CSKಗಾಗಿ ಧೋನಿ ಸಾಮ್ರಾಜ್ಯ ಪತನ – 3 ICC, 5 IPL ಟ್ರೋಫಿಗಿಲ್ವಾ ಬೆಲೆ?
ಫ್ರಾಂಚೈಸಿ ಮೋಹಕ್ಕೆ ಮಾಹಿ ಬಲಿಪಶು

ಮಹೇಂದ್ರ ಸಿಂಗ್ ಧೋನಿ. ಟೀಂ ಇಂಡಿಯಾ ಹಾಗೇ ಐಪಿಎಲ್ ಕಂಡಂತಹ ಯಶಸ್ವೀ ನಾಯಕ. ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಹಾಗೇ ಚೆನ್ನೈಗೆ ಐದು ಕಪ್ಗಳನ್ನ ಗೆಲ್ಲಿಸಿಕೊಟ್ಟ ಸೂಪರ್ ಹೀರೋ. ಹೀಗಾಗೇ ಧೋನಿ ಅಂದ್ರೆ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಫ್ಯಾನ್ಸ್ ಇದ್ದಾರೆ. ಐಪಿಎಲ್ನಲ್ಲಿ ಸಿಎಸ್ಕೆ ಇಷ್ಟು ದೊಡ್ಡ ಮಟ್ಟಿಗಿನ ಪ್ರಸಿದ್ಧಿ ಪಡೆಯೋಕೆ ಕಾರಣವೂ ಧೋನಿ. ಆದ್ರೀಗ ಅದೇ ಧೋನಿ ಹೆಸರಿಗೆ ಅಪಮಾನ ಆಗ್ತಿದೆ. ಚೆನ್ನೈ ಫ್ರಾಂಚೈಸಿಯ ದಾಹಕ್ಕೆ ಧೋನಿ ಬಲಿಪಶುವಾಗ್ತಿದ್ದಾರೆ. ದಶಕಗಳ ಕಾಲ ಕಟ್ಟಿದ್ದ ಸಾಮ್ರಾಜ್ಯ ಕುಸಿದು ಬೀಳ್ತಿದೆ. ಇಷ್ಟು ದಿನ ಧೋನಿ ಕ್ರೀಸ್ಗೆ ಬಂದ್ರೆ ಸಾಕು ಅಂತಿದ್ದ ಫ್ಯಾನ್ಸ್ ನಿಮ್ಮಾಟ ಸಾಕು ಧೋನಿ ಅಂತಿದ್ದಾರೆ. ಒಂದು ಫ್ರಾಂಚೈಸಿಗಾಗಿ ಧೋನಿ ಕರಿಯರ್ನೇ ಒತ್ತೆ ಇಟ್ರಾ ಅನ್ನೋ ಪ್ರಶ್ನೆಗಳು ಮೂಡಿವೆ.
ಇದನ್ನೂ ಓದಿ : RCBಗೆ ಬುಮ್ರಾ ಎಂಟ್ರಿಯೇ ಸವಾಲ್.. ಕೊಹ್ಲಿ & ಸಾಲ್ಟ್ ಸಿಡಿದ್ರೆ ಗೆಲುವು ಫಿಕ್ಸ್ – ಬ್ಯಾಟಿಂಗ್ ಫ್ಲಾಪ್.. MI ವೀಕ್ನೆಸ್ ಏನು?
ಕಳೆದ ಮೂರ್ನಾಲ್ಕು ವರ್ಷಗಳಿಂದ ಐಪಿಎಲ್ನಲ್ಲಿ ಧೋನಿ ನಿವೃತ್ತಿ ಬಗ್ಗೆ ಚರ್ಚೆಯಾಗ್ತಾನೇ ಇದೆ. ಆದ್ರೆ ಅದ್ಯಾವುದಕ್ಕೂ ಸೊಪ್ಪು ಹಾಕದ ಧೋನಿ ನಾಯಕತ್ವ ಬಿಟ್ಟು ಆಟಗಾರನಾಗಿ ಆಡ್ತಾನೇ ಇದ್ದಾರೆ. ವಿಕೆಟ್ಗಳ ಹಿಂದೆ ನಿಂತು ಶರವೇಗದಲ್ಲಿ ಸ್ಟಂಪ್ಸ್ ಎಗರಿಸ್ತಿದ್ದಾರೆ. ಬಟ್ ಬ್ಯಾಟಿಂಗ್ ಕಷ್ಟವಾಗ್ತಿರೋದು ಸ್ಪಷ್ಟವಾಗಿ ಗೊತ್ತಾಗ್ತಿದೆ. ಲಾಸ್ಟ್ ಒಂದೆರಡು ಓವರ್ನಲ್ಲಿ ಬಂದು ಸಿಕ್ಸ್, ಫೋರ್ ಮೂಲಕ ಫಿನಿಶ್ ಮಾಡೋಕಷ್ಟೇ ಅವ್ರಲ್ಲಿ ಶಕ್ತಿ ಉಳಿದಿದೆ. ಬಿಗ್ ಹಿಟ್ಗಳನ್ನ ನಿರೀಕ್ಷೆ ಮಾಡುವಂತೆಯೇ ಇಲ್ಲ. ಇದನ್ನ ಸ್ವತಃ ಸಿಎಸ್ಕೆ ಟೀಂ ಕೋಚ್ ಕೂಡ ಹೇಳಿಕೊಂಡಿದ್ರು. ಹೀಗಿದ್ರೂ ಧೋನಿಯನ್ನ ಮಾತ್ರ ಫ್ರಾಂಚೈಸಿ ಬಿಡ್ತಿಲ್ಲ. ಅದಕ್ಕೆ ಕಾರಣ ಅವ್ರ ಹೆಸ್ರಿಗಿರೋ ಫ್ಯಾನ್ಬೇಸ್, ಬ್ರ್ಯಾಂಡ್ ವ್ಯಾಲ್ಯೂ ಹಾಗೇ ಪಾಪ್ಯುಲಾರಿಟಿ. ಧೋನಿ ಬಿಡ್ತೀನಂದ್ರೂ ಫ್ರಾಂಚೈಸಿ ಬಿಡೋಕೆ ರೆಡಿ ಇಲ್ಲ. ಆದ್ರೆ ಇದ್ರ ಎಫೆಕ್ಟ್ ತಟ್ಟುತ್ತಿರೋದು ಮಾತ್ರ ಧೋನಿಗೆ. ಅವ್ರು ಇಷ್ಟು ವರ್ಷ ಕಟ್ಟಿ ಬೆಳೆಸಿರೋ ಸಾಮ್ರಾಜ್ಯಕ್ಕೆ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಸಿಎಸ್ಕೆ ಐದು ಟ್ರೋಫಿಗಳನ್ನ ಗೆದ್ದಿದೆ. ಅವ್ರಿಲ್ಲದಿದ್ರೆ ಸಿಎಸ್ಕೆ ವ್ಯಾಲ್ಯೂ ಅರ್ಧನೂ ಇರಲ್ಲ. ಇದು ಫ್ರಾಂಚೈಸಿಗೆ ಚೆನ್ನಾಗೇ ಗೊತ್ತಿದೆ. ಇದೇ ಕಾರಣಕ್ಕೆ ವ್ಹೀಲ್ಚೇರ್ನಲ್ಲಿ ಕಂತ್ರೂ ಕರ್ಕೊಂಡ್ ಬಂದು ಆಡಿರುವಷ್ಟರ ಮಟ್ಟಿಗೆ ಗಂಟು ಬಿದ್ದಿದ್ದಾರೆ. ಇತ್ತ ಎಲ್ಲವನ್ನೂ ಕೊಟ್ಟಿರೋ ಫ್ರಾಂಚೈಸಿ ಮಾತಿಗೆ ಒಲ್ಲೆ ಅನ್ನೋಕೂ ಧೋನಿಗೆ ಆಗ್ತಿಲ್ಲ. ಅನ್ ಕ್ಯಾಪ್ಡ್ ಆಟಗಾರನಾಗಿ ಕೇವಲ 4 ಕೋಟಿಗೆ ತಂಡದಲ್ಲಿ ಆಡ್ತಿದ್ದಾರೆ. ಇಲ್ಲಿ ಹಣ ಮ್ಯಾಟ್ರ್ ಆಗ್ತಿಲ್ಲ. ಫ್ರಾಂಚೈಸಿಗಾಗಿ ವಯಸ್ಸು, ಹಣ ಎಲ್ಲವನ್ನೂ ಬಿಟ್ಟು ಧೋನಿ ಕಣಕ್ಕಿಳಿಯುತ್ತಿದ್ದಾರೆ. ಎಂಎಸ್ ಧೋನಿ ಸ್ಟಂಪ್ಸ್ ಹಿಂದೆ ಎಂದಿನಂತೆ ವೇಗವಾಗಿ ಕಾಣಿಸುತ್ತಿದ್ದರೂ, ಬ್ಯಾಟಿಂಗ್‌ನಲ್ಲಿ ವೈಫಲ್ಯ ಎದುರಿಸುತ್ತಿದ್ದಾರೆ. ಹಿಂದಿನ ಆವೃತ್ತಿಯಲ್ಲಿ 220.55 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಎಂಎಸ್‌ಡಿ ಈ ಆವೃತ್ತಿಯಲ್ಲಿ 138.18 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಜೊತೆಗೆ ಔಟ್ ಆಗುತ್ತಿದ್ದಾರೆ. ಐಪಿಎಲ್ನಲ್ಲಿ ಮೊದಲ ಪಂದ್ಯವನ್ನಷ್ಟೇ ಗೆದ್ದಿದ್ದ ಸಿಎಸ್ಕೆ ಆ ಬಳಿಕ ಹ್ಯಾಟ್ರಿಕ್ ಸೋಲು ಕಂಡಿದೆ.
ಮಹೇಂದ್ರ ಸಿಂಗ್ ಧೋನಿ ಬರೀ ಸಿಎಸ್ಕೆ ಮಾತ್ರವಲ್ಲ. ಭಾರತ ಮತ್ತು ಅದರಿಂದ ಆಚೆಗೂ ಫ್ಯಾನ್ಸ್ ಇದ್ದಾರೆ. ತಲಾ ಫಾರ್ ಎ ರೀಸನ್ ಅಂತಾ ಅವ್ರಿಗಾಗೇ ಸಿಎಸ್ಕೆ ಸಪೋರ್ಟ್ ಮಾಡಿದ್ದವ್ರೂ ಇದ್ದಾರೆ. ಈಗ್ಲೂ ಮಾಡ್ತಿದ್ದಾರೆ. ಬಟ್ ಈಗ ಅದೇ ಅಭಿಮಾನಿಗಳು ಧೋನಿಯನ್ನ ಟ್ರೋಲ್ ಮಾಡುತ್ತಿದ್ದಾರೆ. ಮಾಜಿ ಕ್ರಿಕೆಟರ್ಸ್ ಕೂಡ ನೀವು ಯಾವಾಗಲೋ ನಿವೃತ್ತಿ ಹೇಳಬೇಕಿತ್ತು ಅಂತಿದ್ದಾರೆ. ಬಹುಶಃ ಧೋನಿ 2023ರಲ್ಲಿ ಐಪಿಎಲ್ ಟ್ರೋಫಿ ಗೆದ್ದಾಗ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ರೆ ಅವ್ರ ಹೆಸರು ಆಕಾಶದೆತ್ತರಲ್ಲಿ ಇರ್ತಿತ್ತು. ಆದ್ರೆ ಫ್ರಾಂಚೈಸಿಯ ಮೋಹಕ್ಕೆ ತನ್ನದೇ ಅಭಿಮಾನಿಗಳ ಅಭಿಮಾನವನ್ನ ಕಳ್ಕೊಳ್ತಿದ್ದಾರೆ. ಟ್ರೋಲ್ ಮಾಡ್ತಿದ್ದಾರೆ. 2007ರಲ್ಲಿ ಟಿ-20 ವರ್ಲ್ಡ್ ಕಪ್, 2011ರಲ್ಲಿ ಒಡಿಐ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟ ಧೋನಿ ಈಗ ಐಪಿಎಲ್ಗಾಗಿ ತಮ್ಮ ಗೌರವವನ್ನ ಕಳ್ಕೊಳ್ತಿದ್ದಾರೆ.