ಬಾಲಕನ ವಿದ್ಯಾಭ್ಯಾಸಕ್ಕೆ ಆತನ ಕೇಶರಾಶಿಯೇ ಅಡ್ಡಿ – ಕೂದಲು ಕತ್ತರಿಸಿಲ್ಲ ಅಂತಾ ಶಾಲೆ ಪ್ರವೇಶಕ್ಕೆ ನಿರಾಕರಣೆ!

ಆರು ವರ್ಷವಾಗುತ್ತಿದ್ದಂತೆ ಮಕ್ಕಳನ್ನು ಶಾಲೆಗೆ ಸೇರಿಸಲಾಗುತ್ತದೆ. ಮಕ್ಕಳು ಶಾಲೆ ತೊರೆದರೂ ಶಿಕ್ಷಕರು ಮತ್ತೆ ಶಾಲೆಗೆ ಕರೆತರುತ್ತಾರೆ ಇಂತಹ ಘಟನೆಗಳು ಸಾಕಷ್ಟು ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲೊಬ್ಬ ಬಾಲಕನಿಗೆ ಶಾಲೆಗೆ ಸೇರಿ ವಿದ್ಯಾಭ್ಯಾಸ ಮಾಡಲು ಆಸಕ್ತಿ ಇದೆ. ಆದ್ರೆ ಶಾಲೆಯೇ ಈತನ ಪ್ರವೇಶಕ್ಕೆ ನಿರಾಕರಿಸಿದೆ. ಇದಕ್ಕೆ ಕಾರಣ ಆತನ ಕೂದಲು!
ಹೌದು.. ಇಲ್ಲೊಬ್ಬ ಬಾಲಕ ಕೂದಲಿನ ವಿಚಾರಕ್ಕೆ ಸುದ್ದಿಯಾಗಿದ್ದಾನೆ. ಈತನ ಉದ್ದ ಕೂದಲಿನ ಕಾರಣಕ್ಕೇ ಶಾಲೆಯಲ್ಲಿ ಪ್ರವೇಶ ನಿರಾಕರಿಸಲಾಗಿದ್ದು, ಮಗನ ಕೂದಲಿನ ಪರವಾಗಿ ತಾಯಿ ದನಿಗೂಡಿಸಿದ್ದಾರೆ. ಈ ವಿಚಾರ ಈಗ ಭಾರಿ ಸದ್ದು ಮಾಡುತ್ತಿದೆ.
ಏನಿದು ವಿವಾದ?
ಲಂಡನ್ನ 8 ವರ್ಷದ ಫರೌಕ್ ಜೇಮ್ಸ್ ಎಂಬ ಈ ಬಾಲಕ ಲಂಡನ್ನಲ್ಲಿನ ಕೆಲವು ನಿಯಮಗಳ ಕಾರಣದಿಂದಾಗಿ ಪ್ರತಿಷ್ಠಿತ ಶಾಲೆಗೆ ಪ್ರವೇಶ ಪಡೆಯಲು ತೊಂದರೆ ಎದುರಿಸುವಂತಾಗಿದೆ. ಶಾಲೆಯ ನಿಯಮಗಳ ಪ್ರಕಾರ ಹುಡುಗರ ಕೂದಲು ಉದ್ದ ಇರಬಾರದು, ಕತ್ತರಿಸಿಕೊಂಡು ಬರಬೇಕು. ಆದರೆ ಈ ಬಾಲಕನಿಗೆ ಉದ್ದವಾದ ಕೂಡಲು ಇದೆ. ಹೀಗಾಗಿ ಈ ಬಾಲಕನಿಗೆ ಶಾಲೆ ಪ್ರವೇಶ ನೀಡಲು ಶಿಕ್ಷಣ ಸಂಸ್ಥೆ ನಿರಾಕರಿಸಿದೆ. ತಾಯಿ ಬಾನಿ ಮಿಲ್ಲರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯ ದೇಹದಿಂದ ಕೆಟ್ಟ ವಾಸನೆ – ವಿಮಾನದಿಂದ ಕೆಳಗಿಳಿಸಿದ ಏರ್ಲೈನ್ಸ್ ಸಿಬ್ಬಂದಿ!
ಬಾಲಕನ ಕೂದಲು ಯಾಕೆ ಕತ್ತರಿಸಿಲ್ಲ?
ಹುಡುಗನ ತಂದೆಯ ಮೂಲವಾದ ಏನೆಂದರೆ, ಘಾನಾ ಸಂಪ್ರದಾಯದ ಪ್ರಕಾರ ಮೂರು ವರ್ಷದ ವರೆಗೆ ಮಕ್ಕಳ ಕೂದಲು ಕತ್ತರಿಸುವಂತಿಲ್ಲ. ಬಳಿಕ ಕೂದಲು ಕತ್ತರಿಸಬಹುದು. ಆದರೆ ಮೂರು ವರ್ಷವಾಗುವಷ್ಟರಲ್ಲಿ ಬಾಲಕನ ಕೂದಲು ಸೊಂಪಾಗಿ ಬೆಳೆದಿದೆ. ಇಷ್ಟೊಂದು ಉದ್ದವಿರುವ ಕೂದಲನ್ನು ಕತ್ತರಿಸಲು ಮನಸಾಗಿಲ್ಲ. ಕೂದಲಿನ ಅತೀವ ಪ್ರೀತಿ ಹೊಂದಿರುವುದರಿಂದ ಉಳಿಸಿಕೊಂಡಿದ್ದೇವೆ ಎಂದು ತಾಯಿ ಹೇಳಿದ್ದಾರೆ.
ನ್ಯಾಯಕ್ಕಾಗಿ ಆಗ್ರಹಿಸಿದ ಬಾಲಕನ ತಾಯಿ!
ವಿದ್ಯಾಬ್ಯಾಸಕ್ಕಾಗಿ ಬರುವ ಹುಡುಗಿಯರು ಉದ್ದ ಕೂದಲು ಹೊಂದಬಹುದು. ಉದ್ದ ಕೂದಲು ಇರುವ ಹುಡುಗರು ಶಾಲೆಗೆ ಪ್ರವೇಶಿಸಲು ಯಾಕೆ ಆಕ್ಷೇಪ? ಅಷ್ಟಕ್ಕೂ ಕೂದಲಿನ ವಿಷಯದಲ್ಲಿ ಅಸಮಾನತೆ ಯಾಕೆ? ಎಂದು ಬಾಲಕನ ತಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಆಕೆ ಚೇಂಜ್.ಆರ್ಗ್ ಮೂಲಕ ಅರ್ಜಿ ಸಲ್ಲಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

ನೋಡಿರಿ

