RCB ಮುಂದಿನ ಟಾರ್ಗೆಟ್ CSK -ಸತತ 4ನೇ ಸಲವೂ ಸೋಲಿಸ್ತಾರಾ?
ಬೆಂಗಳೂರು ಈಗ ಪವರ್ ಹೌಸ್!

RCB ಮುಂದಿನ ಟಾರ್ಗೆಟ್ CSK -ಸತತ 4ನೇ ಸಲವೂ ಸೋಲಿಸ್ತಾರಾ?ಬೆಂಗಳೂರು ಈಗ ಪವರ್ ಹೌಸ್!

ಐಪಿಎಲ್ ಅಬ್ಬರ ಸ್ಟಾರ್ಟ್ ಆಯ್ತು. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಿಂದಲೇ 19ನೇ ಸೀಸನ್​ಗೆ ರಣಕಹಳೆ ಮೊಳಗಿತು. ಇನ್ನೇನಿದ್ರೂ 2 ತಿಂಗಳು ಫುಲ್ ಟೈಂ ಐಪಿಎಲ್​ದೇ ಗುಂಗು. ವೀಕೆಂಡ್​ನಲ್ಲಂತೂ ಡಬಲ್ ಹೆಡರ್ ಮ್ಯಾಚ್​ಗಳ ಹಬ್ಬ. ಸದ್ಯ ಹೈದ್ರಾಬಾದ್ ವಿರುದ್ಧ ಫಸ್ಟ್ ಮ್ಯಾಚ್ ಆಡಿರೋ ಆರ್​ಸಿಬಿಗೆ ಎರಡನೇ ಪಂದ್ಯಕ್ಕೆ ಒಂದು ವಾರ ಗ್ಯಾಪ್ ಇದೆ. ಅದೂ ಕೂಡ ನೆಕ್ಸ್​​​ಟ್ ಟಾರ್ಗೆಟ್ ಇರೋದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ.

ಇದನ್ನೂ ಓದಿ : ಬೆಂಗಳೂರಿನ ವಾಹನ ಸವಾರರ ಗಮನಕ್ಕೆ – ಇಂದು ಚಿನ್ನಸ್ವಾಮಿ ಸ್ಟೇಡಿಯಂ ಅಕ್ಕಪಕ್ಕ ಇರಲ್ಲ ವೆಹಿಕಲ್ ಪಾರ್ಕಿಂಗ್

ಆರ್​ಸಿಬಿ ವರ್ಸಸ್ ಚೆನ್ನೈ ಮ್ಯಾಚ್ ಅಂದಾಗ ಆನ್​ಫಿಲ್ಡ್​ಗಿಂತ ಜಾಸ್ತಿ ಆಫ್ ದಿ ಫೀಲ್ಡ್​ನಲ್ಲಿ ಫೈಟ್ ಜೋರಾಗಿರುತ್ತೆ. ಫ್ಯಾನ್ಸ್ ರೋಸ್ಟಿಂಗ್ ಅಂತೂ ನೆಕ್ಸ್​ಟ್ ಲೆವೆಲ್​ನಲ್ಲಿರುತ್ತೆ. ಅದೂ ಅಲ್ದೇ ಇದು ಇಬ್ಬರು ಲೆಜೆಂಡರಿ ಕ್ರಿಕೆಟಿಗರ ನಡುವಿನ ಸಮರ ಕೂಡ ಆಗಿದೆ. ಭಾರತದ ಮಾಜಿ ನಾಯಕರ ನಡುವಿನ ಕ್ಲಾಶ್. ಕಳೆದ ವರ್ಷ ಸಿಎಸ್​ಕೆ ವಿರುದ್ಧ ಆರ್​ಸಿಬಿ ಎರಡೂ ಮ್ಯಾಚ್ ಗೆದ್ದಿತ್ತು. ಸೋ ಈ ಸಲವೂ ಅದೇ ಇಂಟೆಂಟ್​ನಲ್ಲೇ ಕಣಕ್ಕಿಳಿಯಲಿದೆ. ಆದ್ರೆ ಸಿಎಸ್​​ಕೆ ಅದೇ ಡಾಮಿನೇಷನ್ ಕಂಟಿನ್ಯೂ ಮಾಡೋಕೆ ಎದುರು ನೋಡ್ತಿದೆ.

ಸಿಎಸ್ ಕೆ ವಿರುದ್ಧ ಕಳೆದ 3 ಪಂದ್ಯಗಳಲ್ಲೂ ಗೆದ್ದಿದೆ ಬೆಂಗಳೂರು!

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ತಂಡ 5 ಸಲ ಚಾಂಪಿಯನ್ ಆಗಿದೆ. ಮುಂಬೈ ಬಿಟ್ರೆ ಈ ಸಾಧನೆ ಮಾಡಿರುವ ಎರಡನೇ ತಂಡ. ಅದೂ ಅಲ್ದೇ ಕಳೆದ 18 ಸೀಸನ್​ಗಳ ಪೈಕಿ 10 ಸಲ ಫೈನಲ್​ಗೆ ಹೋಗಿದ್ದಾರೆ. ಹೀಗಾಗಿ ಇವ್ರ ಡಾಮಿನೇಷನ್ ಇದ್ದೇ ಇರುತ್ತೆ. ಆರ್​ಸಿಬಿ ವಿರುದ್ಧವೂ ಇಂಥದ್ದೇ ರೆಕಾರ್ಡ್​ಸ್ ಹೊಂದಿದ್ದಾರೆ. ಒಟ್ಟಾರೆಯಾಗಿ 31 ಪಂದ್ಯಗಳನ್ನ ಆಡಿದ್ದು ಯೆಲ್ಲೋ ಆರ್ಮಿ 21 ಪಂದ್ಯಗಳನ್ನ ಗೆದ್ದಿದ್ರೆ ಆರ್​ಸಿಬಿ 13 ಪಂದ್ಯಗಳನ್ನ ಗೆದ್ದಿದೆ. ಆದ್ರೆ ಕಳೆದ ಎರಡು ವರ್ಷಗಳಿಂದ ಇದು ರಿವರ್ಸ್ ಗೇರ್​ನಲ್ಲಿ ಹೋಗ್ತಿದೆ. ಅಂದ್ರೆ ಆರ್​ಸಿಬಿ ಡಾಮಿನೇಷನ್ ಸ್ಟಾರ್ಟ್ ಮಾಡಿದೆ. ಈಗ ಹ್ಯಾಟ್ರಿಕ್ ಗೆಲುವಿನಲ್ಲಿದೆ. ಅಂದ್ರೆ 2024ರಲ್ಲಿ ಮೊದಲ ಮ್ಯಾಚಲ್ಲಿ ಸಿಎಸ್​ಕೆ ವಿರುದ್ಧ ಸೋತಿದ್ದ ಆರ್​ಸಿಬಿ ರಿವೇಂಜ್ ಮ್ಯಾಚಲ್ಲಿ 27 ರನ್​ಗಳಿಂದ ಗೆದ್ದು ಪ್ಲೇಆಪ್​ಗೇರಿತ್ತು. ಌಂಡ್ 2025ರಲ್ಲಿ ಮೊದಲ ಮ್ಯಾಚಲ್ಲಿ ಅದೂ ಕೂಡ ಚೆಪಾಕ್​ನಲ್ಲಿ ಚೆನ್ನೈ ತಂಡವನ್ನ ಎರಡನೇ ಬಾರಿಗೆ ಸೋಲಿಸಿತ್ತು. 50 ರನ್​ಗಳ ಬಿಗ್ ಮಾರ್ಜಿನ್​ನಿಂದ ಗೆದ್ದಿತ್ತು. ಅದಾದ ಮೇಲೆ ರಿವೇಂಜ್ ಮ್ಯಾಚಲ್ಲಿ ಬೆಂಗಳೂರಲ್ಲಿ 2 ರನ್​ಗಳಿಂದ ಸಿಎಸ್​ಕೆಯನ್ನ ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಇಂಟ್ರೆಸ್ಟಿಂಗ್ ಅಂದ್ರೆ ಫಾರ್ ದಿ ಫಸ್ಟ್ ಟೈಂ ಸಿಎಸ್​ಕೆ ವಿರುದ್ಧ ಆರ್​ಸಿಬಿ ಬ್ಯಾಕ್ ಟು ಬ್ಯಾಕ್ ಮ್ಯಾಚ್​ಗಳನ್ನ ಗೆದ್ದಿತ್ತು. ಸೋ ಇದೇ ಪ್ರಾಬಲ್ಯವನ್ನ ಕಂಟಿನ್ಯೂ ಮಾಡೋಕೆ ನೋಡ್ತಿದ್ದಾರೆ. ಆದ್ರೆ ಈ ಸಲ ಸಿಎಸ್​ಕೆ ಅಷ್ಟು ಈಸಿಯಾಗಿ ಬಿಟ್ಟುಕೊಡೋದೂ ಇಲ್ಲ. ಯಾಕಂದ್ರೆ ಅಲ್ಲಿ ಈಗ ಹೊಸಬರ ದಂಡೇ ಇದೆ. ವಿಶ್ವಕಪ್ ಹೀರೋ ಕೂಡ ಇದ್ದಾರೆ.

ಯಂಗ್ ಪಡೆ ಕಟ್ಟಿರೋ ಧೋನಿ ಪ್ಲ್ಯಾನ್ ಏನು?

2025ರ ಐಪಿಎಲ್ ಬಳಿಕ ಹಳೇ ಆಟಗಾರರನ್ನೆಲ್ಲಾ ರಿಲೀಸ್ ಮಾಡಿ ಸಿಎಸ್​ಕೆ ಯಂಗ್ ಪ್ಲೇಯರ್​ಗಳ ಟೀಂ ಕಟ್ಟಿದೆ. ಜೊತೆಗೆ ಸಂಜು ಸ್ಯಾಮ್ಸನ್ ಬಂದಿರೋದು ಆನೆ ಬಲ ಸಿಕ್ಕಂತಾಗಿದೆ. ಬೌಲಿಂಗ್ ಸ್ವ್ಕಾಡ್ ಕೂಡ ಚೇಂಜ್ ಆಗಿದೆ. ಹೀಗಾಗಿ ಈ ಸಲ ಮತ್ತೆ ಸ್ಟ್ರಾಂಗ್ ಆಗಿ ಕಂ ಬ್ಯಾಕ್ ಮಾಡೋಕೆ ಕಾಯ್ತಿದ್ದಾರೆ. ಇತ್ತ ಆರ್​ಸಿಬಿ ಟೀಂ ಹೆಚ್ಚಿನ ಬದಲಾವಣೆ ಏನೂ ಇಲ್ದೇ ಇರೋದ್ರಿಂದ ಕಳೆದ ವರ್ಷದಂತೆಯೇ ಈ ಸಲವೂ ಗೆದ್ದು ಮೆರೆಯೋಕೆ ಕಾಯ್ತಿದ್ದಾರೆ. ಇನ್ನೊಂದು ವಿಶೇಷ ಅಂದರೆ  ಕಳೆದ ಸೀಸನ್​ನಲ್ಲಿ ಚಾಂಪಿಯನ್ ಆಗಿರೋ ಆರ್​ಸಿಬಿ ನಂಬರ್ 1 ಪ್ಲೇಸ್​ನಲ್ಲಿ ಟೂರ್ನಿ ಮುಗಿಸಿದ್ರೆ ಮತ್ತೊಂದೆಡೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿ ಟೂರ್ನಿ ಮುಗಿಸಿದ್ದ ಸಿಎಸ್​ಕೆ ಮ್ಯಾಚ್ ಇಂಟ್ರೆಸ್ಟಿಂಗ್ ಆಗಿರಲಿದೆ. ಟೇಬಲ್ ಟಾಪರ್ ವರ್ಸಸ್ ಬಾಟಮ್ ಆಫ್ ದಿ ಟೇಬಲ್ ಟೀಂ ನಡುವಿನ ಕ್ಲ್ಯಾಶ್ ಆಗಲಿದೆ. ಒಟ್ನಲ್ಲಿ ಆರ್​ಸಿಬಿಗೆ ನೆಕ್ಸ್​ಟ್ ಇರೋದು ಅಸಲಿ ಖದರ್ ಕೊಡೋ ಮ್ಯಾಚ್.

Shantha Kumari