ಟೀಮ್ ಇಂಡಿಯಾ ಆಟಗಾರರಿಗೆ ಧೋನಿ ಸರ್‌ಪ್ರೈಸ್ -–ಡ್ರೆಸ್ಸಿಂಗ್ ರೂಮ್‌ನಲ್ಲಿ ಫುಲ್ ಜೋಶ್

ಟೀಮ್ ಇಂಡಿಯಾ ಆಟಗಾರರಿಗೆ ಧೋನಿ ಸರ್‌ಪ್ರೈಸ್ -–ಡ್ರೆಸ್ಸಿಂಗ್ ರೂಮ್‌ನಲ್ಲಿ ಫುಲ್ ಜೋಶ್

ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಮೊದಲ ಟಿ20 ಪಂದ್ಯ ರಾಂಚಿಯಲ್ಲಿ ನಡೆಯುತ್ತಿದೆ. ಟೀಮ್ ಇಂಡಿಯಾ ಆಟಗಾರರು ಈಗಾಗಲೇ ರಾಂಚಿಗೆ ತಲುಪಿದ್ದಾರೆ. ಟೀಮ್ ಇಂಡಿಯಾ ಆಟಗಾರರಿಗೆ ಭಾರತದ ಮಾಜಿ ನಾಯಕ, ದಿಗ್ಗಜ ಆಟಗಾರ ಮಹೇಂದ್ರ ಸಿಂಗ್ ಧೋನಿ ಸರ್‌ಪ್ರೈಸ್ ನೀಡಿದ್ದಾರೆ. ದಿಢೀರ್ ಆಗಿ ರಾಂಚಿ ಕ್ರೀಡಾಂಗಣಕ್ಕೆ ಪ್ರವೇಶಿಸಿದ ಎಂ.ಎಸ್ ಧೋನಿ ಟೀಮ್ ಇಂಡಿಯಾ ಆಟಗಾರರಿಗೆ ಅಚ್ಚರಿ ನೀಡಿದ್ದಾರೆ. ರಾಂಚಿಯ ಜೆಎಸ್​ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ.

ಇದನ್ನೂ ಓದಿ:  ‘ಶೋಲೆ-2 ಕಮಿಂಗ್ ಸೂನ್’ – ರಾಂಚಿ ರ‍್ಯಾಂಬೋ ಜೊತೆ ಪಾಂಡ್ಯ ರೈಡಿಂಗ್

ಟೀಮ್ ಇಂಡಿಯಾ ಆಟಗಾರರು ಬುಧವಾರ ರಾಂಚಿಗೆ ತಲುಪಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಆಟಗಾರರಿಗೆ ಬಿಗ್ ಸರ್​ಪ್ರೈಸ್ ಎಂಬಂತೆ ಮಹೇಂದ್ರ ಸಿಂಗ್ ಧೋನಿ ಸಡನ್ ಆಗಿ ಕ್ರೀಡಾಂಗಣ ಪ್ರವೇಶಿಸಿದ್ದರು. ನಂತರ ಡ್ರೆಸ್ಸಿಂಗ್ ರೂಮ್​ಗೆ ತೆರಳಿ ಆಟಗಾರರ ಜೊತೆ ಮಾತುಕತೆ ನಡೆಸಿದರು. ಧೋನಿ ತನ್ನ ತವರಿನ ರಾಂಚಿಯ ಕ್ರೀಡಾಂಗಣಕ್ಕೆ ತೆರಳಿ ಟೀಮ್ ಇಂಡಿಯಾ ಪ್ಲೇಯರ್ಸ್ ನ್ನು ಭೇಟಿ ಆದ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ರಾಂಚಿಯಲ್ಲಿ ಟ್ರೈನಿಂಗ್ ಸಂದರ್ಭ ಯಾರು ಭೇಟಿ ನೀಡಿದ್ದಾರೆ ನೋಡಿ ಎಂಬ ಕ್ಯಾಪ್ಷನ್ ಬರೆದು ಧೋನಿಗೆ ಟ್ಯಾಗ್ ಮಾಡಲಾಗಿದೆ.

suddiyaana