IPLಗೂ ಧೋನಿ ಗುಡ್ ಬೈ! – Major Missing ಸೀಕ್ರೆಟ್ ಏನು?
CSK ಪೋಸ್ಟ್ ಹೇಳಿತಾ ರಹಸ್ಯ?

IPLಗೂ ಧೋನಿ ಗುಡ್ ಬೈ! – Major Missing ಸೀಕ್ರೆಟ್ ಏನು?CSK ಪೋಸ್ಟ್ ಹೇಳಿತಾ ರಹಸ್ಯ?

2025ರ ಐಪಿಎಲ್​ ಹರಾಜಿನಲ್ಲಿ ಏನೆಲ್ಲಾ ರೂಲ್ಸ್ ಇರ್ಬೋದು ಅಂತಾ ಕೆಲ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. ಆದ್ರೆ ಮತ್ತೊಂದಷ್ಟು ಅಭಿಮಾನಿಗಳಿಗೆ ಕಾಡ್ತಿರೋ ಪ್ರಶ್ನೆ ಮುಂದಿನ ಸೀಸನ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ಆಡ್ತಾರೋ ಇಲ್ವೋ ಅನ್ನೋದು. ಕೆಲವ್ರು ಚಾನ್ಸೇ ಇಲ್ಲ ಆಡಲ್ಲ ಅಂತಿದ್ರೆ ಮತ್ತೊಂದಷ್ಟು ಮಂದಿ ಮಹಿ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದೇ ಬರ್ತಾರೆ ಅಂತಿದ್ದಾರೆ. ಇದ್ಯಾವುದಕ್ಕೂ ಕ್ಲಾರಿಟಿ ಈವರೆಗೂ ಸಿಕ್ಕಿಲ್ಲ. ಬಟ್ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಸೋಶಿಯಲ್ ಖಾತೆಯಲ್ಲಿ ಹೊಸ ಪೋಸ್ಟ್​ವೊಂದನ್ನ ಹಾಕಿರೋದು ಬಾರೀ ಸದ್ದು ಮಾಡ್ತಿದೆ. ಮಾಹಿ ಫ್ಯಾನ್ಸ್ ಅಂತಾ ತಲೆಬಿಸಿ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಆ ಪೋಸ್ಟ್​ನಲ್ಲಿ ಏನಿದೆ? ಮಾಹಿ ಫ್ಯಾನ್ಸ್ ಟೆನ್ಷನ್ ಆಗಿರೋದೇಕೆ? ಚೆನ್ನೈ ತಂಡದಲ್ಲಿ ಕಾದಿದ್ಯಾ ದೊಡ್ಡ ಬದಲಾವಣೆ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ನಾಗಮಂಗಲ ಗಲಭೆ ಕೇಸ್‌ – ಅಂಗಡಿ ಮುಗ್ಗಟ್ಟುಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ ಹೆಚ್‌ಡಿಕೆ

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಒನ್ ಆಫ್ ದಿ ಸಕ್ಸಸ್​ಫುಲ್ ಟೀಂ ಅಂದ್ರೆ ಚೆನ್ನೈ ಸೂಪರ್ ಕಿಂಗ್ಸ್. 5 ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಚೆನ್ನೈ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದೇ ಮಹೇಂದ್ರ ಸಿಂಗ್ ಧೋನಿ. ಧೋನಿ ಸಿಎಸ್​ಕೆಯಲ್ಲಿ ಇದ್ದಾರೆ ಅನ್ನೋ ಒಂದೇ ಕಾರಣಕ್ಕೆ ತಮಿಳುನಾಡು ಮಾತ್ರವಲ್ಲದೆ ಬೇರೆ ರಾಜ್ಯಗಳ ಫ್ಯಾನ್ಸ್ ಕೂಡ ಆ ತಂಡಕ್ಕೆ ಸಪೋರ್ಟ್ ಮಾಡ್ತಾರೆ. ಮಹಿ ಆಟ ನೋಡೋಕಂತ್ಲೇ ಅಭಿಮಾನಿಗಳು ಸ್ಟೇಡಿಯಮ್​ಗೆ ಬರ್ತಾರೆ. ಐಪಿಎಲ್ ಟೈಮಲ್ಲಿ ಅವ್ರ ಕ್ರೇಜ್ ಹೇಗಿದೆ ಅನ್ನೋದನ್ನ ನೀವೆಲ್ಲಾ ನೋಡೇ ಇರ್ತೀರಾ. ಇದೇ ಕಾರಣಕ್ಕೆ ಫ್ರಾಂಚೈಸಿ ಕೂಡ ಮಾಹಿಯನ್ನ ಬಿಟ್ಟುಕೊಡ್ತಿಲ್ಲ. ಬಟ್ 2025ರ ಐಪಿಎಲ್​ಗೆ ಧೋನಿ ಆಡ್ತಾರೋ ಇಲ್ವೋ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಎಸ್​ಕೆ ಫ್ರಾಂಚೈಸಿ ಮಾರ್ಮಿಕವಾಗಿ ಪೋಸ್ಟ್​ವೊಂದನ್ನ ಹಾಕಿದೆ. ಅಷ್ಟಕ್ಕೂ ಏನಿದೆ ಆ ಪೋಸ್ಟ್​​ನಲ್ಲಿ ಅನ್ನೋದನ್ನೇ ಹೇಳ್ತೇನೆ ನೋಡಿ.

ಮೇಜರ್ ಮಿಸ್ಸಿಂಗ್ ಧೋನಿ! 

ಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಅತ್ಯಂತ ಯಶಸ್ವಿ ತಂಡಗಳು. ಈ ಎರಡೂ ತಂಡಗಳು ತಲಾ ಐದು ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿವೆ. ಚೆನ್ನೈ ಸೂಪರ್ ಕಿಂಗ್ಸ್ ಯಶಸ್ವಿ ಟೀಂ ಎನಿಸಿಕೊಳ್ಳುವಲ್ಲಿ ಮಹೇಂದ್ರ ಸಿಂಗ್ ಧೋನಿ ದೊಡ್ಡ ಪಾತ್ರವೇ ಇದೆ. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ಚೆನ್ನೈ ಸೂಪರ್ ಕಿಂಗ್ಸ್ ಅಂದ್ರೆ ಧೋನಿ. ಧೋನಿ ಅಂದ್ರೆ ಚೆನ್ನೈ ಸೂಪರ್ ಕಿಂಗ್ಸ್. ಧೋನಿಗೆ ಸದ್ಯ 43 ವರ್ಷ ವಯಸ್ಸಾಗಿರೋದ್ರಿಂದ ಮುಂದಿನ ಸೀಸನ್‌ನಲ್ಲಿ ಆಡುತ್ತಾರಾ ಇಲ್ವಾ ಎಂಬ ಕನ್ಫ್ಯೂಷನ್ ಇದೆ. ಋತುರಾಜ್ ಗಾಯಕ್ವಾಡ್ ಅವರಿಗೆ 2024 ರ ಸೀಸನ್​ನಲ್ಲಿ ಕ್ಯಾಪ್ಟನ್ಸಿ ನೀಡಿ ಧೋನಿ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್ ಆಗಿ ಕಣಕ್ಕಿಳಿದಿದ್ರು. ಆದ್ರೆ ಮೊಣಕಾಲಿನ ನೋವಿನಿಂದ ಬಳಲುತ್ತಿರೋ ಧೋನಿ ಕೊನೆಯ ಓವರ್​ಗಳಲ್ಲಿ ಕ್ರೀಸ್​ಗೆ ಆಗಮಿಸಿದ್ರೂ ಕೂಡ ಬೌಂಡರಿ, ಸಿಕ್ಸರ್​ಗಳ ಮೂಲಕ ಅಭಿಮಾನಿಗಳನ್ನ ರಂಜಿಸಿದ್ದರು. ಹೀಗಾಗಿ 2025ರಲ್ಲೂ ಆಡ್ತಾರೆ ಅನ್ನೋದು ಅಭಿಮಾನಿಗಳ ಆಸೆ. ಆದರೆ, ಚೆನ್ನೈ ಸೂಪರ್ ಕಿಂಗ್ಸ್​  ಮಾಡಿರುವ ಟ್ವೀಟ್ ಕೋಲಾಹಲ ಎಬ್ಬಿಸಿದೆ. ವಿಜಲ್​, 7ನೇ ನಂಬರ್​ ಜರ್ಸಿ, ಸಿಎಸ್ಕೆ ಧ್ವಜ ಮತ್ತು ಚೆಪಾಕ್ ಕ್ರೀಡಾಂಗಣವನ್ನು ಹೊಂದಿರುವ ಫೋಟೋವನ್ನ ಹಂಚಿಕೊಂಡು ಮೇಜರ್ ಮಿಸ್ಸಿಂಗ್ ಎಂದು ಶೀರ್ಷಿಕೆ ನೀಡಿದೆ. ಧೋನಿ ಜರ್ಸಿ ಹಂಚಿಕೊಂಡು ಮೇಜರ್ ಮಿಸ್ಸಿಂಗ್ ಎಂದು ಹಾಕಿಕೊಂಡಿರೋದಕ್ಕೆ ಧೋನಿ ಮುಂದಿನ ಆವೃತ್ತಿಯಲ್ಲಿ ಆಡುವುದಿಲ್ಲವೇನೋ ಎಂದು ಅವ್ರ ಫ್ಯಾನ್ಸ್ ಟೆನ್ಷನ್ ಆಗಿದ್ದಾರೆ. ಶೀಘ್ರದಲ್ಲೇ ಐಪಿಎಲ್​ನಿಂದಲೂ ನಿವೃತ್ತಿ ಘೋಷಿಸಲಿದ್ದಾರೆ ಎಂದು ಚರ್ಚೆಯಾಗ್ತಿದೆ.

ಟೀಂ ಇಂಡಿಯಾ ಮತ್ತು ಐಪಿಎಲ್​ ಕಂಡ ಲೆಜೆಂಡರಿ ಲೀಡರ್ ಮಾಹಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ.  2007ರ ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನ ಭಾರತಕ್ಕೆ ಗೆಲ್ಲಿಸಿಕೊಟ್ಟ ನಾಯಕ. ಹಾಗೇ ಸಿಎಸ್​ಕೆ ಕ್ಯಾಪ್ಟನ್ ಆಗಿ ಚೆನ್ನೈಗೆ 5 ಬಾರಿ ಚಾಂಪಿಯನ್ ಟ್ರೋಫಿ ತಂದು ಕೊಟ್ಟಿದ್ದಾರೆ. ಕ್ಯಾಪ್ಟನ್ಸಿಯಿಂದ ಇಳಿದಾಗ್ಲೂ ಟೀಂನ ಯಂಗ್ ಪ್ಲೇಯರ್ಸ್​ಗೆ ಬ್ಯಾಕ್ ಬೋನ್ ಆಗಿ ಸಪೋರ್ಟ್ ಮಾಡುತ್ತಿದ್ದಾರೆ. 2008ರಲ್ಲಿ ಐಪಿಎಲ್‌ ಆರಂಭವಾದಾಗ್ಲೇ ಸಿಎಸ್​ಕೆ ನಾಯಕನಾಗಿ ಜರ್ನಿ ಆರಂಭಿಸಿದ್ದ ಮಾಹಿ ಸ್ಪಾಟ್ ಫಿಕ್ಸಿಂಗ್ ಕೇಸ್​ ವೇಳೆ   ಎರಡು ವರ್ಷಗಳನ್ನ ಹೊರತುಪಡಿಸಿದ್ರೆ ಸಿಎಸ್‌ಕೆ ಫ್ರಾಂಚೈಸಿಯಲ್ಲೇ ಇದ್ದಾರೆ. ನಾಯಕನಾಗಿ 212 ಐಪಿಎಲ್ ಪಂದ್ಯಗಳಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 128 ಪಂದ್ಯದಲ್ಲಿ ತಂಡವನ್ನು ಗೆಲ್ಲಿಸುವಲ್ಲಿ ಸಕ್ಸಸ್ ಆಗಿದ್ದಾರೆ. 2020ರ ಆಗಸ್ಟ್ 15ರಂದು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ ಮಾಹಿ, 2025ರ ಐಪಿಎಲ್‌ ಬಳಿಕ ಇಲ್ಲೂ ವಿದಾಯ ಹೇಳುವ ಸಾಧ್ಯತೆ ದಟ್ಟವಾಗಿದೆ. ಇದೀಗ ಸಿಎಸ್​ಕೆ ಸೋಶಿಯಲ್ ಮೀಡಿಯಾದ ಈ ಪೋಸ್ಟ್ ಬಾರೀ ಕುತೂಹಲ ಮೂಡಿಸಿದ್ದು, ಧೋನಿ ಇನ್ನೆಂದೂ ಕ್ರೀಸ್​ಗೆ ಇಳಿಯಲ್ವ ಅನ್ನೋ ಚರ್ಚೆ ಶುರುವಾಗಿದೆ.

Shwetha M

Leave a Reply

Your email address will not be published. Required fields are marked *