ಬ್ಯಾಟ್ ಬೀಸೋಕೂ ಸೈ.. ಸ್ಟೇರಿಂಗ್ ಹಿಡಿಯೋಕೂ ಜೈ – ಧೋನಿಯ ಟ್ರ್ಯಾಕ್ಟರ್ ರೈಡಿಂಗ್ ಹೇಗಿದೆ ನೋಡಿ!?

ಬ್ಯಾಟ್ ಬೀಸೋಕೂ ಸೈ.. ಸ್ಟೇರಿಂಗ್ ಹಿಡಿಯೋಕೂ ಜೈ – ಧೋನಿಯ ಟ್ರ್ಯಾಕ್ಟರ್ ರೈಡಿಂಗ್ ಹೇಗಿದೆ ನೋಡಿ!?

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಬ್ಯಾಟ್ ಹಿಡಿದು ಕ್ರೀಡಾಂಗಣದಲ್ಲಿ ಫೋರ್, ಸಿಕ್ಸ್ ಅಂತಾ ರನ್ ಮಳೆ ಸುರಿಸೋದನ್ನ ನೀವೆಲ್ಲಾ ನೋಡೇ ಇರ್ತೀರ. ಆದ್ರೆ ಸ್ಟೇರಿಂಗ್ ಹಿಡಿದು ಟ್ರ್ಯಾಕ್ಟರ್ ಓಡಿಸೋದನ್ನ ನೋಡಿದ್ದೀರಾ. ತಮ್ಮ ಈ ಸ್ಪೆಷಲ್ ಟ್ಯಾಲೆಂಟ್ ನ ಧೋನಿಯೇ ಶೇರ್ ಮಾಡಿದ್ದಾರೆ.

ಇದನ್ನೂ ಓದಿ : ಮುದ್ದಿನ ಶ್ವಾನಕ್ಕಾಗಿ ಮನೆ ಮಾರಾಟಕ್ಕಿಟ್ಟ ಮಾಲೀಕ! – ಮುಂದೇನಾಯ್ತು ಗೊತ್ತಾ?

ಹೌದು. ಕ್ರಿಕೆಟ್ ಲೋಕದ ಸ್ಟಾರ್ ಆಟಗಾರ ಧೋನಿ ಈಗ ರೈತನಾಗಿದ್ದಾರೆ. ಕೂಲ್ ಕ್ಯಾಪ್ಟನ್ ಅಂತಾನೇ ಕರೆಸಿಕೊಳ್ತಿದ್ದ ಮಾಹಿ ಸದ್ಯ ಹೊಲದಲ್ಲಿ ಟ್ರ್ಯಾಕ್ಟರ್‌ ಓಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಎರಡು ವರ್ಷದ ಬಳಿಕ ಧೋನಿ ಇನ್‌ಸ್ಟಾದಲ್ಲಿ ವೀಡಿಯೋ ಪೋಸ್ಟ್‌ ಮಾಡಿದ್ದಾರೆ. ಹೊಸದನ್ನು ಕಲಿಯಲು ಸಂತೋಷವಾಗಿದೆ. ಆದರೆ ಕೆಲಸವನ್ನು ಮುಗಿಸಲು ತುಂಬಾ ಸಮಯ ತೆಗೆದುಕೊಂಡಿತು ಎಂದು ಧೋನಿ ಬರೆದುಕೊಂಡಿದ್ದಾರೆ. ಧೋನಿಗೆ ಇಬ್ಬರು ರೈತರು ಕೃಷಿ ಹೊಲ ಉಳುಮೆ ಮಾಡಲು ಕಲಿಸುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು. 2021ರ ಜನವರಿ 8 ರಂದು ಧೋನಿ ತಮ್ಮ ತೋಟದಲ್ಲಿ ಬೆಳೆದಿದ್ದ ಸ್ಟ್ರಾಬೆರಿ ಬೆಳೆಯ ವೀಡಿಯೋವನ್ನು ಹಂಚಿಕೊಂಡಿದ್ದರು. ಅದಾದ ಬಳಿಕ ಯಾವುದೇ ಪೋಸ್ಟ್‌ ಮಾಡಿರಲಿಲ್ಲ.

2020ರಲ್ಲೇ ಎಲ್ಲ ಅಂತಾರಾಷ್ಟ್ರೀಯ ಮಾದರಿಯ ಕ್ರಿಕೆಟ್‌ಗೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಹೇಳಿದ್ದಾರೆ. ಐಪಿಎಲ್ ಮಾತ್ರ ಆಡಲಿರುವ ಧೋನಿ ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಧೋನಿ ಕಳೆದ ವರ್ಷದ ಐಪಿಎಲ್‌ನಲ್ಲೇ ನಿವೃತ್ತಿ ಹೇಳಬಹುದು ಎಂಬ ವದಂತಿ ಹರಡಿತ್ತು. ಆದರೆ ಧೋನಿ ನಿವೃತ್ತಿ ನಿರ್ಧಾರ ಕೈಗೊಂಡಿರಲಿಲ್ಲ. ಕಳೆದ ನವೆಂಬರ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ನನ್ನ ಕೊನೆಯ ತವರಿನ ಏಕದಿನ ಪಂದ್ಯ ರಾಂಚಿಯಲ್ಲೇ ನಡೆದಿದ್ದರೆ ನನ್ನ ಕೊನೆಯ ಟಿ20 ಪಂದ್ಯ ಚೆನ್ನೈನಲ್ಲೇ ಇರಬೇಕೆಂದು ಆಶಿಸುತ್ತೇನೆ. ಇದು ಮುಂದಿನ ವರ್ಷ ಆಗಿರುತ್ತಾ ಅಥವಾ ಮುಂದಿನ ಐದು ವರ್ಷದಲ್ಲಿ ಆಗುತ್ತಾ ನಿಜಕ್ಕೂ ಗೊತ್ತಿಲ್ಲ ಎಂದು ಹೇಳಿದ್ದರು.

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 2010, 2011, 2018, 2021 ರಲ್ಲಿ ಚಾಂಪಿಯನ್‌ ಆಗಿತ್ತು. 2008, 2012, 2013, 2015, 2019ರಲ್ಲಿ ರನ್ನರ್‌ ಅಪ್‌ ಆಗಿ ಹೊರಹೊಮ್ಮಿತ್ತು. 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ನಂತರ ಕ್ರಿಕೆಟ್‍ನಿಂದ ದೂರ ಉಳಿದಿದ್ದ ಧೋನಿ, ವಿದಾಯ ಘೋಷಿಸುವ ಯಾವುದೇ ಸುಳಿವನ್ನು ನೀಡಿರಲಿಲ್ಲ. ಆದರೆ 2020 ಆಗಸ್ಟ್ 15 ರಂದು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ವಿದಾಯ ಸುದ್ದಿ ನೀಡಿದ್ದರು.

 

View this post on Instagram

 

A post shared by M S Dhoni (@mahi7781)

suddiyaana