ಅಳಿಯನ ಜೊತೆ ಅತ್ತೆಯ ಲವ್ ಸ್ಟೋರಿ – ಮಗಳ ಮದುವೆಗೂ ಮುನ್ನ ಅಮ್ಮನೇ ಪರಾರಿ

ಮಗಳು ಮದುವೆಯಾಗಬೇಕಿದ್ದ ಯುವಕನ ಜೊತೆಗೆ ಅಮ್ಮನೇ ಪರಾರಿಯಾಗಿರುವ ಘಟನೆಯೊಂದು ನಡೆದಿದೆ. ಮಗಳ ಮದುವೆ 10 ದಿನ ಬಾಕಿ ಇರುವಾಗಲೇ ಅಮ್ಮ, ತನ್ನ ಭಾವಿ ಅಳಿಯನ ಜತೆ ಓಡಿ ಹೋಗಿದ್ದಾರೆ. ಕೊನೆಗೂ ಅತ್ತೆ ಮತ್ತು ಅಳಿಯ ಪ್ರೇಮ್ ಕಹಾನಿಗೆ ಪೊಲೀಸರೇ ಬ್ರೇಕ್ ಹಾಕಿದ್ದಾರೆ. ಆದ್ರೂ ಕೂಡಾ ಅತ್ತೆ ಅಳಿಯನೇ ನನ್ನ ಪ್ರಿಯಕರ ಅಂತಾ ಹೇಳಿದ್ದು, ಅಳಿಯ ಕೂಡಾ ನಾನು ಅತ್ತೆ ಜೊತೆಯಲ್ಲೇ ಸಂಸಾರ ಮಾಡುತ್ತೇನೆ ಅಂತಾ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ:ಯುಪಿಐ ಬಳಕೆದಾರರಿಗೆ ಶಾಕ್ – ಇನ್ಮುಂದೆ ಟ್ರಾನ್ಸಾಕ್ಷನ್‌ಗೂ ಶುಲ್ಕ?
ಮಗಳ ಮದುವೆಗೆ ಕೇವಲ 10 ದಿನಗಳು ಮಾತ್ರ ಬಾಕಿಯಿತ್ತು. ಮಗಳನ್ನು ಮದುವೆಯಾಗಬೇಕಿದ್ದ ವರನ ಜೊತೆ ಅತ್ತೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಅಳಿಯನ ಜೊತೆ ಓಡಿ ಹೋಗಿ ಸಿಕ್ಕಿಬಿದ್ದಿರುವ ಅತ್ತೆ ಹೆಸರು ಅಪ್ನಾ ದೇವಿ. ಭಾವಿ ಅಳಿಯನ ಹೆಸರು ರಾಹುಲ್.
ಅಪ್ನಾಗೆ 34 ವರ್ಷ ವಯಸ್ಸಾದರೆ, ರಾಹುಲ್‌ಗೆ 24 ವರ್ಷ. ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿದ ಮೇಲೆ ಅಪ್ನಾ, ಮಗಳಿಗೆ ಹುಡುಗನ ಹುಡುಕುವ ನಾಟಕವಾಡಿದ್ದಳು. ರಾಹುಲ್ ಗೆ ಮಗಳನ್ನ ಕೊಡಲು ಮುಂದಾಗಿದ್ದಳು. ಇತ್ತ ಭಾವಿ ಹೆಂಡತಿ ಮನೆಗೆ ರಾಹುಲ್ ಆಗಾಗ ಬರುತ್ತಿದ್ದ. ಎಲ್ರೂ ಅಪ್ನಾ ಮಗಳನ್ನ ನೋಡಲು ರಾಹುಲ್ ಬರುತ್ತಿರಬಹುದು ಅಂತಾನೇ ಭಾವಿಸಿದ್ದರು. ಆದರೆ, ಮನೆಯಲ್ಲಿ ಅತ್ತೆ ಮತ್ತು ಅಳಿಯನ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು. ನಂತರ ಮದುವೆಗೆ ಕೇವಲ 10 ದಿನ ಬಾಕಿಯಿರುವಾಗ ಇಬ್ಬರೂ ನಾಪತ್ತೆಯಾಗಿದ್ದರು. ಕೊನೆಗೂ ಇಬ್ಬರು ನಾಪತ್ತೆಯಾದ 10 ದಿನಗಳ ನಂತರ ಪೊಲೀಸರು ನೇಪಾಳದ ಗಡಿಯಲ್ಲಿ ಇಬ್ಬರನ್ನೂ ಬಂಧಿಸಿದ್ದಾರೆ.
ಈ ಸುದ್ದಿ ಗೊತ್ತಾಗುತ್ತಿದ್ದಂತೆ ಯುವಕನ ತಂದೆ ಆತನಿಗೆ ಆಸ್ತಿಯಲ್ಲಿ ಕಿಂಚಿತ್ತೂ ಪಾಲು ಕೊಡುವುದಿಲ್ಲ ಎಂದು ಘೋಷಿಸಿದ್ದಾರೆ. ರಾಹುಲ್ ತಂದೆ ತನ್ನ ಮಗನೊಂದಿಗಿರುವ ಎಲ್ಲಾ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದಾರೆ. ರಾಹುಲ್ ಕುಟುಂಬಕ್ಕೆ ಕಳಂಕ ತಂದಿದ್ದಲ್ಲದೆ, ನಗದು, ಆಭರಣಗಳೊಂದಿಗೆ ಮನೆಯಿಂದ ಹೊರಟು ಹೋಗಿದ್ದಾನೆ. ಇನ್ನುಮುಂದೆ ಆತನಿಗೆ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಅಪ್ನಾ ಪತಿ ಜಿತೇಂದ್ರ ಕೂಡಾ ನನ್ನ ಪಾಲಿಗೆ ಅವಳು ಸತ್ತಿದ್ದಾಳೆ ಎಂದು ತಿಳಿಸಿದ್ದಾರೆ. ಪೊಲೀಸರ ವಿಚಾರಣೆ ಸಮಯದಲ್ಲಿ ತಾನು ಓಡಿ ಹೋಗಿದ್ದೇಕೆ ಎನ್ನುವ ವಿಚಾರವನ್ನು ಅಪ್ನಾ ಬಹಿರಂಗಗೊಳಿಸಿದ್ದಾರೆ. ನನ್ನ ಪತಿ ಮದ್ಯವ್ಯಸನಿಯಾಗಿದ್ದು, ಆಗಾಗ ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದ, ಅವನಿಗೆ ಕೆಲಸವಿರಲಿಲ್ಲ, ಒಮ್ಮೆ ನಾನು ಮನೆಯಿಂದ 1,500 ರೂ. ತೆಗೆದುಕೊಂಡು ಹೋಗಿದ್ದೆ, ಬೆಳಗ್ಗೆಯಿಂದ ರಾತ್ರಿವರೆಗೆ ನನ್ನನ್ನು ಥಳಿಸಿದ್ದ ಎಂದು ಅಳಲು ತೋಡಿಕೊಂಡಿದ್ದಾರೆ. ರಾಹುಲ್ನನ್ನು ನಾನು ಪ್ರೀತಿ ಮಾಡುತ್ತಿದ್ದೇನೆ. ತನ್ನ ಗಂಡನ ಬಳಿಗೆ ಮರಳುವ ಉದ್ದೇಶವಿಲ್ಲ ಮತ್ತು ರಾಹುಲ್ ಜೊತೆ ವಾಸಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಗಂಡ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ, ನಾನು ಯಾವುದೇ ಚಿನ್ನ ಅಥವಾ ನಗದನ್ನು ತೆಗೆದುಕೊಂಡು ಬಂದಿಲ್ಲ. ನೋವಿನಿಂದ ತುಂಬಿದ ಜೀವನವನ್ನು ಬಿಟ್ಟು ಹೋಗಲು ನಾನು ಬಯಸಿದ್ದೆ. ನಾನು ರಾಹುಲ್ ಜೊತೆ ಇರಲು ಬಯಸುತ್ತೇನೆ. ನನ್ನನ್ನು ಎಂದಿಗೂ ಕಾಳಜಿ ವಹಿಸದ ವ್ಯಕ್ತಿಯ ಬಳಿಗೆ ನಾನು ಹಿಂತಿರುಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನೋಡಿರಿ

