ಧೋನಿ ಡೈನಾಮಿಕ್ ಲುಕ್ – ಮಾಹಿ ಹೇರ್ ಸ್ಟೈಲ್ ಮತ್ತೆ ಚೇಂಜ್
ಹೇರ್ ಕಟ್ ಮಾಡಲು ಇಷ್ಟು ಖರ್ಚಾ?
ಕೂಲ್ ಕ್ಯಾಪ್ಟನ್ ಧೋನಿ ಹೆಸರು ಕೇಳಿದ್ರೆ, ಸಾಕು ಕ್ರಿಕೆಟ್ ಪ್ರೇಮಿಗಳಿಗೆ ರೋಮಾಂಚನವಾಗುತ್ತೆ. ಈ ಮಾಂತ್ರಿಕನ ಪವರ್ ಅಂತಾದ್ದು. ಇದೀಗ ಮಾಹಿ ಇಂಟರ್ನೆಟ್ನಲ್ಲಿ ಧೂಳೆಬ್ಬಿಸಿದ್ದಾರೆ. ಧೋನಿಯ ಆ ಒಂದು ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸುನಾಮಿ ಎಬ್ಬಿಸಿದೆ. ನೀವೇನಾದ್ರು ಆ ಹೊಸ ಅವತಾರ ನೋಡಿದ್ರೆ ಕಳೆದು ಹೋಗೋದು ಗ್ಯಾರಂಟಿ.
ಇದನ್ನೂ ಓದಿ: ಶಿವಂ ದುಬೆಗೆ ಯಾಕಿಷ್ಟು ಚಾನ್ಸ್? – 7 ಪಂದ್ಯ.. 106 ರನ್.. ಫೈನಲ್ ಹೇಗೆ?
ಕೂಲ್ ಕ್ಯಾಪ್ಟನ್ ಸಖತ್ ಹ್ಯಾಂಡ್ಸಮ್. 42 ನೇ ವಯಸಲ್ಲೂ ಯುವಕರೇ ನಾಚುವಂತೆ ಸ್ಟೈಲಿಶ್ ಆಗಿದ್ದಾರೆ ಧೋನಿ.. ಧೋನಿ ವಿಶ್ವ ಕ್ರಿಕೆಟ್ನ ಶ್ರೇಷ್ಠ ಕ್ಯಾಪ್ಟನ್ ಮಾತ್ರವಲ್ಲ.. ಟ್ರೆಂಡ್ ಸೆಟ್ಟರ್ ಕೂಡ ಹೌದು. ವಿಭಿನ್ನ ಹೇರ್‌ಸ್ಟೈಲ್ ವಿಚಾರಕ್ಕೆ ಬಂದ್ರೆ ಈ ಸೂಪರ್ಸ್ಟಾರ್ನ ಮೀರಿಸೋರೆ ಇಲ್ಲ.
ಮಾಹಿ ಭಾರತ ತಂಡಕ್ಕೆ ಪ್ರವೇಶದ ಸಮಯದಲ್ಲಿ ಉದ್ದನೆಯ ಕೂದಲಿನೊಂದಿಗೆ ಸ್ಟೈಲಿಶ್ ಆಟಗಾರನಾಗಿ ತಮ್ಮ ಅಭಿಮಾನಿಗಳ ಹೃದಯ ಗೆದ್ದಿದ್ದರು. ಭಾರತ ತಂಡದಲ್ಲಿ ಸ್ಟಾರ್ ಆಟಗಾರನಿಂದ ನಾಯಕನವರೆಗೆ ಟೀಂ ಇಂಡಿಯಾಗೆ ಅಮೂಲ್ಯವಾದ ಗೆಲುವುಗಳನ್ನು ನೀಡಿದ ಜಾರ್ಖಂಡ್ ಹೀರೋ ಈಗ ತನ್ನ ಲುಕ್ ಅನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಧೋನಿಯ ಹೊಸ ಹೇರ್‌ಸ್ಟೈಲ್ ಸದ್ಯ ಇಂಟರ್ನೆಟ್ನಲ್ಲಿ ಸುನಾಮಿ ಎಬ್ಬಿಸಿದೆ.
ಮಹೇಂದ್ರ ಸಿಂಗ್ ಧೋನಿ ಅವರನ್ನು ಅಂತಹ ಸ್ಟೈಲಿಶ್ ಲುಕ್‌ಗೆ ಪರಿವರ್ತಿಸಿದ್ದು ಬೇರೆ ಯಾರೂ ಅಲ್ಲ, ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೀಮ್ ಹಕೀಮ್. ಧೋನಿ ಅವರ ಹೊಸ ಲುಕ್ ಅನ್ನ ಹಕೀಮ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ..
ನಮ್ಮ ಯಂಗ್, ಡೈನಾಮಿಕ್ ಮತ್ತು ಹ್ಯಾಂಡ್ಸಮ್ ಮಹೇಂದ್ರ ಸಿಂಗ್ ಧೋನಿ.. ನಮ್ಮ ತಲಾ ಅವರ ಕೂದಲನ್ನು ಕತ್ತರಿಸುವುದು ಮತ್ತು ಸ್ಟೈಲ್ ಮಾಡುವುದು ತುಂಬಾ ಸಂತೋಷವಾಗುತ್ತದೆ. ಮತ್ತು ಅವರು ಯಾವಾಗಲೂ ಅವರ ಫೋಟೋ ತೆಗೆಯಲು ಅವಕಾಶ ನೀಡುವಷ್ಟು ವಿನಯಶೀಲರಾಗಿದ್ದಾರೆ” ಎಂದು ಆಲಿಮ್ ಹಕೀಮ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಇನ್ನು ಧೋನಿ ಆಗಾಗ ಹೊಸ ಹೊಸ ಹೇರ್ ಸ್ಟೈಲ್ ಮಾಡಿಸಿಕೊಳ್ಳುತ್ತಲೇ ಇರ್ತಾರೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಲಾಂಗ್ ಹೇರ್ ಮೂಲಕ. ಆಗಿನಿಂದಲೇ ಧೋನಿ ಹೇರ್‌ಸ್ಟೈಲ್ ಯುವ ಸಮೂಹದ ನೆಚ್ಚಿನ ಹೇರ್‌ಸ್ಟೈಲ್ ಆಗಿತ್ತು. ಅದಾದ ಬಳಿಕ ಪ್ರತಿ ಐಪಿಎಲ್ ಟೂರ್ನಿಗಳಲ್ಲೂ ಮಾಹಿ ಹೊಸ ಹೊಸ ಹೇರ್ ಸ್ಟೈಲ್ ಮೂಲಕ ಮಿಂಚುತ್ತಿದ್ದಾರೆ. ಧೋನಿಯ ಸಮ್ಮರ್ ಕಟ್, ಬಾಲ್ಡ್ ಕಟ್, ವಿಕಿಂಗ್ ಕಟ್, ಸ್ಪೈಕ್ಡ್ ಕಟ್, ಮೊಹಾವಾಕ್ ಹೇರ್‌ಸ್ಟೈಲ್, ಪೋನಿಟೇಲ್ ಹಾಗೂ ಫಾಕ್ಸ್ ಹಾಕ್ ಹೇರ್ಸ್ಟೈಲ್ಗೆ ಯುವಜನತೆ ಫಿದಾ ಆಗಿದ್ದಾರೆ.
ಅಂದಹಾಗೆ ಹೇರ್ ಸ್ಟೈಲಿಸ್ಟ್ ಅಲೀಂ ಹಕೀಮ್ ಅವರು ಬಾಲಿವುಡ್ ತಾರೆಯರು, ಪ್ರಸಿದ್ಧ ಕ್ರೀಡಾಪಟುಗಳ ವಿಭಿನ್ನ ಹೇರ್ ಕಟಿಂಗ್‌ಗೆ ಫೇಮಸ್ ಆದವರು. ಈ ಅಲೀಮ್ ಹಕೀಮ್ ಅವರು ಬಾಲಿವುಡ್‌ನ ಹೃತಿಕ್ ರೋಷನ್, ರಣಬೀರ್ ಕಪೂರ್ ಹಾಗೂ ಸಚಿನ್ ತೆಂಡೂಲ್ಕರ್ ಅವರಂತಹ ಸೆಲೆಬ್ರಿಟಿಗಳಿಗೆ ಹೇರ್ ಸ್ಟೈಲಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಇವರ ಹೇರ್ ಕಟ್ಟಿಂಗ್ ಶುಲ್ಕ ಬರೋಬ್ಬರಿ 1 ಲಕ್ಷ ರೂಪಾಯಿಯಿಂದ ಆರಂಭವಾಗುತ್ತೆ. ಈ ಬಾರಿ ಐಪಿಎಲ್ ವೇಳೆ ಕಿಂಗ್ ಕೊಹ್ಲಿಗೆ ಹಕೀಮ್ ಅವರೇ ಹೇರ್ ಕಟ್ ಮಾಡಿದ್ದರು. ವಿರಾಟ್ ಕೊಹ್ಲಿಗೂ 1 ಲಕ್ಷ ಚಾರ್ಜ್ ಮಾಡಿದ್ರು. ಐಪಿಲ್ ವೇಳೆ ಕೊಹ್ಲಿ, ಮಾಹಿ ಹೇರ್‌ಸ್ಟೈಲ್ ಸಖತ್ ಸೌಂಡ್ ಮಾಡಿತ್ತು. ಇದೀಗ ಕೂಲ್ ಕ್ಯಾಪ್ಟನ್ ಹೊಸ ಹೇರ್ ಸ್ಟೈಲ್ ಮೂಲಕ ಟ್ರೆಂಡ್ ಸೆಟ್ ಮಾಡಿದ್ದಾರೆ.