ಅಬ್ಬಬ್ಬಾ.. ಇದೆಂಥಾ ಹುಚ್ಚು ಅಭಿಮಾನ – ಮಕ್ಕಳ ಸ್ಕೂಲ್ ಫೀಸ್ ಹಣದಲ್ಲಿ ಐಪಿಎಲ್ ಟಿಕೆಟ್ ಖರೀದಿಸಿದ್ದ ಧೋನಿ ಫ್ಯಾನ್!
ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿಗೆ ಇಡೀ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅದರಲ್ಲಿಯೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಸಾಕಷ್ಟು ಮಂದಿ ಇದ್ದಾರೆ. ಅದರಂತೆ ತಮ್ಮ ನೆಚ್ಚಿನ ಆಟಗಾರನನ್ನು ಕ್ರೀಡಾಂಗಣದಲ್ಲಿ ಕಣ್ತುಂಬಿಸಿಕೊಳ್ಳಲು ತುಂಬಾನೇ ಕಾತುರರಾಗಿರುತ್ತಾರೆ. ಇದೀಗ ಇಲ್ಲೊಬ್ಬ ಹುಚ್ಚು ಅಭಿಮಾನಿ ಎಂಎಸ್ ಧೋನಿಯನ್ನು ಎದುರಿನಿಂದ ನೋಡಲು ತೆಗೆದುಕೊಂಡ ನಿರ್ಧಾರ ಎಲ್ಲರಿಗೂ ಶಾಕ್ ಆಗಿದೆ.
ಇದನ್ನೂ ಓದಿ: ಅಯ್ಯಯ್ಯೋ.. ಪುರುಷ ಸಿಬ್ಬಂದಿಯ ಮುಂದೆಯೇ ಬಟ್ಟೆ ಬಿಚ್ಚಿ ಟ್ರಯಲ್ ನೋಡಿದ ಯುವತಿ!
ತಮ್ಮ ಮೆಚ್ಚಿನ ಕ್ರಿಕೆಟ್ ಆಟಗಾರನನ್ನು ಹಾಗೂ ಮೆಚ್ಚಿನ ತಂಡದ ಆಟವನ್ನು ಕಣ್ಣಾರೆ ನೋಡಲು ಅನೇಕ ಅಭಿಮಾನಿಗಳು ಸಾಕಷ್ಟು ಪ್ರಯತ್ನ ಪಡುತ್ತಾರೆ. ಅದರಲ್ಲಿಯೂ ಐಪಿಎಲ್ ನಲ್ಲಿ ನೀವು ನೋಡಿದಂತೆ ಈ ಬಾರಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಭಿಮಾನಿಗಳು ತಮ್ಮ ಮೆಚ್ಚಿನ ಆಟಗಾರನನ್ನು ನೋಡಲು ಮೈದಾನಕ್ಕೆ ನುಗ್ಗಿದ ಘಟನೆಗಳು ಜರುಗಿದ್ದವು. ಚೆಪಾಕ್ ನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ವೇಳೆ ಎಂಎಸ್ ಧೋನಿಯನ್ನು ಎದುರಿನಿಂದ ನೋಡಲು ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳ ಶಾಲಾ ಶುಲ್ಕ 64,000 ಹಣದಲ್ಲಿ ಐಪಿಎಲ್ ಪಂದ್ಯದ ಟಿಕೆಟ್‌ಗಳನ್ನು ಖರೀದಿಸಿದ್ದಾರೆ.
ಹೌದು, ಅಚ್ಚರಿಯಾದ್ರು ಸತ್ಯ.. ಚೆನ್ನೈ ಮತ್ತು ಕೆಕೆಆರ್ ನಡುವಿನ ಪಂದ್ಯವು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಸಿಎಸ್‌ಕೆ ತಂಡವು ಭರ್ಜರಿ ಗೆಲುವು ದಾಖಲಿಸಿತು. ಆದರೆ ಚೆನ್ನೈ ತಂಡದ ಹಾಗೂ ಎಂಎಸ್ ಧೋನಿ ಅವರ ಅಭಿಮಾನಿಯೊಬ್ಬ ತಮ್ಮ ತಂಡಕ್ಕೆ ಸಪೋರ್ಟ್ ಮಾಡಲು ಮತ್ತು ಒಮ್ಮೆಯಾದರೂ ಧೋನಿ ಅವರನ್ನು ಮೈದಾನದಲ್ಲಿ ಲೈವ್ ಆಗಿ ನೋಡುವುದಕ್ಕಾಗಿ ಮಕ್ಕಳ ಸ್ಕೂಲ್ ಫೀಸ್ ಹಣದಿಂದ ಈ ಪಂದ್ಯದ ಟಿಕೆಟ್ ಖರೀದಿಸಿದ್ದಾರೆ. ಧೋನಿ ಅವರನ್ನು ಖುದ್ದಾಗಿ ನೋಡಲು ಬಾಲಕಿಯರ ಶಾಲಾ ಶುಲ್ಕವನ್ನು ಪಾವತಿಸದೆ ಬ್ಲ್ಯಾಕ್ ಮಾರ್ಕೆಟ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಟಿಕೆಟ್‌ಗಳನ್ನು ಖರೀದಿಸಿದ ವ್ಯಕ್ತಿ ಎಂದು ತಿಳಿದುಬಂದಿದೆ. ಈ ವಿಚಾರವನ್ನು ಸ್ವತಃ ಧೋನಿ ಅವರೇ ಹೇಳಿದ್ದಾರೆ. ಆ ಅಭಿಮಾನಿ ಪಂದ್ಯದ ಟಿಕೆಟ್ ಖರೀದಿಸಲು ಒಟ್ಟು 64 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಅವರೇ ಹೇಳಿದ್ದಾರೆ.
ವೈರಲ್ ವೀಡಿಯೊದಲ್ಲಿ, ಈ ಸಿಎಸ್‌ಕೆ ಅಭಿಮಾನಿ, ನನಗೆ ಟಿಕೆಟ್ ಸಿಗಲಿಲ್ಲ, ಆದ್ದರಿಂದ ನಾನು ಬ್ಲ್ಯಾಕ್ ಮಾರ್ಕೆಟ್ ನಲ್ಲಿ ಟಿಕೆಟ್ ಖರೀದಿಸಿದೆ. ಈ ಟಿಕೆಟ್‌ನ ಒಟ್ಟು ಬೆಲೆ 64 ಸಾವಿರ ರೂಪಾಯಿ. ಇದರಿಂದಾಗಿ ಹೆಣ್ಣು ಮಕ್ಕಳ ಶಾಲಾ ಶುಲ್ಕ ಕಟ್ಟಲು ಸಾಧ್ಯವಾಗುತ್ತಿಲ್ಲ. ಆದರೆ ನಾವೆಲ್ಲರೂ ಧೋನಿಯನ್ನು ಖುದ್ದಾಗಿ ನೋಡಲು ಬಯಸಿದ್ದೆವು. ಧೋನಿ ಆಟವನ್ನು ನೋಡಿ ನಮಗೆಲ್ಲರಿಗೂ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ. ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.