ತಿರೋದಾಗಿ ಬಿಸಿಸಿಐ ಎಂ.ಎಸ್.ಧೋನಿಗೆ ಕೂಡ ಮಾಹಿತಿ ನೀಡಿದೆ. ಜೊತೆಗೆ ಈ ನಂಬರ್​ನ ಜೆರ್ಸಿಯನ್ನ ಯಾರೂ ಕೂಡ ಧರಿಸುವಂತಿಲ್ಲ ಅಂತಾ ಟೀಂ ಇಂಡಿಯಾದ ಎಲ್ಲಾ ಪ್ಲೇಯರ್ಸ್​ಗೂ ಸೂಚಿಸಲಾಗಿದೆ. ಹೀಗಾಗಿ 7 ನಂಬರ್​ನ ಜೆರ್ಸಿ ಇನ್ಮುಂದೆ ಟೀಂ ಇಂಡಿಯಾದ ಯಾವುದೇ ಆಟಗಾರ ಬೆನ್ನ ಹಿಂದೆ ಕಾಣಿಸೋದಿಲ್ಲ.

ಇನ್ನು ಜೆರ್ಸಿ ನಂಬರ್​ಗೆ ಈ ರೀತಿ ಬಿಸಿಸಿಐ ರಿಟೈರ್​ಮೆಂಟ್ ಘೋಷಿಸಿರೋದು ಇದೇ ಮೊದಲೇನಲ್ಲ. ಈ ಹಿಂದೆ ಸಚಿನ್ ತೆಂಡೂಲ್ಕರ್ ಧರಿಸ್ತಿದ್ದ 10 ನಂಬರ್​​ನ ಜೆರ್ಸಿಗೂ ರಿಟೈರ್​​ಮೆಂಟ್ ನೀಡಲಾಗಿದೆ. ಆಲ್ರೌಂಡರ್​ ಶಾರ್ದುಲ್ ಠಾಕೂರ್ ತಮ್ಮ ಕೆರಿಯರ್​ನ ಆರಂಭದ ಕೆಲ ಮ್ಯಾಚ್​ಗಳಲ್ಲಿ 10 ನಂಬರ್​ನ ಜೆರ್ಸಿ ಧರಿಸ್ತಿದ್ರು. ಈ ವಿಚಾರ ಭಾರಿ ಚರ್ಚೆಗೆ ಕೂಡ ಗ್ರಾಸವಾಗಿತ್ತು. ಶಾರ್ದುಲ್ ಠಾಕೂರ್ 10 ನಂಬರ್​​ನ ಜೆರ್ಸಿ ಧರಿಸಿದ್ದಕ್ಕೆ ಸಚಿನ್ ತೆಂಡೂಲ್ಕರ್ ಅಭಿಮಾನಿಗಳು ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು. ಈ ಎಲ್ಲಾ ಅಂಶಗಳನ್ನ ನೋಟ್ ಮಾಡಿ, ಸಚಿನ್​​ ತೆಂಡೂಲ್ಕರ್ ಗೌರವವಾಗಿ 10 ನಂಬರ್​​ ಜೆರ್ಸಿಗೆ ರಿಟೈರ್​ಮೆಂಟ್ ನೀಡಲಾಗಿತ್ತು. ಹೀಗಾಗಿ 10 ನಂಬರ್​ ಜೆರ್ಸಿಯನ್ನ ಕೂಡ ಟೀಂ ಇಂಡಿಯಾದ ಯಾವುದೇ ಕ್ರಿಕೆಟಿಗ ಧರಿಸುವಂತೆ ಇಲ್ಲ. ಭಾರತೀಯರ ಕ್ರಿಕೆಟಿಗರಿಗಾಗಿ ಬಿಸಿಸಿಐ ಒಟ್ಟು 60 ನಂಬರ್​​ಗಳನ್ನ ಅಲಾಟ್ ಮಾಡಿದೆ. ಅಂದ್ರೆ ನಂಬರ್​ 1 ರಿಂದ 100ರವರೆಗಿನ ನಂಬರ್ಸ್. ಈ ಪೈಕಿ ಕೆಲ ಮಿಡಲ್ ನಂಬರ್ಸ್​ಗಳು ಇರೋದಿಲ್ಲ. ಉದಾಹರಣೆಗೆ 14 ಆದ ಮೇಲೆ 15ನೇ ನಂಬರ್​ ಇರಬೇಕು ಅಂತಾನೆ ಇಲ್ಲ. 18 ಆದ್ಮೇಲೆ 19ನೇ ನಂಬರ್​ ಇರ್ಬೇಕು ಅಂತಾನೆ ಇಲ್ಲ. 1 ರಿಂದ 100ರ ವರೆಗೆ ಇರೋ ಟೋಟಲ್ 60 ನಂಬರ್​​ಗಳಲ್ಲಿ ಯಾವುದನ್ನ ಬೇಕಾದ್ರೂ ಪಿಕ್ ಮಾಡಬಹುದು. ಒಂದು ವೇಳೆ ಆಟಗಾರ ಸುಮಾರು ಒಂದು ವರ್ಷದವರೆಗೂ ಟೀಂ ಇಂಡಿಯಾ ಪರ ಕ್ರಿಕೆಟ್ ಆಡಿಲ್ಲ ಅಂದ್ರೂ, ಆತನ ಜೆರ್ಸಿ ನಂಬರ್​​ನ್ನ ಸೇಫ್ ಆಗಿ ಇಡಲಾಗುತ್ತೆ. ಅಂದ್ರೆ ಬೇರೆ ಯಾವುದೇ ಆಟಗಾರನಿಗೂ ಆ ನಂಬರ್​ ನೀಡೋದಿಲ್ಲ. ಹೀಗಾಗಿ ಸದ್ಯದ ಸ್ವಿಚ್ಯುವೇಶನ್​​ನಲ್ಲಿ ಟೀಂ ಇಂಡಿಯಾಗೆ ಡೆಬ್ಯೂ ಮಾಡೋ ಆಟಗಾರರಿಗೆ ತಮ್ಮ ಜೆರ್ಸಿಗೆ ಚೂಸ್​ ಮಾಡೋಕೆ ಇರೋದು 30 ನಂಬರ್​ಗಳು ಮಾತ್ರ. ಅಂದ್ರೆ ಇವೆಲ್ಲವೂ ರಿಟೈರ್ ಆದ ಕ್ರಿಕೆಟಿಗರದ್ದು. ಉಳಿದ 30 ನಂಬರ್​ಗಳು ಈಗಾಗ್ಲೇ ಟೀಂ ಇಂಡಿಯಾ ಪರ ಆಡ್ತಿರೋ ಕ್ರಿಕೆಟಿಗರ ಜೆರ್ಸಿಯಲ್ಲಿದೆ. ಆಕ್ಚುವಲಿ ಯಂಗ್​ ಬ್ಯಾಟ್ಸ್​ಮನ್ ಯಶಸ್ವಿ ಜೈಸ್ವಾಲ್​ 19ನೇ ನಂಬರ್​ ಕೇಳಿದ್ರಂತೆ. ಆದ್ರೆ 19ನೇ ನಂಬರ್​​ ಜೆರ್ಸಿ ಸದ್ಯ ದಿನೇಶ್ ಕಾರ್ತಿಕ್ ಹೆಸರಲ್ಲಿದೆ. ದಿನೇಶ್ ಕಾರ್ತಿಕ್ ಇನ್ನೂ ಕೂಡ ಇಂಟರ್​​ನ್ಯಾಷನಲ್ ಕ್ರಿಕೆಟ್​​ನಿಂದ ರಿಟೈರ್ ಆಗಿಲ್ಲ. ಹೀಗಾಗಿ ಯಶಸ್ವಿ ಜೈಸ್ವಾಲ್ ಈಗ 64 ನಂಬರ್​​ನ ಜೆರ್ಸಿಯನ್ನ ಧರಿಸ್ತಿದ್ದಾರೆ. ಅಂತೂ ಭಾರತೀಯ ಕ್ರಿಕೆಟ್ ತಮಡ ಇರೋವರೆಗೂ 7 ಮತ್ತು 10 ಈ ಎರಡೂ ನಂಬರ್​​ನ ಜೆರ್ಸಿಯನ್ನ ಯಾರು ಕೂಡ ಧರಿಸುವಂತೆಯೇ ಇಲ್ಲ.

Shwetha M