ಮಂಡ್ಯ ಟಿಕೆಟ್ ಜೆಡಿಎಸ್ ಪಾಲಾದರೆ ಸುಮಲತಾ ನಡೆಯೇನು? – ದೆಹಲಿಗೆ ಹಾರಿದ್ಯಾಕೆ ಸಂಸದೆ?

ಮಂಡ್ಯ ಟಿಕೆಟ್ ಜೆಡಿಎಸ್ ಪಾಲಾದರೆ ಸುಮಲತಾ ನಡೆಯೇನು? – ದೆಹಲಿಗೆ ಹಾರಿದ್ಯಾಕೆ ಸಂಸದೆ?

ಮಂಡ್ಯದಿಂದ ಸ್ಪರ್ಧಿಸಲು ದಳಪತಿಗಳು ತಯಾರಿ ನಡೆಸುತ್ತಿದ್ದಾರೆ. ಆದರೆ, ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿಯಿಂದ ಸ್ಪರ್ಧಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಾಗಿ ಸುಮಲತಾ ಅಂಬರೀಶ್ ಬಿಜೆಪಿ ಹೈಕಮಾಂಡ್​​ ನಾಯಕರನ್ನ ಭೇಟಿಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್​ರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಸುಮಲತಾ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಮಂಡ್ಯ ಕ್ಷೇತ್ರ ಮತ್ತು ಲೋಕಸಭೆ ಚುನಾವಣೆ ಚುನಾವಣೆ ಕುರಿತು ಚರ್ಚಿಸಿರೋದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ? – ಸೋತ ಕ್ಷೇತ್ರದಲ್ಲಿಯೇ ರಣತಂತ್ರ ರೂಪಿಸುತ್ತಿರುವ ದಳಪತಿಗಳು..!

ಬಿಜೆಪಿ ಹೈಕಮಾಂಡ್​ ನಾಯಕರ ಜೊತೆಗಿನ ಸುಮಲತಾರ ಈ ಮಾತುಕತೆ ಈಗ ಭಾರಿ ಕುತೂಹಲ ಕೆರಳಿಸಿದೆ. ಇದುವರೆಗೂ ಸುಮಲತಾ ಮಂಡ್ಯದಿಂದಲೇ ಸ್ಪರ್ಧಿಸೋದಾಗಿ ಹೇಳ್ತಾ ಬಂದಿದ್ದಾರೆ. ಆದ್ರೆ ಮಂಡ್ಯ ರೇಸ್​​​ನಲ್ಲಿ ಬಿಜೆಪಿಯ ದೋಸ್ತಿ ದಳಪತಿಗಳು ಕೂಡ ಟಿಕೆಟ್ ರೇಸ್​​ನಲ್ಲಿ ಫ್ರಂಟ್ ​​ರನ್ನರ್ಸ್​ ಆಗಿದ್ದಾರೆ. ಹೀಗಾಗಿ ಮಂಡ್ಯವನ್ನ ಜೆಡಿಎಸ್​​ಗೆ ಬಿಟ್ಟುಕೊಂಡುವಂತೆ ಬಿಜೆಪಿ ಹೈಕಮಾಂಡ್ ನಾಯಕರು ಸುಮಲತಾರ ಮನವೊಲಿಸುತ್ತಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ಮಂಡ್ಯ ಟಿಕೆಟ್ ವಿಚಾರವಾಗಿ ಬಿಜೆಪಿಯ ಮುಂದಿನ ನಿರ್ಧಾರ ಏನಿರಬಹುದು ಅನ್ನೋದು ಕೂಡಾ ಭಾರಿ ಕುತೂಹಲ ಕೆರಳಿಸಿದೆ.

ಮಂಡ್ಯವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವಂತೆ ಸುಮಲತಾ ಅಂಬರೀಶ್ ಬಿಜೆಪಿ ಮುಖಂಡರ ಬಳಿ ಬಿಗಿಪಟ್ಟು ಹಿಡಿದಿದ್ದಾರೆ ಎನ್ನಲಾಗ್ತಿದೆ. ಮಂಡ್ಯ ಕ್ಷೇತ್ರವನ್ನ ಉಳಿಸಿಕೊಂಡು ತಮಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ದಳಪತಿಗಳು ಮಂಡ್ಯವನ್ನು ಬಿಟ್ಟುಕೊಡಲು ರೆಡಿಯಿಲ್ಲ. ಹೀಗಾಗಿ ಮಂಡ್ಯ ಕ್ಷೇತ್ರದ ಟಿಕೆಟ್ ಫೈಟ್ ಚುನಾವಣೆಗಿಂತೂ ಹೆಚ್ಚಿನ ಕುತೂಹಲ ಮೂಡಿಸಿದೆ.

 

Sulekha