ಮಿಸ್ಟರ್ ಬೀಸ್ಟ್ ಮದುವೆ ನಡೆದಿದ್ದು ಎಲ್ಲಿ ಗೊತ್ತಾ? – ಗೆಳತಿ ಜೊತೆ ವಿವಾಹವಾದ ವಿಶ್ವದ ಶ್ರೀಮಂತ ಯೂಟ್ಯೂಬರ್

ಮಿಸ್ಟರ್ ಬೀಸ್ಟ್ ಮದುವೆ ನಡೆದಿದ್ದು ಎಲ್ಲಿ ಗೊತ್ತಾ? – ಗೆಳತಿ ಜೊತೆ ವಿವಾಹವಾದ ವಿಶ್ವದ ಶ್ರೀಮಂತ ಯೂಟ್ಯೂಬರ್

MrBeast. ಈ ಹೆಸರು ಯಾರಿಗೆ ಗೊತ್ತಿಲ್ಲಹೇಳಿ. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಮಿಸ್ಟರ್ ಬೀಸ್ಟ್ ಹವಾ ಜೋರಾಗಿದೆ. ವಿಶ್ವದ ಶ್ರೀಮಂತ ಯೂಟ್ಯೂಬರ್ ತನ್ನ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ:15 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ – ಸೆಪ್ಟೆಂಬರ್‌ನಿಂದಲೇ ಐತಿಹಾಸಿಕ ಕಾನೂನು ಜಾರಿ

ಜಗತ್ತಿನ ಜನಪ್ರಿಯ ಯೂಟ್ಯೂಬರ್ ಮಿಸ್ಟರ್ ಬೀಸ್ಟ್ ಇತ್ತೀಚೆಗೆ ತಮ್ಮ ದೀರ್ಘಕಾಲದ ಗೆಳತಿ ಥಿಯಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 2024 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡ, ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. MrBeast ಎಂದೇ ಖ್ಯಾತಿ ಪಡೆದಿರುವ ಜಿಮ್ಮಿ ಡೊನಾಲ್ಡ್ಸನ್ ಮದುವೆಗೆ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಮಿಸ್ಟರ್ ಬೀಸ್ಟ್ ತಮ್ಮ ದೀರ್ಘಕಾಲದ ಗೆಳತಿ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿರುವ ಥಿಯಾ ಬೂಯ್ಸೆನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದಾರೆ.

ಮಿಸ್ಟರ್ ಬೀಸ್ಟ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಸುಂದರವಾದ ಫೋಟೋಗಳನ್ನು ಹಂಚಿಕೊಂಡ MrBeast, “ನಾನು ಮಿಸೆಸ್ ಬೀಸ್ಟ್ ಅನ್ನು ಕಂಡುಕೊಂಡೆ” (I found MrsBeast). ಇದು ನನ್ನ ಜೀವನದ ಅತ್ಯಂತ ಸುಂದರವಾದ ದಿನ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಮಿಸ್ಟರ್ ಬೀಸ್ಟ್ ರಿಚರ್ಡ್ ಬ್ರಾನ್ಸನ್ ಅವರ ಖಾಸಗಿ ನೆಕ್ಕರ್ ಐಲ್ಯಾಂಡ್ ನಲ್ಲಿ ವಿವಾಹವಾಗಿದ್ದು, ಈ ಕಾರ್ಯಕ್ರಮದಲ್ಲಿ ಕೇವಲ ಕುಟುಂಬ ಸದಸ್ಯರು ಮತ್ತು ಸುಮಾರು 70 ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. MrBeast ಮತ್ತು ಥಿಯಾ ಬೂಯ್ಸೆನ್ ಮೊದಲ ಬಾರಿಗೆ 2022 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಭೇಟಿಯಾದರು. ಲವ್ ಅಟ್ ಫಸ್ಟ್ ಸೈಟ್ ಎನ್ನುವಂತೆ ಅಂದೇ ಡೇಟಿಂಗ್ ಮಾಡಲು ಶುರುಮಾಡಿದ್ದರು. ಜಿಮ್ಮಿ 2024 ರ ಕ್ರಿಸ್‌ಮಸ್ ಸಮಯದಲ್ಲಿ ಥಿಯಾಗೆ ಪ್ರಪೋಸ್ ಮಾಡಿದ್ದರು. ದೀರ್ಘಕಾಲದಿಂದ ರಿಲೇಶನ್’ಶಿಪ್ ನಲ್ಲಿದ್ದ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Sulekha

Leave a Reply

Your email address will not be published. Required fields are marked *