ಮದುವೆಯಾಗಲು ಸೂಕ್ತ ಹೆಣ್ಣು ಹುಡುಕಿಲ್ಲ ಎಂದು ತಾಯಿಯನ್ನೇ ಕೊಂದ ಪಾಪಿ!

ಮದುವೆಯಾಗಲು ಸೂಕ್ತ ಹೆಣ್ಣು ಹುಡುಕಿಲ್ಲ ಎಂದು ತಾಯಿಯನ್ನೇ ಕೊಂದ ಪಾಪಿ!

ಮದುವೆ ವಯಸ್ಸಿಗೆ ಬಂದವರಿಗೆ ಹೆಣ್ಣು ಹುಡುಕುವುದು ಸಾಮಾನ್ಯ. ಹೆಣ್ಣು ಸಿಕ್ಕಿಲ್ಲವೆಂದಾದರೆ ಬ್ರೋಕರ್‌ಗಳ ಬಳಿ ತೆರಳಿ ಅವರ ಬಳಿ ಹುಡುಕಲು ಹೇಳುತ್ತೇವೆ. ಪರಿಚಯಸ್ಥರ ಬಳಿ ವಿಚಾರಿಸುತ್ತೇವೆ. ಇಲ್ಲೂ ಒಬ್ಬ ವ್ಯಕ್ತಿ ಹೆಣ್ಣು ಹುಡುಕಲು ಮುಂದಾಗಿದ್ದಾನೆ. ಹೆಣ್ಣು ಹುಡುಕಲು ತಾಯಿಯೂ ಕೂಡ ಆತನಿಗೆ ಸಾಥ್‌ ನೀಡಿದ್ದಾಳೆ. ಆದರೆ ಎಲ್ಲೂ ಕೂಡ ಆತನಿಗೆ ಮೆಚ್ಚುಗೆಯಾಗುವಂತಹ ಹುಡುಗಿ ಸಿಕ್ಕಿಲ್ಲ. ಇದರಿಂದ ಕೋಪಗೊಂಡ ಯುವಕ ಆತನ ತಾಯಿಯನ್ನೇ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಲೇಟ್‌ ಆಯ್ತು ಎಂದು ರೈಲ್ವೇ ಪ್ಲಾಟ್‌ಫಾರ್ಮ್‌ ಒಳಗೆ ಕಾರು ನುಗ್ಗಿಸಿದ ಬಿಜೆಪಿ ಸಚಿವ!

ಈ ಘಟನೆ  ತೆಲಂಗಾಣದ ಸಿದ್ದಿಪೇಟೆಯಲ್ಲಿ ನಡೆದಿದೆ. ಮದುವೆಯಾಗಲು ಸೂಕ್ತ ಹೆಣ್ಣು ಹುಡುಕಿಲ್ಲ ಎಂಬ ಕಾರಣಕ್ಕೆ ತಾಯಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆಗೆ ಸಂಬಂಧಿಸಿದಂತೆ ಮಹಿಳೆಯ ಮಗ ಹಾಗೂ ಇನ್ನೊಬ್ಬ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯ ಬಳಿಕ ಪೊಲೀಸರಿಗೆ ಅನುಮಾನ ಬರದಂತೆ ದರೋಡೆಗೆ ಯತ್ನಿಸಿ ಕೊಲೆಯಾದಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ. ಅಲ್ಲದೇ ಗುರುತು ಸಿಗದಂತೆ ಮಹಿಳೆಯ ಕತ್ತು ಸೀಳಿ ಕೈಕಾಲುಗಳನ್ನು ಕತ್ತರಿಸಿದ್ದಾರೆ. ಆದರೆ ಆರೋಪಿಯ ಸಹೋದರಿ ಈ ಬಗ್ಗೆ ಮಾಹಿತಿ ನೀಡಿದ್ದು ಬಂಧನಕ್ಕೆ ಸಹಕಾರಿಯಾಗಿದೆ.

ಮಹಿಳೆ ನೀಡಿದ ದೂರಿನಲ್ಲಿ ಆರೋಪಿಗಳು ಇಟ್ಟಿಗೆಯಿಂದ ಹಲ್ಲೆ ನಡೆಸಿ ತಾಯಿಯನ್ನು ಕೊಲೆಗೈದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ತನಿಖೆಯ ಸಂದರ್ಭದಲ್ಲಿ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ ಆರೋಪಿಗಳು ಈ ಹಿಂದೆ ಯಾವುದಾದರೂ ಕೃತ್ಯಗಳಲ್ಲಿ ಭಾಗಿಯಾಗಿರುವುದರ ಬಗ್ಗೆ ಸಹ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

suddiyaana