ನೂರಾರು ಕೋಟಿ ಒಡೆಯ ಧೋನಿ ಬಳಿ ಇರೋ ಬೈಕ್, ಕಾರುಗಳೆಷ್ಟು?

ನೂರಾರು ಕೋಟಿ ಒಡೆಯ ಧೋನಿ ಬಳಿ ಇರೋ ಬೈಕ್, ಕಾರುಗಳೆಷ್ಟು?

ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಒಂಥರಾ ಸ್ಟೈಲ್ ಕಿಂಗ್. ವಯಸ್ಸು 40 ಆದ್ರೂ ಯಂಗ್​ಕ್ರಿಕೆಟರ್ಸ್​ನೂ ನಾಚಿಸುವಂತ ಎನರ್ಜಿಟಿಕ್ ಪ್ಲೇಯರ್. ಗ್ರೌಂಡ್​ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ ಎಮ್​ಎಸ್​ಡಿ.  ಕ್ರಿಕೆಟ್​ನಲ್ಲಿ ಕೋಟ್ಯಂತರ ಅಭಿಮಾನಿಗಳನ್ನ ಹೊಂದಿರೋ ಧೋನಿಗೆ ಬೈಕ್, ಕಾರುಗಳಂದ್ರೆ ಸಿಕ್ಕಾಪಟ್ಟೆ ಕ್ರೇಜ್. ಅವ್ರ ಗ್ಯಾರೆಜ್​ನಲ್ಲಿರೋ ಕಲೆಕ್ಷನ್ಸ್ ನೋಡಿದ್ರೆ ನೀವೂ ಕೂಡ ಸ್ಟನ್ ಆಗ್ತೀರಿ. ಮಾಹಿ ಬಳಿ ಇರುವ ಕಾರು,, ಬೈಕ್​​ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಹೊಸ ಅಧ್ಯಾಯದ ಆರಂಭಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೆಡಿ – ಹೇಗಿದೆ ಸಿಎಸ್‌ಕೆ ಹವಾ?

ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ಕ್ರಿಕೆಟ್​ನಷ್ಟೇ ಕಾರು-ಬೈಕ್ ಗಳನ್ನು ಕೂಡ ಪ್ರೀತಿಸುತ್ತಾರೆ. ಅವರ ಬಳಿಯಿರುವ ಕಾರು ಮತ್ತು ಬೈಕ್ ಕಲೆಕ್ಷನ್ಸ್ ನೋಡಿದ್ರೆ ಎಂಥವ್ರೂ ಕೂಡ ಬೆರಗಾಗ್ತಾರೆ. 2020 ರಲ್ಲಿ ಎಲ್ಲಾ ರೀತಿಯ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಧೋನಿ ಅವರು ಅಪರೂಪದ ಹಳೆಯ ಕಾರುಗಳನ್ನು ಸೇರಿಸುವ ಮೂಲಕ ತಮ್ಮ ಕ್ಲಾಸಿಕ್ ಕಾರುಗಳ ಗ್ಯಾರೇಜ್ ಅನ್ನು ವಿಸ್ತರಿಸಿದ್ದಾರೆ. ತಮ್ಮ ಇಷ್ಟದ ವಾಹನಗಳ ಸಂಗ್ರಹಕ್ಕಾಗಿಯೇ ದೊಡ್ಡದಾದ ಗ್ಯಾರೇಜ್ ಅನ್ನೇ ಆರಂಭಿಸಿದ್ದು, ಇದರಲ್ಲಿ ಹತ್ತಾರು ಬಗೆಯ ಐಷಾರಾಮಿ ಕಾರುಗಳು ಮತ್ತು ಸೂಪರ್ ಬೈಕ್ ಗಳನ್ನು ಇರಿಸಿದ್ದಾರೆ. ತಮಗೆ ಬೇಕೆಂದಾಗ ವಿವಿಧ ಮಾದರಿಯ ಬೈಕ್ ಮತ್ತು ಕಾರುಗಳನ್ನು ಬಳಸುತ್ತಾರೆ.

ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಸುಮಾರು 7 ಎಕರೆ ಜಾಗದಲ್ಲಿ ದೊಡ್ಡದಾದ ಫಾರ್ಮ್ ಹೌಸ್ ಹೊಂದಿದ್ದಾರೆ. ಅದೇ ಫಾರ್ಮ್‌ಹೌಸ್‌ ಅನ್ನೇ ಮಿನಿ ಮ್ಯೂಸಿಯಂ ಆಗಿ ಪರಿವರ್ತಿಸಿದ್ದು, ಹಳೆ ಮಾದರಿಯ ಬೈಕ್ ಹಾಗೂ ವಿಂಟೇಜ್‌ ಕಾರ್‌ಗಳನ್ನ ಸಂಗ್ರಹಿಸಿದ್ದಾರೆ. ಅವುಗಳನ್ನು ಅಷ್ಟೇ ಅಚ್ಚುಕಟ್ಟಾಗಿ ಜೋಡಿಸಿದ್ದು, ಅದರ ನಿರ್ವಹಣೆಯನ್ನೂ  ಮಾಡುತ್ತಿದ್ದಾರೆ. ವಿಶ್ವಾದ್ಯಂತ ಖರೀದಿಗೆ ಲಭ್ಯವಿರುವ ವಿವಿಧ ಆಫ್ ರೋಡ್ ಕಾರುಗಳಲ್ಲಿ ಅಗ್ರಸ್ಥಾನದಲ್ಲಿರುವ ಮರ್ಸಿಡಿಸ್-ಎಎಂಜಿ ಜಿ63 ಮಾಡೆಲ್ ಭಾರತದಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೊಂದಿದೆ.

ಎಂಎಸ್ ಧೋನಿ ಸಹ ಇತ್ತೀಚೆಗೆ ಈ ಕಾರನ್ನ ಖರೀದಿಸಿದ್ದಾರೆ. ಜಾರ್ಖಂಡ್ ನೋಂದಣಿ ಹೊಂದಿರುವ ಮರ್ಸಿಡಿಸ್ ಕಾರಿನಲ್ಲಿ ಲಕ್ಕಿ ನಂಬರ್ ಪ್ಲೇಟ್ ‘0007’ ಜೋಡಣೆ ಮಾಡಲಾಗಿದ್ದು, ಕ್ರಿಕೆಟ್ ನಲ್ಲಿ ಧೋನಿ ಜೆರ್ಸಿ ನಂಬರ್ ಕೂಡ ‘7’ ಎಂಬುದು ವಿಶೇಷ. ಇನ್ನು ಧೋನಿ ಗ್ಯಾರೇಜ್​ನಲ್ಲಿ ಜಾವಾ 42 ಬಾಬರ್ ಬೈಕ್ ಸಹ ಜಾಗ ಪಡೆದಿದೆ. 15ಕ್ಕೂ ಅಧಿಕ ಹೈ ಎಂಡ್‌ ಕಾರುಗಳು ಹಾಗೂ ಕವಾಸಕಿ ನಿಂಜಾ, ಡುಕಾಟಿ, ಹಾರ್ಲೆ ಡೇವಿಡ್‌ಸನ್ ಸೇರಿದಂತೆ 70ಕ್ಕೂ ಅಧಿಕ ಬೈಕುಗಳಿವೆ. ರೋಲ್ಸ್‌ ರಾಯ್ಸ್‌ ಕಾರು ಕೂಡ ಧೋನಿಯ ಕಾರ್ ಕಲೆಕ್ಷನ್‌ ನಲ್ಲಿ ಸೇರಿದೆ. ಕೆಲ ದಿನಗಳ ಹಿಂದೆ ನೀಲಿ ಬಣ್ಣದ ವಿಂಟೇಜ್‌ ರೋಲ್ಸ್ ರಾಯ್ಸ್ ಕಾರನ್ನು ಧೋನಿ ಡ್ರೈವಿಂಗ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.

ಧೋನಿಗೆ 90ರ ದಶಕದಲ್ಲೇ ಕಾರು, ಬೈಕ್ ಕ್ರೇಜ್ ಶುರುವಾಗಿತ್ತು. 90ರ ದಶಕದಲ್ಲಿ ತಾವು ಬಳಕೆ ಮಾಡುತ್ತಿದ್ದ ಯಮಹಾ ರಾಜ್‌ದೂತ್‌ 350 ಬೈಕ್‌ನಿಂದ ತಮ್ಮ ಬೈಕ್ ಕಲೆಕ್ಷನ್‌ ಆರಂಭಿಸಿದ ಧೋನಿ, ಇದೀಗ ವಿಂಟೇಜ್ ಬೈಕ್‌ಗಳು, ಜನಪ್ರಿಯ ಮಾದರಿಯ ಬೈಕ್‌ಗಳು, ವಿದೇಶಿ ಸ್ಪೋರ್ಟ್ಸ್‌ ಬೈಕ್‌ಗಳು ಮತ್ತು ಸ್ಕೂಟರ್ಸ್‌ ಎಲ್ಲವೂ ಸಂಗ್ರಹಾಲಯದಲ್ಲಿವೆ. ಜಸ್ಟ್ ಅವುಗಳನ್ನ ಕಲೆಕ್ಷನ್ಸ್ ಮಾಡೋದು ಮಾತ್ರವಲ್ಲದೆ ತಮ್ಮ ಬಿಡುವಿನ ಸಮಯದಲ್ಲಿ ತಮಗೆ ಬಯಕೆಯಾದ ವಾಹನದಲ್ಲಿ ರಾಂಚಿಯಲ್ಲಿ ಸುತ್ತುತ್ತಾರೆ.

Shwetha M