ಒಂದೇ ಒಂದು ಪಂದ್ಯವನ್ನಾಡದೆ ಫ್ಯಾನ್ಸ್‌ಗೆ ಬೇಸರ ಮಾಡಿದ ಧೋನಿ – ಐಪಿಎಲ್ ಮುಗಿಯುವ ಮುನ್ನವೇ ತಲಾ ರಾಂಚಿಗೆ ವಾಪಸ್

ಒಂದೇ ಒಂದು ಪಂದ್ಯವನ್ನಾಡದೆ ಫ್ಯಾನ್ಸ್‌ಗೆ ಬೇಸರ ಮಾಡಿದ ಧೋನಿ – ಐಪಿಎಲ್ ಮುಗಿಯುವ ಮುನ್ನವೇ ತಲಾ ರಾಂಚಿಗೆ ವಾಪಸ್

ಚೆನ್ನೈ ಸೂಪರ್‌ಕಿಂಗ್ಸ್ ಪ್ಲೇಆಫ್‌ನಿಂದ ಹೊರಬಿದ್ದಿದೆ. ಇದರೊಂದಿಗೆ ಅಭಿಮಾನಿಗಳಿಗೆ ಮತ್ತೊಂದು ಬೇಸರದ ಸುದ್ದಿಯೂ ಸಿಕ್ಕಿದೆ. ಒಂದೇ ಒಂದು ಪಂದ್ಯವನ್ನಾಡದೇ ಎಂ.ಎಸ್ ಧೋನಿ ತನ್ನ ತವರಿಗೆ ವಾಪಾಸಾಗಿದ್ದಾರೆ.

ಇದನ್ನೂ ಓದಿ:ಕಣ್ಣಲ್ಲಿ ನೀರು.. ಮೈದಾನದಲ್ಲಿ ಹೆಜ್ಜೆ – ಸದ್ದಿಲ್ಲದೆ ಹೊರ ನಡೆದರಾ ಧೋನಿ?

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬರೀ ಚೆನ್ನೈ ಫ್ಯಾನ್ಸ್ ಮಾತ್ರವಲ್ಲ. ಕೋಟಿ ಕೋಟಿ ಫ್ಯಾನ್ಸ್ ಇದ್ದಾರೆ. ಅದಕ್ಕೆ ಕಾರಣ ಚೆನ್ನೈ ತಂಡದ ಭಾಗವಾಗಿರುವ ಎಂ.ಎಸ್ ಧೋನಿ. ಧೋನಿಗಾಗಿ ಸಿಎಸ್‌ಕೆ ಪಂದ್ಯ ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಆದರೆ, ಈ ಬಾರಿ ತಲಾ ಕಣಕ್ಕಿಳಿಯಲೇ ಇಲ್ಲ. ಈ ನೋವು ಅಭಿಮಾನಿಗಳಲ್ಲಿದೆ. ಎಂಎಸ್ ಧೋನಿ ಈ ಸೀಸನ್‌ನಲ್ಲಿ ಆಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಒಂದೇ ಒಂದು ಪಂದ್ಯ ಆಡಿಲ್ಲ. ಅಂತಿಮ ಲೀಗ್ ಪಂದ್ಯದಲ್ಲೂ ಧೋನಿ ಆಡಲ್ಲ ಅನ್ನೋ ಸುದ್ದಿ ಸಿಕ್ಕಿದೆ. ತಂಡ ಈಗಾಗಲೇ ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದಿರುವುದರಿಂದ ಧೋನಿ ರಾಂಚಿಗೆ ಮರಳಿದ್ದಾರೆ.

ಐಪಿಎಲ್ 2026 ರ ಲೀಗ್ ಹಂತ ಮುಗಿಯಲು ಕೆಲವೇ ಪಂದ್ಯಗಳು ಬಾಕಿ ಇವೆ. ಸಿಎಸ್‌ಕೆ ತಂಡ ಲೀಗ್‌ ಹಂತದಲ್ಲೇ ತನ್ನ ಪ್ರಯಾಣ ಮುಗಿಸಿದೆ. ಆಡಿರುವ 13 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳನ್ನು ಗೆದ್ದಿರುವ ಸಿಎಸ್​ಕೆ ಪ್ಲೇಆಫ್‌ ರೇಸ್​ನಿಂದ ಹೊರಬಿದ್ದಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ಅಂತಿಮ ಪಂದ್ಯ ಗುಜರಾತ್ ಟೈಟಾನ್ಸ್ ವಿರುದ್ಧ ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಆ ಪಂದ್ಯದಲ್ಲಿ ಧೋನಿ ಆಡುವುದಿಲ್ಲ. ಧೋನಿ ಈಗಾಗಲೇ ತಂಡವನ್ನು ತೊರೆದು ರಾಂಚಿಗೆ ಅಂದರೆ ಅವರ ಮನೆಗೆ ಮರಳಿದ್ದಾರೆ ಎಂದು ವರದಿಯಾಗಿದೆ. ಧೋನಿ ಕೈಗೆ ಗ್ಲೌಸ್ ತೊಡಬೇಕು. ಧೋನಿ ಬ್ಯಾಟಿಂಗ್ ನೋಡಬೇಕು ಎಂದು ಕಾದಿರುವ ಕೋಟಿ ಕೋಟಿ ಫ್ಯಾನ್ಸ್ ಫುಲ್ ನಿರಾಶರಾಗಿದ್ದಾರೆ.

Sulekha

Leave a Reply

Your email address will not be published. Required fields are marked *