ಎರಡನೇ ಮದುವೆಗೆ ರಜನಿಕಾಂತ್ ಅಳಿಯನ ಸಿದ್ಧತೆ – ಪ್ರೇಮಿಗಳ ದಿನದಂದು ನಟಿ ಮೃಣಾಲ್ ಠಾಕೂರ್ ಜೊತೆ ಧನುಶ್ ವಿವಾಹ
ಫೆಬ್ರವರಿ 14 ರಂದು ಮೃಣಾಲ್ ಠಾಕೂರ್ ಮತ್ತು ಧನುಶ್ ಮದುವೆ

ಎರಡನೇ ಮದುವೆಗೆ ರಜನಿಕಾಂತ್ ಅಳಿಯನ ಸಿದ್ಧತೆ – ಪ್ರೇಮಿಗಳ ದಿನದಂದು ನಟಿ ಮೃಣಾಲ್ ಠಾಕೂರ್ ಜೊತೆ ಧನುಶ್ ವಿವಾಹಫೆಬ್ರವರಿ 14 ರಂದು ಮೃಣಾಲ್ ಠಾಕೂರ್ ಮತ್ತು ಧನುಶ್ ಮದುವೆ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಶ್, ಈಗ ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಸೂಪರ್ ಸ್ಟಾರ್ ರಜನೀಕಾಂತ್ ಅವರ ಪುತ್ರಿ ಐಶ್ವರ್ಯಾ ಜೊತೆ ಧನುಶ್ ವಿವಾಹವಾಗಿದ್ದರು. ಈಗಾಗಲೇ ಇಬ್ಬರು ವಿಚ್ಛೇದನ ಪಡೆದಿದ್ದು, ಎರಡನೇ ಮದುವೆಗೆ ಧನುಶ್ ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್‌ ಗೆಲ್ಲೋದು ಗಿಲ್ಲಿ ಫಿಕ್ಸ್ – ಟೇಬಲ್ ತಟ್ಟಿ ಹೇಳಿದ ಶಿವಣ್ಣ

ಕಾಲಿವುಡ್ ಸ್ಟಾರ್ ಧನುಶ್ ಹಾಗೂ ನಟಿ ಮೃಣಾಲ್ ಠಾಕೂರ್ ಪರಸ್ಪರ ಪ್ರೀತಿಯಲ್ಲಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಇದೀಗ ಇಬ್ಬರೂ ಸಹ ಶೀಘ್ರವೇ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಮೃಣಾಲ್ ಠಾಕೂರ್ ಮತ್ತು ಧನುಶ್ ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಸುದ್ದಿಯ ಪ್ರಕಾರ, ಮೃಣಾಲ್ ಠಾಕೂರ್ ಮತ್ತು ಧನುಶ್ ವಿವಾಹ ಫೆಬ್ರವರಿ 14 ರಂದು ನಡೆಯಲಿದೆ. ಈ ಮದುವೆ ಸಮಾರಂಭದಲ್ಲಿ ಎರಡೂ ಕುಟುಂಬದ ಅತ್ಯಾಪ್ತರು ಮಾತ್ರ ಭಾಗಿ ಆಗಲಿದ್ದಾರೆ. ಧನುಶ್ ಅವರಿಗೆ ಇದು ಎರಡನೇ ಮದುವೆ ಆದರೆ ಮೃಣಾಲ್ ಅವರಿಗೆ ಇದು ಮೊದಲ ಮದುವೆ ಆಗಲಿದೆ. ಮೃಣಾಲ್ ಠಾಕೂರ್ ಅವರಿಗೆ ಈಗ 33 ವರ್ಷ ವಯಸ್ಸು, ಧನುಶ್ ಅವರಿಗೆ 42 ವರ್ಷ.

ನಟ ಧನುಶ್ ಅವರ ವೃತ್ತಿ ಜೀವನ ಅದ್ಭುತವಾಗಿ ಸಾಗುತ್ತಿದೆ ಆದರೆ ಅವರ ಖಾಸಗಿ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಸ್ಟಾರ್ ನಟ ರಜನೀಕಾಂತ್ ಪುತ್ರಿಯ ವಿವಾಹವಾಗಿದ್ದ ಧನುಶ್, ಬರೋಬ್ಬರಿ 20 ವರ್ಷಗಳ ಬಳಿಕ ವಿಚ್ಛೇದನ ಪಡೆದರು. ಧನುಶ್, ಐಶ್ವರ್ಯ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ತಾವು ಬೇರೆ ಆಗುತ್ತಿರುವುದಾಗಿ 2022 ರಲ್ಲಿ ಧನುಶ್ ಹಾಗೂ ಐಶ್ವರ್ಯಾ ಘೋಷಿಸಿದರು. 2024ರಲ್ಲಿ ಇವರಿಗೆ ನ್ಯಾಯಾಲಯವು ವಿಚ್ಛೇದನ ನೀಡಿತು. ಇದೀಗ ಧನುಶ್ ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ.

Sulekha