ಮಗನನ್ನು ಕೊಂದು ಅಡುಗೆ ಮಾಡಿದ್ಲು..! – ಕರುಳ ಕುಡಿ ಎಂದು ನೋಡದೆ ತಿಂದೇ ಬಿಟ್ಲು ಪಾಪಿ ತಾಯಿ!

ಮಗನನ್ನು ಕೊಂದು ಅಡುಗೆ ಮಾಡಿದ್ಲು..! – ಕರುಳ ಕುಡಿ ಎಂದು ನೋಡದೆ ತಿಂದೇ ಬಿಟ್ಲು ಪಾಪಿ ತಾಯಿ!

ತಾಯಿಯನ್ನು ದೇವರಿಗೆ ಹೋಲಿಸಲಾಗುತ್ತದೆ. ಆಕೆ ಎಂತಹ ಕಷ್ಟದಲ್ಲಿದ್ದರೂ ತನ್ನ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾಳೆ. ಮುದ್ದಾಗಿ ಸಾಕುತ್ತಾಳೆ. ಆದರೆ ಇಲ್ಲೊಬ್ಬಳು ಕರುಳ ಕುಡಿ ಎಂದು ನೋಡದೆ ಮಗನನ್ನು ಕೊಂದು ಅಡುಗೆ ಮಾಡಿ ತಿಂದಿದ್ದಾಳೆ.

ಏನಿದು ಘಟನೆ?

ಈ ಭಯಾನಕ  ಘಟನೆ ಈಜಿಪ್ಟ್‌ನಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ತಾನು ಹೆತ್ತ ಮಗನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಬಳಿಕ ತಲೆಯನ್ನು ಬೇರ್ಪಡಿಸಿ, ನೀರಿನಲ್ಲಿ ಕುದಿಸಿ ತಲೆಯ ಭಾಗವನ್ನು ತುಂಡು ಮಾಡಿದ್ದಾಳೆ. ನಂತರ ಆಕೆ ಅಡುಗೆ ಮಾಡಿ ತಿಂದಿದ್ದಾಳೆ. ಮಹಿಳೆಯನ್ನು ಹನಾ ಮೊಹಮ್ಮದ್ ಹಸನ್ ಎಂದು ಗುರುತಿಸಲಾಗಿದೆ. ಮೃತ 5 ವರ್ಷದ ಮಗನ ಹೆಸರು ಯೂಸುಫ್ ಎಂದು ಗುರುತಿಸಲಾಗಿದೆ.

ಹನಾ ಮೊಹಮ್ಮದ್ ಹಸನ್ ತನ್ನ ಪತಿಗೆ ವಿಚ್ಛೇದನ ನೀಡಿದ್ದಳು. ತನ್ನ 5 ವರ್ಷದ ಮಗ ಯೂಸುಫ್‌ನೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದಳು. ಹನಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾಳೆ. ತನ್ನ ಮಗ ಯೂಸುಫ್ ನನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಮುಂದುವರಿದ ರೋಗಿಗಳ ಸಾವು! – ಮೃತರ ಸಂಖ್ಯೆ 59ಕ್ಕೆ ಏರಿಕೆ

ಮಗನನ್ನು ಕೊಂದ ಬಳಿಕ ಮಹಿಳೆ ಮಗುವಿನ ಶವವನ್ನು ನೀರಿಗೆ ಹಾಕಿದ್ದಾಳೆ. ಆದರೆ, ಮನೆಯ ಪಕ್ಕದಲ್ಲಿಯೇ ವಾಸವಿರುವ ಸೋದರ ಸಂಬಂಧಿಯ  ಮನೆಗೆ ಬಂದಾಗ ಯೂಸುಫ್ ಕಾಣಲಿಲ್ಲ. ಮೃತದೇಹದ ಕೆಲವು ತುಣುಕುಗಳು ಪತ್ತೆಯಾಗಿವೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಅವರು ಬಂದು ಹನನನ್ನು ವಿಚಾರಿಸಿದ್ದಾರೆ. ತನಿಖೆಯಲ್ಲಿ ಆಘಾತಕಾರಿ ಮಾಹಿತಿಗಳು ಬಹಿರಂಗಗೊಂಡಿವೆ. ಮಗನ ತಲೆ ಎಲ್ಲಿದೆ ಎಂದು ಕೇಳಿದಾಗ, ಅದು ತಿಂದಿದೆ ಎಂದು ಹೇಳಿದ್ದಾಳೆ.

ಮಹಿಳೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಳು. ಗಂಡ ಹೇಳಿದ ಮಾತನ್ನು ಕೇಳದೆ ಹನಾ ಮಗನನ್ನು ಕರೆದುಕೊಂಡು ಬಂದಿದ್ದಳು. ವಿಚ್ಛೇದನವೂ ಆಯಿತು. ಆದರೂ ಪತಿ ರಾಜಿ ಮಾಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆದರೆ ಇದೀಗ ಈ ಭಯಾನಕ ಘಟನೆ ಸಂಭವಿಸಿದೆ.

Shwetha M