ಅತ್ತೆ ಜೊತೆ ಅಳಿಯನ ಡಿಂಗ್ ಡಾಂಗ್ – ಮಗಳ ಗಂಡನ ಜೊತೆ 55 ವರ್ಷದ ಆಂಟಿ ಎಸ್ಕೇಪ್..!

ಕಾಲ ಕೆಟ್ಟುಹೋಯ್ತು ಅನ್ನೋದು ಇಂಥಾ ವಿಚಾರಕ್ಕೆ ಅನ್ನಿಸುತ್ತೆ. ಯಾಕಂದರೆ, ಇಲ್ಲಿ ಅತ್ತೆ ಅಳಿಯನನ್ನೇ ಲವ್ ಮಾಡಿದ್ದಾಳೆ. ಅಳಿಯ ಕೂಡಾ ಅತ್ತೆ ಜೊತೆ ಸರಸ ಸಲ್ಲಾಪ ಮಾಡಿಕೊಂಡು ಕೊನೆಗೂ ಅತ್ತೆಯನ್ನೇ ಓಡಿಸಿಕೊಂಡು ಹೋಗಿದ್ದಾನೆ. ಮಗಳ ಜೀವನ ಚೆನ್ನಾಗಿರಬೇಕು ಅಂತಾ ಅಮ್ಮ ಬಯಸಬೇಕು. ಆದರೆ, ಈ ತಾಯಿ ತನ್ನ ಮಗಳ ಗಂಡನ ಜೊತೆಯೇ ಪರಾರಿಯಾಗಿದ್ದಾಳೆ.
ದಾವಣಗೆರೆ ಜಿಲ್ಲೆಯಲ್ಲಿ ಇಂಥಾ ಒಂದು ವಿಚಾರ ಬೆಳಕಿಗೆ ಬಂದಿದೆ. 55 ವರ್ಷದ ಶಾಂತಾ ಎಂಬ ಮಹಿಳೆ ಜೊತೆ 25 ವರ್ಷದ ಗಣೇಶ್ ಎಸ್ಕೇಪ್ ಆಗಿದ್ದಾನೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ನಿವಾಸಿ ಶಾಂತ ಎಂಬ ಮಹಿಳೆ 13 ವರ್ಷಗಳ ಹಿಂದೆ ನಾಗರಾಜ್ ಎಂಬಾತನನ್ನು 2ನೇ ಮದುವೆ ಆಗಿದ್ದಳು. ನಾಗರಾಜ್ ಅವರ ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಮಗ. ನಾಗರಾಜ್ ಜೊತೆ ಹಿರಿಯ ಮಗಳು ಹೇಮಾ ವಾಸವಿದ್ದರು. ಎರಡು ವರ್ಷಗಳ ಹಿಂದೆ ಗಣೇಶನನ್ನು ಮನೆಗೆ ಕರೆದುಕೊಂಡು ಬಂದಿದ್ದ ಶಾಂತಾ, ಮಗಳನ್ನು ಮದುವೆ ಮಾಡಿಕೊಡೋಣ ಮನೆ ಅಳಿಯ ಆಗಿ ಇರ್ತಾನೆ ಎಂದು ನಂಬಿಸಿದ್ದರು. ಎರಡು ತಿಂಗಳ ಹಿಂದೆ ಅದ್ದೂರಿಯಾಗಿ ಗಣೇಶ ಜೊತೆ ಹಿರಿಯ ಮಗಳು ಹೇಮಾ ಜೊತೆ ನಾಗರಾಜ್ ವಿವಾಹ ಮಾಡಿದ್ದರು. ಮಗಳಿಗೆ ಮದುವೆ ಮಾಡಿಕೊಟ್ಟ 15 ದಿನಕ್ಕೆ 25 ವರ್ಷದ ಅಳಿಯನ ಜೊತೆ ಈ 55ರ ಅತ್ತೆಯ ಅಕ್ರಮ ಸಂಬಂಧ ಬಯಲಾಗಿದೆ. ಇಬ್ಬರ ಸರಸವನ್ನು ಮೊಬೈಲ್ನಲ್ಲಿ ನೋಡಿದ ಮಗಳು ಶಾಕ್ ಆಗಿದ್ದಾಳೆ.
ಇನ್ನು ಮಲತಾಯಿ ಶಾಂತಾ, ಗಣೇಶನನ್ನು ಒತ್ತಾಯಪೂರ್ವಕವಾಗಿಯೇ ಮದುವೆ ಮಾಡಿಸಿದ್ದಾಳೆ ಅಂತಾ ಹೇಳಲಾಗುತ್ತಿದೆ. ಆ ಹುಡುಗ ಬೇಡ ನಾನು ಓದಲು ಹಾಸ್ಟೆಲ್ಗೆ ಹೋಗ್ತೀನಿ ಅಂದ್ರು ಬಿಡದ ಶಾಂತ, ಮಲ ಮಗಳನ್ನು ಒಪ್ಪಿಸಿ ಗಣೇಶ್ ಎಂಬ ಯುವಕನ ಜೊತೆ ಮದುವೆ ಮಾಡಿಸಿದ್ದಾಳೆ ಎನ್ನಲಾಗ್ತಿದೆ. ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ಗಣೇಶ್ ಜೊತೆ ನಾಗರಾಜ್ ಮಗಳು ಹೇಮಾ ಮದುವೆ ಅದ್ದೂರಿಯಾಗಿಯೇ ನಡೆದಿತ್ತು. ಮದುವೆಯಾದ 15 ದಿನಕ್ಕೆ ಅಳಿಯನ ಜೊತೆ ಅತ್ತೆ ಅಕ್ರಮ ಸಂಬಂಧ ಹೊಂದಿರುವುದು ಗೊತ್ತಾಗಿದೆ. ಮೊಬೈಲ್ ನಲ್ಲಿ ಅಶ್ಲೀಲ ಮೆಸೇಜ್, ಫೋಟೋ ನೋಡಿ ಮಗಳು ಶಾಕ್ ಆಗಿದ್ದಾಳೆ. ಗಂಡ ಹಾಗೂ ಮಲತಾಯಿಯ ಸರಸ ಕಂಡು ಮನೆಯವರು ಬೆಚ್ಚಿಬಿದ್ದಿದ್ದಾರೆ. ಇವರ ಅಕ್ರಮ ಸಂಬಂಧ ಬೆಳಕಿಗೆ ಬರ್ತಿದ್ದಂತೆ ಹಣ, ಆಭರಣ ಕದ್ದು ಶಾಂತಾ, ಅಳಿಯನ ಜೊತೆ ಎಸ್ಕೇಪ್ ಆಗಿದ್ದಾಳೆ.
ಗಣೇಶ್ ಸ್ವಂತ ಹೆಂಡತಿ ಹೇಮಾಳನ್ನ ಚನ್ನಗಿರಿ ಬಸ್ ಸ್ಟಾಫ್ ನಲ್ಲಿ ಬಿಟ್ಟು ಅತ್ತೆ ಜೊತೆ ಪರಾರಿಯಾಗಿದ್ದಾನೆ ಎನ್ನಲಾಗ್ತಿದೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೋಡಿರಿ

