ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಗಿಫ್ಟ್ – ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಗಿಫ್ಟ್ – ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತಂಡದ ಕಡೆಯಿಂದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಜೊತೆಗೆ ಸಿನಿಮಾ ತಂಡದ ಕಡೆಯಿಂದ ಇನ್ನೊಂದು ಮಾಹಿತಿ ಕೂಡಾ ಹೊರಬಿದ್ದಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಎರಡು ಭಾಗದಲ್ಲಿ ಬರುತ್ತಿದೆ ಎಂದಿದೆ ಚಿತ್ರತಂಡ. ರಕ್ಷಿತ್ ಶೆಟ್ಟಿ ಅವರ ಜನ್ಮದಿನದ ವಿಶೇಷ ದಿನದಂದು ಈ ಘೋಷಣೆ ಆಗಿದೆ. ಪಾರ್ಟ್ ಎ ಹಾಗೂ ಪಾರ್ಟ್ ಬಿ ಆಗಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ರಿಲೀಸ್ ಆಗಲಿದೆ.

ಇದನ್ನೂ ಓದಿ:  ಅಂಬಿ ಮಗನ ಮದುವೆ – ರಜಿನಿಕಾಂತ್, ಸುಹಾಸಿನಿ ಸೇರಿದಂತೆ ಗಣ್ಯರಿಂದ ಶುಭಾಶಯ

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಎರಡು ಪಾರ್ಟ್‌ಗಳಲ್ಲಿ ಬರುತ್ತಿರುವ ಘೋಷಣೆ ಕೇಳಿ ಫ್ಯಾನ್ಸ್ ಅಂತೂ ಖುಷಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತಂಡದ ಕಡೆಯಿಂದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಇದು ಕೂಡಾ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಜೂನ್ 15ರಂದು ರಿಲೀಸ್ ದಿನಾಂಕ ಅನೌನ್ಸ್ ಮಾಡಲಿದೆ. ‘ನಿಮ್ಮ ಮನು ಇಂದು ವಿಶೇಷ ಪ್ರಕಟಣೆಯೊಂದಿಗೆ ಬಂದಿದ್ದಾನೆ. ಸಮಯ, ಪ್ರೀತಿ ಮತ್ತು ಕನಸುಗಳ SSE ಈಗ ಎರಡು ಭಾಗಗಳಲ್ಲಿ ನಿಮ್ಮ ಮುಂದೆ ತರಲಾಗುತ್ತಿದೆ. ಸೈಡ್ ಎ ಮತ್ತು ಸೈಡ್ ಬಿ. ಚಿತ್ರದ ಚಿತ್ರೀಕರಣ ಮುಗಿದಿದೆ. ಎರಡೂ ಪಾರ್ಟ್ಗಳ ಬಿಡುಗಡೆ ದಿನಾಂಕವನ್ನು ಜೂನ್ 15 ರಂದು ಪ್ರಕಟಿಸಲಾಗುವುದು’ ಎಂದು ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ. ಈ ಸಿನಿಮಾದ ಮೂಲಕ ಒಂದು ಗಂಭೀರವಾದ ಪ್ರೇಮಕತೆಯನ್ನು ನಿರ್ದೇಶಕ ಹೇಮಂತ್ ರಾವ್ ಹೇಳಲಿದ್ದಾರೆ. ರಕ್ಷಿತ್‌ ಶೆಟ್ಟಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಇದೆ.

suddiyaana