ಅಮ್ಮ ಪ್ಲೀಸ್ ಬಿಟ್ಟು ಬಿಡು – ಚಿಕನ್ ಕೇಳಿದ್ದಕ್ಕೆ ಮಗನನ್ನೇ ಕೊಂದ ಪಾಪಿ ತಾಯಿ

ಅಮ್ಮ ಪ್ಲೀಸ್ ಬಿಟ್ಟು ಬಿಡು –    ಚಿಕನ್ ಕೇಳಿದ್ದಕ್ಕೆ ಮಗನನ್ನೇ ಕೊಂದ ಪಾಪಿ ತಾಯಿ

ಚಿಕನ್‌ ಬೇಕೆಂದು ಹಠ ಮಾಡಿದ್ದ ತನ್ನ ಮಕ್ಕಳಿಗೆ ತಾಯಿ ಲಟ್ಟಣಿಗೆಯಿಂದ ಹೊಡೆದ ಪರಿಣಾಮ ಬಾಲಕನೊಬ್ಬ ಮೃತಪಟ್ಟ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಭಾನುವಾರ ನಡೆದಿದೆ. ಮೃತ ಬಾಲಕನನ್ನು ಚಿನ್ಮಯ್ ಧುಮ್ಡೆ ಎಂದು ಗುರುತಿಸಲಾಗಿದ್ದು, ಅವನು ತನ್ನ ತಾಯಿ ಪಲ್ಲವಿ ಧುಮ್ಡೆಗೆ ಚಿಕನ್‌ ಬೇಕೆಂದು ಕೇಳಿದ್ದಾನೆ.

ಇದರಿಂದ ಕೋಪಗೊಂಡ ಆಕೆ ಆತನನ್ನು  ಲಟ್ಟಣಿಗೆಯಿಂದ ಹೊಡೆದಿದ್ದಾಳೆ. ಹೊಡೆತಕ್ಕೆ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಆಕೆ ತನ್ನ 10 ವರ್ಷದ ಮಗಳಿಗೂ ಸರಿಯಾಗಿ ಥಳಿಸಿದ್ದಾಳೆ. ಬಾಲಕಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

         ಪಲ್ಲವಿ ಘುಮ್ಡೆ , ಆರೋಪಿ 

ಮಕ್ಕಳ ಕೂಗು ಕೇಳಿ ಆತಂಕಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳೀಯ ಪೊಲೀಸ್ ಠಾಣೆ, ಸ್ಥಳೀಯ ಅಪರಾಧ ವಿಭಾಗ ಮತ್ತು ಉಪವಿಭಾಗೀಯ ಕಚೇರಿಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ನಂತರ, ಆರೋಪಿ ತಾಯಿಯನ್ನು ವಶಕ್ಕೆ ಪಡೆಯಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ದೇಶಮುಖ್ ಮಾತನಾಡಿ, ಪಲ್ಲವಿ ಘುಮ್ಡೆ (40) ತನ್ನ ಕುಟುಂಬದೊಂದಿಗೆ ಕಾಶಿಪಾದ ಪ್ರದೇಶದ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಅವರ ಮಗ ಚಿನ್ಮಯ್ ಗಣೇಶ್ ಘುಮ್ಡೆ (7) ಎಂಬ ಬಾಲಕನನ್ನು ಆಕೆ ಥಳಿಸಿದ್ದಾಳೆ. ಪರಿಣಾಮ, ಆತ ಮೃತ ಪಟ್ಟಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದರು. ಪಾಲ್ಘರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Kishor KV