ಕಾಂಗ್ರೆಸ್ ಹಿಂದೂಗಳಲ್ಲಿ ಗೊಂದಲ ಸೃಷ್ಟಿಸಿದೆ – ಸಂಸದ ಕೋಟ ಶ್ರೀನಿವಾಸ ಪೂಜಾರಿ

ಜಾತಿ ಸಮೀಕ್ಷೆಯ ವೇಳೆ ವಿವಿಧ ಕ್ರಿಶ್ಚಿಯನ್ ಜಾತಿಗಳನ್ನು ಸೇರಿಸಿ ಹಿಂದೂಗಳಲ್ಲಿ ದೊಡ್ಡ ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದು ಮಾಜಿ ಸಚಿವ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂತರಾಜು ವರದಿಗಾಗಿ ಸಿದ್ದರಾಮಯ್ಯ ಅವರ ಸರ್ಕಾರ 165 ಕೋಟಿ ರೂ. ಖರ್ಚು ಮಾಡಿತ್ತು. ಅವರೇ ರಚಿಸಿದ ಆಯೋಗ ಅದಾಗಿತ್ತು. ಅದನ್ನು ಸ್ವೀಕರಿಸಿದ್ದಾಗಿ ಹೇಳಿದರೂ ಪ್ರಕಟಿಸಲಿಲ್ಲ; ಅನುಷ್ಠಾನವನ್ನೂ ಮಾಡಿಲ್ಲ ಎಂದು ಟೀಕಿಸಿದರು. ಹೈಕಮಾಂಡ್ ಹೇಳಿದ ಕಾರಣಕ್ಕೆ 165 ಕೋಟಿ ರೂ. ಖರ್ಚು ಮಾಡಿದ ವ್ಯವಸ್ಥೆಯನ್ನು ಮೂಲೆಗುಂಪು ಮಾಡಿದ್ದಾರೆ. ಈಗ ಹೊಸ ಜಾತಿ ಜನಗಣತಿ, ಸಾಮಾಜಿಕ, ಶೈಕ್ಷಣಿಕ ಗಣತಿ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಪ್ರತಾಪ್ ಸಿಎಂ & ಟೀಂಗೆ ಹಿನ್ನಡೆ – ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ವಿರೋಧಿಸಿದ ಅರ್ಜಿ ಸುಪ್ರೀಂನಲ್ಲೂ ವಜಾ
ಜಾತಿ ಸಮೀಕ್ಷೆಯಂಥ ಐಡಿಯವನ್ನು ಸಿದ್ದರಾಮಯ್ಯ ಅವರಿಗೆ ಯಾರು ಕೊಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇದು ಎಡಪಂಥೀಯರ ಕುತಂತ್ರ ಎಂದು ಕೆಲವರು ನನಗೆ ಹೇಳಿದ್ದಾರೆ; ಎಡಪಂಥೀಯರಿಗೆ ತಲೆ ಜಿಡ್ಡು ಹಿಡಿದಿದೆ. ಕಾಂಗ್ರೆಸ್ಸಿನವರಿಗೆ ತಲೆಯೇ ಇಲ್ಲ. ಅದಕ್ಕಾಗಿ ಎಡಪಂಥೀಯರ ವಿಚಾರಗಳನ್ನು ಪಡೆದು ಇವರು ಜನರ ಮೇಲೆ ಹೇರಲು ಹೊರಟಿದ್ದಾರೆ ಎಂದು ಟೀಕಿಸಿದರು.
ಸಮೀಕ್ಷೆಗೂ ಜನಗಣತಿಗೂ ವ್ಯತ್ಯಾಸವಿದೆ. ಜನಗಣತಿಯನ್ನು ರಾಜ್ಯ ಸರ್ಕಾರ ಮಾಡಲು ಸಾಧ್ಯವಿಲ್ಲ. ಅದೇನಿದ್ದರೂ ಕೇಂದ್ರ ಸರ್ಕಾರ ಮಾಡಬೇಕು. ಈ ಸಮೀಕ್ಷೆ ಹೆಸರಿನಲ್ಲಿ ಇವರು ಜನಗಣತಿ ಮಾಡಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು. ಕಾಂಗ್ರೆಸ್ಸಿನ ಅನೇಕ ಸಚಿವರಿಗೂ ಇದು ಇಚ್ಛೆ ಇಲ್ಲ. ಇದರಿಂದ ಅನೇಕ ಗೊಂದಲವಾಗುತ್ತಿದೆ ಎಂದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ನೋಡಿರಿ

