ಆಟ ಆಡದಿದ್ರೂ ಪ್ರಾಕ್ಟೀಸ್ ಯಾಕೆ? – ಫ್ಯಾನ್ಸ್‌ಗಾಗಿ ಧೋನಿನೇ CSK ಅಸ್ತ್ರನಾ?
IPL ಆಡದೇ ಕಣ್ಮರೆಯಾಗ್ತಾರಾ MSD?

ಆಟ ಆಡದಿದ್ರೂ ಪ್ರಾಕ್ಟೀಸ್ ಯಾಕೆ? – ಫ್ಯಾನ್ಸ್‌ಗಾಗಿ ಧೋನಿನೇ CSK ಅಸ್ತ್ರನಾ?IPL ಆಡದೇ ಕಣ್ಮರೆಯಾಗ್ತಾರಾ MSD?

ಐಪಿಎಲ್‌ನ ಒಂದಷ್ಟು ಜನ ಕ್ರೇಜ್‌ಗೆ ನೋಡಿದ್ರೆ, ಮತ್ತೊಂದಷ್ಟು ಜನ ನಮ್ಮ ತಂಡ ನಮ್ಮ ರಾಜ್ಯದ ತಂಡ ಅಂತ ನೋಡ್ತಾರೆ. ಇನ್ನೂ ಕೆಲವಷ್ಟು ಜನ ವಿರಾಟ್ ಕೊಹ್ಲಿಗಾಗಿ, ಎಂಎಸ್‌ ಧೋನಿಗಾಗಿ, ರೋಹಿತ್ ಶರ್ಮಾಗಾಗಿ ನೋಡ್ತಾರೆ. ಇವರು ಇರೋ ತಂಡಕ್ಕೆ ಸಪೋರ್ಟ್ ಮಾಡ್ತಾರೆ. ಅದರಲ್ಲೂ ತಮಿಳುನಾಡನ್ನ ಬಿಡಿ, ನಮ್ಮ ರಾಜ್ಯದಲ್ಲಿರೋ ಸಿಎಸ್‌ಕೆ ಪ್ಯಾನ್ಸ್‌, ನೀವು ಕರ್ನಾಟಕದವರಾಗಿ ಯಾಕೆ ಚೆನ್ನೈ ತಂಡವನ್ನ ಸಪೋರ್ಟ್ ಮಾಡ್ತೀರಾ ಅಂತ ಕೇಳಿದ್ರೆ ಅವರು ಹೇಳುವುದು ಒಂದೇ ಮಾತು. ಎಂಎಸ್‌ ಧೋನಿಗಾಗಿ ಅಂತ.. ಆದ್ರೆ ಈ ಸಲ ಎಂಎಸ್ ಧೋನಿ ಒಂದೇ ಒಂದು ಮ್ಯಾಚ್ ಆಡಿಲ್ಲ. ಇಂಜುರಿಯಿಂದ ಆಡದೇ ಹೊರಗುಳಿದಿರುವ MSD, ಪ್ರಾಕ್ಟೀಸ್ ಮಾತ್ರ ಮಾಡುತ್ತಿದ್ದಾರೆ. ಆದ್ರೆ ಪ್ಲೇಯಿಂಗ್ 11ನಲ್ಲಿ ಆಡುತ್ತಿಲ್ಲ. ನಮ್ಮ ತಲಾ ಈ ಪಂದ್ಯಕ್ಕೆ ಬರ್ತಾರೆ, ಮುಂದಿನ ಪಂದ್ಯಕ್ಕೆ ಬರ್ತಾರೆ ಕಾದು ಕಾದು ಫ್ಯಾನ್ಸ್ ಕೂಡ ಸುಸ್ತಾಗಿದ್ದಾರೆ. ಹಾಗಿದ್ರೆ  ಪ್ರಾಕ್ಟೀಸ್ ಮಾಡೋ ಧೋನಿ, ಯಾಕೆ ಆಡ್ತಿಲ್ಲ ಅನ್ನೋದ್ದನ್ನ ನೋಡೋಣ.

ಪ್ರಾಕ್ಟೀಸ್‌ಗೆ ಬರ್ತಾರೆ, ಪ್ರಾಕ್ಟೀಸ್‌ನಲ್ಲಿ ಚೆನ್ನಾಗಿಯೇ ಆಡ್ತಾರೆ. ಆದ್ರೆ ಮ್ಯಾಚ್‌ನಲ್ಲಿ ಇರೋದೇ ಇಲ್ಲ.. ಇವತ್ತು ಬರ್ತಾರೆ.. ನಾಳೆ ಬರ್ತಾರೆ ಅಂತ ಕಾದು ಕಾದು ಧೋನಿ ಫ್ಯಾನ್ಸ್ ಸುಸ್ತಾಗಿ ಹೋಗಿದ್ದಾರೆ.  ಯಾಕಂದ್ರೆ ಐಪಿಎಲ್ ಬಂದ್ರೆ ಎಂ.ಎಸ್. ಧೋನಿ ಅವರದ್ದೇ ಸದ್ದು! ಈ ಬಾರಿಯೂ ಅಭಿಮಾನಿಗಳು ‘ಕ್ಯಾಪ್ಟನ್ ಕೂಲ್’  ಅಬ್ಬರ ನೋಡಲು ಕಾದು ಕುಳಿತಿದ್ದಾರೆ. ಆದರೆ ಈ ಸೀಸನ್‌ನಲ್ಲಿ ಧೋನಿ ಇದುವರೆಗೆ ಒಂದೇ ಒಂದು ಪಂದ್ಯದಲ್ಲೂ ಕಾಣಿಸಿಕೊಂಡಿಲ್ಲ. ಪ್ರಾಕ್ಟೀಸ್ ಮಾಡ್ತೀರೋ ಎಂಎಸ್ ದೋನಿ ಯಾಕೆ ಮ್ಯಾಚ್‌ನಲ್ಲಿ ಆಡ್ತಿಲ್ಲ ಅನ್ನೋ ಪ್ರಶ್ನೆ ಕಾಡ್ತಿದೆ.  ಚಾಕಲೇಟ್ ಆಸೆ ತೋರಿಸಿ ಮಕ್ಕಳ ಅಳು ನಿಲ್ಲಿಸಿದ ಹಾಗೇ ಎಂಎಸ್ ಧೋನಿಯನ್ನ ತೋರಿಸಿ, ಚೆನ್ನೈ ಫ್ಯಾನ್ಸ್‌ಗೆ ಆಸೆ ತೋರಿಸುತ್ತಿದೆ.

ಎಂ ಎಸ್ ಧೋನಿ ಪ್ರಾಕ್ಟೀಸ್‌ನಲ್ಲಿ ತಂಬಾ ಜೋಶ್‌ನಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಎಂಎಸ್ ಧೋನಿ ಪ್ರಾಕ್ಟೀಸ್  ವಿಡಿಯೋ ನೋಡಿ ಸಿಎಸ್‌ಕೆ ಪರ ಆಡ್ತಾರೆ ಅಂತ ಅಂದುಕೊಂಡ್ರೆ ಎಲ್ಲಾ ಉಲ್ವಾ.  ಟಾಸ್ ವೇಳೆ ಪ್ಲೇಯಿಂಗ್ ಇಲೆವೆನ್ ಘೋಷಣೆಯಾದಾಗ ಮತ್ತೆ ನಿರಾಸೆ. ಯಾಕಂದ್ರೆ ಆ ಪಂದ್ಯದಲ್ಲಿ ಧೋನಿ ಇರಲ್ಲ.. ಐಪಿಎಲ್ ಲೀಗ್ ಹಂತದ ಅರ್ಧಕ್ಕರ್ಧ ಪಂದ್ಯಗಳು ಮುಗಿದವು. ಆದರೂ ಧೋನಿಯ ಪತ್ತೆ ಇಲ್ಲ. ಈಗಲೂ ಬಾರದಿದ್ದರೆ ಇನ್ನುಯಾವಾಗ ಎಂಬ ಪ್ರಶ್ನೆಯನ್ನು ಸಹಜವಾಗಿಯೇ ಅಭಿಮಾನಿಗಳು ಕೇಳುತ್ತಿದ್ದಾರೆ. ಚೆನ್ನೈ ಫ್ರಾಂಚೈಸಿ ಧೋನಿ ಹೆಸರಲ್ಲಿ ಫ್ಯಾನ್ಸ್‌ ಗೆ ಚೀಟ್ ಮಾಡ್ತಾ ಇದ್ಯಾ ಅನ್ನೋ ಪ್ರಶ್ನೆ ಎದ್ದಿದೆ.

ಐಪಿಎಲ್ 2026 ಆರಂಭವಾದಾಗ, ಧೋನಿ ಅವರು ಮೊದಲ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಎರಡು ದಿನ ಕಳೆದು ಈ ಸುಮಾರು ದಿನಗಳಾಗಿವೆ.  ಚೆನ್ನೈ ತಂಡದ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ  ಧೋನಿ ಪ್ರಾಕ್ಟೀಸ್ ವಿಡಿಯೋ  ಪೋಸ್ಟ್ ಆಗುತ್ತಿವೆ. ಆದರೆ, ತಂಡದ ಬಸ್ ಸ್ಟೇಡಿಯಂಗೆ ಬರುವಾಗ ಅದರಲ್ಲಿ ಧೋನಿ ಇರುವುದಿಲ್ಲ. ಟಾಸ್ ಸಮಯದಲ್ಲಿ ನಾಯಕ ರುತುರಾಜ್ ಗಾಯಕ್ವಾಡ್ ಅವರು ಧೋನಿ ಅವರ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದು ಅಭಿಮಾನಿಗಳ ಸಿಟ್ಟನ್ನು ಹೆಚ್ಚಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ “ನಮ್ಮ ಭಾವನೆಗಳ ಜೊತೆ ಆಟವಾಡಬೇಡಿ” ಎಂದು ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ಗೆ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಕೆಲವರು ಧೋನಿ ಈಗಾಗಲೇ ಸಕ್ರಿಯ ಕ್ರಿಕೆಟ್‌ನಿಂದ ಹಿಂದೆ ಸರಿದು, ತಂಡಕ್ಕೆ ಮೆಂಟರ್ ಆಗಿ ಕೆಲಸ ಮಾಡುತ್ತಿರಬಹುದು ಅಂತಿದ್ದಾರೆ. ಧೋನಿ ಈ ಸೀಸನ್‌ನಲ್ಲಿ ಆಡ್ತಾರಾ ಇಲ್ವಾ ಅನ್ನೋ ಪ್ರಶ್ನೆಗೆ ಉತ್ತರವಿಲ್ಲ.

ಆಡದಿದ್ರೂ ಧೋನಿಗೆ ಸಿಗುತ್ತಾ ಕೋಟಿ ಕೋಟಿ ಹಣ? 

ಇನ್ನೂ ಎಂಎಸ್ ಧೋನಿ ಈ ಸೀಸನ್‌ನಲ್ಲಿ ಒಂದೇ ಒಂದು ಪಂದ್ಯ ಆಡಿಲ್ಲ. ಆದ್ರೂ ಇವರಿಗೆ ಹಣ ಸಿಗುತ್ತಾ ಅನ್ನೋ ಫ್ಯಾನ್ಸ್‌ಗಳಿಗೆ ಕಾಡುತ್ತಿದೆ.  2026 ರ ಐಪಿಎಲ್ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎಂಎಸ್ ಧೋನಿ ಅವರನ್ನು ಅನ್‌ಕ್ಯಾಪ್ಡ್ ಆಟಗಾರನ ವಿಭಾಗದ ಅಡಿಯಲ್ಲಿ 4 ಕೋಟಿ ರೂಪಾಯಿಗಳಿಗೆ ಉಳಿಸಿಕೊಂಡಿದೆ. ಆದ್ರೆ ಧೋನಿ ಇಲ್ಲಿ ತನಕ ಒಂದೇ ಒಂದು ಪಂದ್ಯ ಆಡಿಲ್ಲ, ಮುಂದೆ ಆಡ್ತಾರಾ ಇಲ್ವಾ ಗೊತ್ತಿಲ್ಲ. ಒಂದು ವೇಳೆ ಆಡಿಲ್ಲ ಅಂದ್ರೆ 4 ಕೋಟಿ ಹಣ ಇವರಿಗೆ ಸಿಗುತ್ತಾ ಸಿಗಲ್ವಾ ಅನ್ನೋದು ಪ್ರಶ್ನೆ..

ಬಿಸಿಸಿಐ ನಿಯಮಗಳು ಏನು ಹೇಳುತ್ತೆ ಅಂದ್ರೆ  ಒಬ್ಬ ಆಟಗಾರನು ಟೂರ್ನಿ ಆರಂಭಕ್ಕೂ ಮುನ್ನವೇ ತಂಡವನ್ನು ಸೇರಿಕೊಂಡು ಅಭ್ಯಾಸ ಶಿಬಿರಗಳಲ್ಲಿ ಭಾಗವಹಿಸಿದರೆ, ಅವರು ಆ ಋತುವಿನ ಭಾಗವೆಂದು ಪರಿಗಣಿಸಲ್ಪಡುತ್ತಾರೆ. ಒಂದು ವೇಳೆ ಪಂದ್ಯಾವಳಿ ನಡೆಯುತ್ತಿರುವ ಸಮಯದಲ್ಲಿ ಆಟಗಾರ ಗಾಯಗೊಂಡರೆ ಅಥವಾ ಫಿಟ್ನೆಸ್ ಕಾರಣಗಳಿಂದ ಪಂದ್ಯಗಳಿಂದ ಹೊರಗುಳಿದರೆ, ಅವರ ಮೂಲ ವೇತನಕ್ಕೆ ಯಾವುದೇ ಕಡಿತ ಉಂಟಾಗುವುದಿಲ್ಲ. ಧೋನಿ ಅವರು ಈ ಋತುವಿನ ಆರಂಭದಿಂದಲೂ ತಂಡದ ಜೊತೆಗಿದ್ದಾರೆ ಮತ್ತು ಚೆಪಾಕ್ ಮೈದಾನದಲ್ಲಿ ಅಭ್ಯಾಸ ಕೂಡ ನಡೆಸಿದ್ದಾರೆ. ಹೀಗಾಗಿ ಐಪಿಎಲ್ ನಿಯಮಗಳ ಅಡಿಯಲ್ಲಿ ಅವರ 4 ಕೋಟಿ ರೂಪಾಯಿಗಳ ಮೂಲ ವೇತನ ಅವರಿಗೆ ಸಿದ್ದಾರೆ.  ಇನ್ನು ಮೂಲ ವೇತನವು ಸುರಕ್ಷಿತವಾಗಿದ್ದರೂ, ಪಂದ್ಯದ ಶುಲ್ಕ ಸಿಗಲ್ಲ. ಯಾಕಂದ್ರೆ ಪಂದ್ಯದ ಶುಲ್ಕ ಪಡೆಯಬೇಕಾದ್ರ ಆಟಗಾರನು ಆ ಪಂದ್ಯದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಇರಬೇಕು ಅಥವಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೈದಾನಕ್ಕೆ ಬರಬೇಕು. ಧೋನಿ ಅವರು ಈವರೆಗೆ ಯಾವುದೇ ಪಂದ್ಯದಲ್ಲಿ ಆಡದ ಕಾರಣ, ಅವರು ಆ ಪಂದ್ಯಗಳ ಹೆಚ್ಚುವರಿ ಶುಲ್ಕವನ್ನು ಕಳೆದುಕೊಳ್ಳಲಿದ್ದಾರೆ.

ಒಟ್ಟಿನಲ್ಲಿ, ಧೋನಿ ಕೇವಲ ಒಬ್ಬಆಟಗಾರನಲ್ಲ; ಅವರು ಸಿಎಸ್‌ಕೆ ತಂಡದ ಅವಿಭಾಜ್ಯ ಶಕ್ತಿ ಮತ್ತು ಬ್ರ್ಯಾಂಡ್. ಅವರು ಮೈದಾನದಲ್ಲಿ ಬ್ಯಾಟ್ ಬೀಸಲಿ ಅಥವಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತು ಪ್ಲಾನ್ ಮಾಡಲಿ, ಅವರ ಉಪಸ್ಥಿತಿಯೇ ತಂಡಕ್ಕೆ ಮತ್ತು ಟೂರ್ನಿಗೆ ಕೋಟ್ಯಂತರ ರೂಪಾಯಿಗಳ ಮೌಲ್ಯ ತಂದುಕೊಡುತ್ತದೆ.  ಹೀಗಾಗಿ ಈ ಸೀಸನ್‌ನಲ್ಲಿ ಅವರು ಕಣಕ್ಕಿಳಿಯುತ್ತಾರಾ? ಇಲ್ವಾ ಅನ್ನೋದೇ ಯಕ್ಷ ಪ್ರಶ್ನೆ.

Kishor KV