ಧೋನಿ IPL ಆಡಲು CSK ಪ್ಲ್ಯಾನ್ – UNCAPPED ರೂಲ್ಸ್ ಮತ್ತೆ ಬರುತ್ತಾ?
BCCI ಬೆನ್ನು ಬಿದ್ದಿದ್ದೇಕೆ ಚೆನ್ನೈ ಫ್ರಾಂಚೈಸಿ?

ಧೋನಿ IPL ಆಡಲು CSK ಪ್ಲ್ಯಾನ್ – UNCAPPED ರೂಲ್ಸ್ ಮತ್ತೆ ಬರುತ್ತಾ?BCCI ಬೆನ್ನು ಬಿದ್ದಿದ್ದೇಕೆ ಚೆನ್ನೈ ಫ್ರಾಂಚೈಸಿ?

ಟೀಂ ಇಂಡಿಯಾದಲ್ಲಿ ಕೂಲ್ ಕ್ಯಾಪ್ಟನ್​ ಎಂದೇ ಪ್ರಸಿದ್ಧರಾದವರು ಮಹೇಂದ್ರ ಸಿಂಗ್ ಧೋನಿ. ಇವರನ್ನ  ಅಭಿಮಾನಿಗಳು ಇಷ್ಟಪಡುತ್ತಾರೆ ಅನ್ನೋದ್ಕಿಂತ ಆರಾಧಿಸುತ್ತಾರೆ ಅಂತಾನೇ ಹೇಳ್ಬೇಕು. ಭಾರತ ಮಾತ್ರವಲ್ಲದೆ ಇಡೀ ಜಗತ್ತಿನಾದ್ಯಂತ ಫ್ಯಾನ್ಸ್ ಹೊಂದಿರೋ ಧೋನಿ ಅದೆಷ್ಟೋ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ. ಗುರುವಾರವಷ್ಟೇ ಪ್ಯಾರಿಸ್ ಒಲಿಂಪಿಕ್ಸ್​ನ ಶೂಟಿಂಗ್ ವಿಭಾಗದಲ್ಲಿ ಕಂಚು ಗೆದ್ದ ಸ್ವಪ್ನಿಲ್ ಕುಸಾಲೆ ಕೂಡ ಧೋನಿಯೇ ನನಗೆ ಇನ್ಸ್​ಪಿರೇಷನ್ ಅಂದಿದ್ರು. ಅಷ್ಟರ ಮಟ್ಟಿಗೆ ಎಮ್​ಎಸ್​ಡಿ ಜನಮನದಲ್ಲಿ ಬೇರೂರಿದ್ದಾರೆ.  ಸದ್ಯ ಧೋನಿ ಭಾರತೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ರೂ ಕೂಡ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಎರಡ್ಮೂರು ವರ್ಷಗಳಿಂದ ರಿಟೈರ್​ಮೆಂಟ್ ಸುದ್ದಿ ಸದ್ದು ಮಾಡ್ತಿದ್ರೂ ಕೂಡ ಮಾಹಿ ಈವರೆಗೂ ವಿದಾಯ ಘೋಷಿಸಿಲ್ಲ. ಸದ್ಯ 43 ವರ್ಷದ ಧೋನಿ 2025ರ ಐಪಿಎಲ್ ಟೂರ್ನಿಯಲ್ಲಿ ಆಡ್ತಾರೋ ಇಲ್ವೋ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇದೆಲ್ಲದ್ರ ನಡುವೆ ತಮ್ಮ ನಿವೃತ್ತಿ ಬಗ್ಗೆ ಮಾಹಿ ಮೌನ ಮುರಿದಿದ್ದಾರೆ. ಮತ್ತೊಂದ್ಕಡೆ ಸಿಎಸ್​ಕೆ ಫ್ರಾಂಚೈಸಿ ಧೋನಿಯನ್ನ ಉಳಿಸಿಕೊಳ್ಳೋಕೆ ಐಪಿಎಲ್ ನಿಯಮವನ್ನೇ ಬದಲಿಸುವಂತೆ ಬಿಸಿಸಿಐ ಬೆನ್ನು ಬಿದ್ದಿದೆ.

ಇದನ್ನೂ ಓದಿ: INDದಂತೆ PAKಗೆ ಬಾಂಗ್ಲಾ ಶಾಕ್! – ಚಾಂಪಿಯನ್ಸ್ ಟ್ರೋಫಿಗೆ ಬಿಗ್ ಎಫೆಕ್ಟ್

ಧೋನಿಗಾಗಿ ಹಳೇ ರೂಲ್ಸ್?

ಐಪಿಎಲ್ ಫ್ರಾಂಚೈಸಿಗಳ ಪೈಕಿ ಎಮ್​ಎಸ್ ಧೋನಿ ಮೋಸ್ಟ್ ಆಫ್ ದಿ ಪಾಪ್ಯುಲರ್ ಪ್ಲೇಯರ್​ ಮತ್ತು ಕ್ಯಾಪ್ಟನ್. ಚೆನ್ನೈ ಸೂಪರ್ ಕಿಂಗ್ಸ್ ಅಂದ್ರೆ ಧೋನಿ, ಧೋನಿ ಅಂದ್ರೆ ಚೆನ್ನೈ ಸೂಪರ್ ಕಿಂಗ್ಸ್ ಅನ್ನುವಂತಾಗಿದೆ. ಭಾರತದ ಯಾವುದೇ ಮೂಲೆಯಲ್ಲೂ ಸಿಎಸ್​ಕೆ ಮ್ಯಾಚ್ ನಡೆದ್ರೂ ಧೋನಿಗೆ ಸಪೋರ್ಟ್ ಮಾಡೋಕಂತ್ಲೇ ಸಾವಿರಾರು ಫ್ಯಾನ್ಸ್ ಬರ್ತಾರೆ. ಅದ್ರಲ್ಲೂ ಧೋನಿ ಬ್ಯಾಟಿಂಗ್​​ಗೆ ಬಂದ್ರಂತೂ ಮೈದಾನವೇ ಶೇಕ್ ಆಗುವಂತೆ ಕೂಗುತ್ತಾ ಸಪೋರ್ಟ್ ಮಾಡ್ತಾರೆ. ಬಟ್ ಕಳೆದ ಕೆಲ ವರ್ಷಗಳಿಂದ ಧೋನಿ ಐಪಿಎಲ್​ಗೆ ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. 2024ರ ಐಪಿಎಲ್​ನಲ್ಲಿ ಧೋನಿ, ಋತುರಾಜ್ ಗಾಯಕ್ವಾಡ್​​ಗೆ ನಾಯಕತ್ವ ಹಸ್ತಾಂತರಿಸಿದ ಬೆನ್ನಲ್ಲೇ ಇದೇ ವರ್ಷ ವಿದಾಯ ಹೇಳಬಹುದು ಎನ್ನಲಾಗಿತ್ತು. ಆದರೆ ಧೋನಿ ವಿದಾಯ ಹೇಳಲಿಲ್ಲ. ಸೋ ಮುಂದಿನ ಆವೃತ್ತಿಗೂ ಧೋನಿ ಸಿಎಸ್​ಕೆ ಪರ ಆಡ್ತಾರೆ ಅಂತಾ ಫ್ಯಾನ್ಸ್ ಕಾಯ್ತಿದ್ದಾರೆ. ಇದೀಗ ಸಿಎಸ್​ಕೆ ಫ್ರಾಂಚೈಸಿ ಕೂಡ ಮಾಹಿಯನ್ನ ತಂಡದಲ್ಲಿ ಉಳಿಸಿಕೊಳ್ಳೋಕೆ ದೊಡ್ಡ ಪ್ಲ್ಯಾನ್​ನೇ ಮಾಡಿದೆ.  ಹಳೇ ನಿಯಮವನ್ನ ಮರಳಿ ತರುವಂತೆ ಬಿಸಿಸಿಐಗೆ ಮನವಿ ಮಡಿದೆ. 2025ರ ಆವೃತ್ತಿಗೂ ಮುನ್ನ ನಡೆದ ಐಪಿಎಲ್ ಆಡಳಿತ ಮಂಡಳಿ ಮತ್ತು 10 ಫ್ರಾಂಚೈಸ್​ಗಳೊಂದಿಗಿನ ಬಿಸಿಸಿಐ ಸಭೆಯಲ್ಲಿ ಈ ಬೇಡಿಕೆ ಇಟ್ಟಿದೆ. 2008ರ ಉದ್ಘಾಟನಾ ಲೀಗ್​ನಿಂದ 2021ರ ತನಕ ಜಾರಿಯಲ್ಲಿದ್ದ ನಿಯಮ ಮರಳಿ ತರುವಂತೆ ಸಲಹೆ ನೀಡಿದ್ದಾರೆ. ಈ ನಿಯಮವು 5 ವರ್ಷಗಳಿಗಿಂತ ಹೆಚ್ಚು ಕಾಲ ನಿವೃತ್ತರಾದ ಅಂತಾರಾಷ್ಟ್ರೀಯ ಕ್ರಿಕೆಟಿಗರನ್ನು ಅನ್​ಕ್ಯಾಪ್ಡ್​ ಆಟಗಾರರ ಪಟ್ಟಿಗೆ ಸೇರಿಸಲಾಗುತ್ತದೆ. ಧೋನಿ ಅವರನ್ನು ಅನ್​ಕ್ಯಾಪ್ಡ್​ ಆಟಗಾರ ಎಂದು ವರ್ಗೀಕರಿಸಿದರೆ, ಸಿಎಸ್​ಕೆ ಮತ್ತೊಬ್ಬ ಭಾರತೀಯ ಆಟಗಾರನನ್ನು ಉಳಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಹೀಗಾಗಿ ಹಳೆ ನಿಯಮ ಜಾರಿಗೆ ತರಲು ಒತ್ತಾಯಿಸಿದ್ದಾರೆ ಸಿಎಸ್​ಕೆ ಮಾಲೀಕರು. ಆದ್ರೆ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ ಮಾಲೀಕರ ನಿರ್ಧಾರಕ್ಕೆ ಇತರೆ ಫ್ರಾಂಚೈಸ್​​ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ನಿವೃತ್ತರನ್ನು ಎಂದಿಗೂ ಅನ್​ಕ್ಯಾಪ್ಡ್​ ಎಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ.

ಟೀಂ ಇಂಡಿಯಾದಂತೆಯೇ ಐಪಿಎಲ್​ನಲ್ಲೂ ಕೂಡ ಸಾಲು ಸಾಲು ದಾಖಲೆ ಬರೆದಿರೋ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. 2008ರ ಐಪಿಎಲ್​ನಿಂದಲೂ ಆಡುತ್ತಿದ್ದು, 264 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ 229 ಇನ್ನಿಂಗ್ಸ್​​​ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, 39.13ರ ಬ್ಯಾಟಿಂಗ್ ಸರಾಸರಿಯಲ್ಲಿ 5243 ರನ್ ಗಳಿಸಿದ್ದಾರೆ. 2024ರ ಐಪಿಎಲ್ ಟೂರ್ನಿಯಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಹೀಗಾಗಿ ಮತ್ತೊಂದು ಟೂರ್ನಿಯಲ್ಲಿ ಧೋನಿ ತಂಡದ ಪರ ಆಡ್ಬೇಕು ಅಂತಾ ಸಿಎಸ್​ಕೆ ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಮೌನ ಮುರಿದಿರೋ ಮಾಹಿ, ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರ ನೀಡಿದ್ದಾರೆ. ಇದೆಲ್ಲವೂ ತನ್ನ ಕೈಯಲ್ಲಿಲ್ಲ. ಐಪಿಎಲ್ 2025ಕ್ಕೆ ರೂಲ್ಸ್ ಫೈನಲ್ ಆದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಹೀಗಾಗಿ ಪ್ರಸ್ತುತ ಈ ನಿರ್ಧಾರವು ತನ್ನ ಕೈಯಲ್ಲಿಲ್ಲ. ಚೆಂಡು ಸದ್ಯಕ್ಕೆ ನಮ್ಮ ಅಂಗಳದಲ್ಲಿಲ್ಲ. ನಿಯಮಗಳು ಮತ್ತು ನಿಬಂಧನೆಗಳನ್ನು ಮಾಡಿದ ನಂತರ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ. ತಂಡದ ಹಿತಾಸಕ್ತಿ ಪರಿಗಣಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಇಲ್ಲೂ ಕೂಡ ನಿವೃತ್ತಿ ಬಗ್ಗೆ ಸ್ಪಷ್ಟತೆ ನೀಡಿಲ್ಲ. ಒಟ್ನಲ್ಲಿ ಪ್ರಸ್ತುತ ಧೋನಿಗೆ 43 ವರ್ಷ ವಯಸ್ಸಾಗಿದ್ದು, ತಂಡದಲ್ಲಿ ಉಳಿಸಿಕೊಳ್ಳೋಕೆ ಫ್ರಾಂಚೈಸಿ ಕೂಡ ಪ್ಲ್ಯಾನ್ ಮಾಡ್ತಿದೆ. ಆದ್ರೆ ಧೋನಿ ಏನು ನಿರ್ಧಾರ ತೆಗೆದುಕೊಳ್ತಾರೆ ಅನ್ನೋದೇ ಈಗಿರುವ ಪ್ರಶ್ನೆ.

Shwetha M