ತಲಾ ಮತ್ತೆ ಸಿಎಸ್ಕೆ ಕ್ಯಾಪ್ಟನ್.. ಧೋನಿ ಬಿಟ್ಟರೆ ಬೇರೆ ಯಾರಿಲ್ವಾ?
ಹೊಸಬರಿಗೆ ಚಾನ್ಸ್ ಕೊಡಲ್ವಾ ಚೆನ್ನೈ?

ಒಂದೇ ಒಂದು ವರ್ಷದ ನಂತರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ, ಧೋನಿ ಮತ್ತೆ ಚೆನ್ನೈ ನಾಯಕತ್ವ ವಹಿಸಿದ್ದಾರೆ. ಈ ಬಗ್ಗೆ ಸಿಎಸ್‌ಕೆ ಅಧಿಕೃತವಾಗಿ ಘೋಷಣೆ ಮಾಡಿದೆ. ಗಾಯದ ಸಮಸ್ಯೆಯಿಂದ ಋತುರಾಜ್ ಗಾಯಕ್ವಾಡ್ ಐಪಿಎಲ್ ನಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಎಂಎಸ್ ಧೋನಿ ಅವರ ನ್ನೇ ಮತ್ತೆ ನೇಮಿಸಿದೆ. ಮತ್ತೊಮ್ಮೆ ಸಾರಥ್ಯ ಪಡೆಯುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಆದರೆ ಕೆಲವರು ಟೀಕೆಯನ್ನೂ ವ್ಯಕ್ತಪಡಿಸಿದ್ದಾರೆ. ಧೋನಿ ಬಿಟ್ಟರೆ ಬೇರೆ ಯಾರೂ ಸಿಗಲಿಲ್ಲವೇ ಎಂದು ಪ್ರಶ್ನೆಯನ್ನು ಕೂಡ ಮಾಡುತ್ತಿದ್ದಾರೆ. ಹೊಸ ಹೊಸ ಆಟಗಾರರಿಗೆ ಚಾನ್ಸ್ ಕೊಡಬಹುದಿತ್ತು ಅನ್ನೋ ರೀತಿಯಲ್ಲೂ ಚರ್ಚೆ ಆಗುತ್ತಿದೆ.
18ನೇ ಸೀಸನ್‌ನಲ್ಲಿ ಅನೇಕ ತಂಡಗಳು ಹೊಸ ನಾಯಕನನ್ನು ಆಯ್ಕೆ ಮಾಡಿವೆ. ಇದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ದೊಡ್ಡ ಉದಾಹರಣೆ. ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ಕೊಹ್ಲಿಗೆ ನಾಯಕತ್ವವನ್ನು ಹಸ್ತಾಂತರಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಆರ್‌ಸಿಬಿ ಯುವ ರಜತ್ ಪಾಟೀದಾರ್‌ಗೆ ನಾಯಕತ್ವದ ಪಟ್ಟವನ್ನ ನೀಡ್ತು. ಅದೇ ರೀತಿ ಮುಂಬೈ ಇಂಡಿಯನ್ಸ್ ಕಳೆದ ಋತುವಿನಲ್ಲಿ ರೋಹಿತ್ ಶರ್ಮಾ ಅವರನ್ನು ತೆಗೆದುಹಾಕಿ ಹಾರ್ದಿಕ್ ಪಾಂಡ್ಯಗೆ ಜವಾಬ್ದಾರಿ ನೀಡಿ ಲೇಖನ ಇದು ದೊಡ್ಡ ಚರ್ಚೆಗೂ ಕಾರಣವಾಗಿತ್ತು. ಈಗ ಡೆಲ್ಲಿ ಲಕ್ಷ್ಮೀ, ಪಂಜಾಬ್ ತಂಡಗಳೂ ನಾಯಕತ್ವ ಬದಲಿಸಿವೆ. ಆದ್ರೆ ಸಿಎಸ್‌ಕೆ ಮತ್ತೆ ಹಳೇ ದಾರಿನೇ ಯಾಕೆ ಹಿಡಿದಿದೆ ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಅಂದ್ರೆ ಧೋನಿಗೆ ಕೊಡಬಾರದಿತ್ತು ಅಂತಾ ಯಾವ ಕ್ರಿಕೆಟ್ ಅಭಿಮಾನಿಗಳು ಇಲ್ಲಿ ಹೇಳ್ತಾ ಇಲ್ಲ. ಆದ್ರೆ ಹೊಸಬರಿಗೆ ಯಾಕೆ ಚಾನ್ಸ್ ಕೊಟ್ಟಿಲ್ಲ ಅನ್ನೋದಷ್ಟೇ ಚರ್ಚೆ ಆಗಿದೆ.
ಸಿಎಸ್‌ಕೆ ಯುವ ಆಟಗಾರನಿಗೆ ಅವಕಾಶ ಕೊಡಲ್ಲ ಯಾಕೆ?
ಹೌದು.. 2024ರಲ್ಲಿ ನಾಯಕತ್ವ ಬದಲಿಸಿದ್ದ ಸಿಎಸ್‌ಕೆ ಮತ್ತೆ ಧೋನಿಗೆ ನಾಯಕನಪಟ್ಟ ನೀಡಿದೆ. ಋತುರಾಜ್ ಸ್ಥಾನಕ್ಕೆ ಮತ್ತೊಬ್ಬ ಯುವ ಆಟಗಾರನಿಗೆ ಅವಕಾಶ ನೀಡಬಹುದಿತ್ತು. ಆದರೆ ಚೆನ್ನೈ ಧೋನಿ ಬಿಟ್ಟು ಬೇರೆ ಯಾರ ಮೇಲೆಯೂ ನಂಬಿಕೆ ಇಟ್ಟಿಲ್ಲ ಅನ್ಸುತ್ತೆ.. ಸಿಎಸ್‌ಕೆ ಹಿಂದಿನಿಂದಲೂ ತಂಡದಲ್ಲಿದ್ದ ಅನೇಕ ಆಟಗಾರರಿಗೆ ಅನ್ಯಾಯವಾಗಿದೆ. ದೀರ್ಘಕಾಲದವರೆಗೆ ಸುರೇಶ್ ರೈನಾ ತಂಡದಲ್ಲಿದ್ದರೂ ಆ ಸುವರ್ಣಾವಕಾಶ ಒದಗಿಯೇ ಬರಲಿಲ್ಲ ಎಂಬುದು ಹಲವರ ಆರೋಪ.
ಅಷ್ಟೇ ಯಾಕೆ ಫಾಫ್ ಡು ಪ್ಲೆಸಿಸ್ ನಾಯಕತ್ವ ಕೊಡಬಹುದಿತ್ತು. ಅವರಿಗೆ ಆ ಸಮರ್ಥ್ಯ ಇತ್ತು. ಆದ್ರೆ ಸಿಎಸ್‌ರೆ ಇವರ ಬಗ್ಗೆ ಕ್ಯಾರೆ ಎಂದಿಲ್ಲ. ರವೀಂದ್ರ ಜಡೇಜಾ ಅವರನ್ನು 2022ರಲ್ಲಿ ಸಿಎಸ್‌ಕೆ ನಾಯಕರನ್ನಾಗಿ ಮಾಡಲಾಯಿತು. ಜಡ್ಡು ಅವರ ನಾಯಕತ್ವದಲ್ಲಿ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಋತುವಿನ ಮಧ್ಯದಲ್ಲಿ ಧೋನಿಗೆ ಮತ್ತೆ ನಾಯಕತ್ವ ನೀಡಲಾಯ್ತು. ಮತ್ತೆ ಯುವ ಆಟಗಾರರರಿಗೆ ನಾಯಕತ್ವ ವಹಿಸಿ ಬೆಳೆಸುವ ಕೆಲಸಕ್ಕೆ ಮುಂದಾಗುತ್ತಿಲ್ಲ ಎಂದು ಹಲವರು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ. ಇನ್ನೂ ಬೇರೆಯವರು ಕ್ಯಾಪ್ಟನ್ ಆಗಿದ್ರು ಕೂಡ ಧೋನಿನೇ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಿದ್ದರು ಅನ್ನೋದು ಕೂಡ ಸತ್ಯ. ಜಡ್ಡು ಅಥವಾ ಋತು ಇಬ್ಬರಿಗೂ ಸಂಪೂರ್ಣ ಸ್ವಾತಂತ್ರ್ಯ ಸಿಗಲಿಲ್ಲ ಅಂತ ಕೆಲ ಫ್ಯಾನ್ಸ್‌ಗಳು ಕೂಡ ಆಕ್ರೋಶವನ್ನ ಹೊರ ಹಾಕಿದ್ದಾರೆ.
ಆದರೆ ಸದ್ಯದ ಮಟ್ಟಿಗೆ ಧೋನಿ ಹೊರತುಪಡಿಸಿ ನಾಯಕತ್ವದ ಅನುಭವ ಹೊಂದಿರುವ ಆಟಗಾರರು ತಂಡದಲ್ಲಿಲ್ಲ. ಮೆಗಾ ಹರಾಜಿನಲ್ಲಿ ಕ್ಯಾಪ್ಟನ್ಸಿ ಲಕ್ಷಣಗಳಿರುವ ಆಟಗಾರನನ್ನೂ ಸಿಎಸ್‌ಕೆ ಖರೀದಿಸಿಲ್ಲ. ಹೀಗಾಗಿಯೇ ಧೋನಿಗೆ ಕ್ಯಾಪ್ಟನ್ಸಿ ಪಟ್ಟವನ್ನ ಕೊಡಲಾಗಿದೆ. ಧೋನಿ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟ ಸಿಎಸ್‌ಕೆ ಅಧೃಷ್ಟ ಇನ್ನಾದ್ರೂ ಬದಲಾಗುತ್ತಾ.. ತವರಿನಲ್ಲೇ ಕೆಕೆಆರ್ ವಿರುದ್ದ ಧೋನಿ ಪಡೆ ಗೆಲ್ಲುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.