ಅಮ್ಮನೊಂದಿಗೆ ಚಿರತೆ ಮರಿ ತುಂಟಾಟ – ಖುಷಿ ನೀಡುತ್ತದೆ ಅಪರೂಪದ ದೃಶ್ಯ

ಅಮ್ಮನೊಂದಿಗೆ ಚಿರತೆ ಮರಿ ತುಂಟಾಟ – ಖುಷಿ ನೀಡುತ್ತದೆ ಅಪರೂಪದ ದೃಶ್ಯ

ಈ ಪ್ರಾಣಿಗಳ ಆಟ, ತುಂಟಾಟ ನೋಡುವುದೇ ಚೆಂದ. ಈಗಷ್ಟೇ ಜಗತ್ತನ್ನು ಕುತೂಹಲದಿಂದ ನೋಡುವ ಈ ಪುಟಾಣಿಗಳಿಗೆ ಎಲ್ಲವೂ ಅಚ್ಚರಿಯೇ. ಅವುಗಳ ಆಟ ನೋಡುತ್ತಿದ್ದರೆ ಹಾಗೆಯೇ ಕಳೆದು ಬಿಡುತ್ತೇವೆ. ಆದರೆ ವನ್ಯಜೀವಿಗಳ ಇಂತಹ ದೃಶ್ಯ ತುಂಬಾ ಅಪರೂಪ. ಸಫಾರಿಗೆ ಹೋದ ವೇಳೆ ಇಂತಹ ಅಪರೂಪದ ದೃಶ್ಯಗಳು ಕಾಣಸಿಗುತ್ತವೆ. ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇಲ್ಲೊಂದು ಚಿರತೆ ಮರಿ ತನ್ನ ತಾಯಿ ಜೊತೆ ಆಟವಾಡುತ್ತಿದೆ. ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಆನೆಯೊಂದಿಗೆ ಯುವತಿಯ ಚೆಲ್ಲಾಟ – ಚೆಂಡಿನಂತೆ ಎತ್ತಿ ಬಿಸಾಡಿದ ಗಜರಾಜ

ಐಎಎಸ್ ಅಧಿಕಾರಿ ಎಂವಿ ರಾವ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಚಿರತೆ ಮರಿಯೊಂದು ತನ್ನ ಅಮ್ಮನೊಂದಿಗೆ ಖುಷಿಯಿಂದ ಆಟ ಆಡುವ ದೃಶ್ಯ. ಈ ತಾಯಿ ಕೂಡಾ ಆಟದಲ್ಲಿ ಜತೆಯಾಗಿ ಸಂಭ್ರಮಿಸಿದೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ ಚಿರತೆಯೊಂದು ತನ್ನ ಮರಿಯೊಂದಿಗೆ ಪೊದೆಯ ಬದಿಯಲ್ಲಿ ಮಲಗಿಕೊಂಡಿರುತ್ತದೆ. ಚಿರತೆ ಮರಿ ಅಮ್ಮನ ಬಾಲ ಹಿಡಿದು ಆಟವಾಡಲು ಶುರುಮಾಡುತ್ತದೆ. ಈ ವೇಳೆ ತಾಯಿ ಚಿರತೆ ಕೂಡ ತನ್ನ ಮರಿಯೊಂದಿಗೆ ಆಟದಲ್ಲಿ ಜೊತೆಯಾಗುತ್ತದೆ. ತನ್ನ ಕಂದನನ್ನು ನಿಧಾನಕ್ಕೆ ತನ್ನತ್ತ ಎಳೆದುಕೊಂಡು ಬಿಗಿದಪ್ಪಿಕೊಂಡಿದೆ. ಸದ್ಯ ಈ ಸುಂದವಾದ ದೃಶ್ಯ ಎಲ್ಲರ ಮನ ಗೆದ್ದಿದ್ದು, ಒಂದು ಕ್ಷಣ ನಮ್ಮನ್ನು ನಾವೇ ಮರೆಯುವಂತೆ ಮಾಡುತ್ತದೆ.

suddiyaana