ಮಗಳನ್ನ ಮನೆಯಲ್ಲೇ ಲಾಕ್‌ ಮಾಡಿ ಸ್ಕೂಲ್‌ಗೆ ಹೊರಟ ತಾಯಿ! –  ಅಯ್ಯಯೋ.. ಆಮೇಲೆ ಏನಾಯ್ತು?

ಮಗಳನ್ನ ಮನೆಯಲ್ಲೇ ಲಾಕ್‌ ಮಾಡಿ ಸ್ಕೂಲ್‌ಗೆ ಹೊರಟ ತಾಯಿ! –  ಅಯ್ಯಯೋ.. ಆಮೇಲೆ ಏನಾಯ್ತು?

ಮಕ್ಕಳು ಅಂದ್ರೆನೇ ಹಾಗೆ ತಂದೆ, ತಾಯಿ ಮಾತು ಕೇಳುವುದೇ ಇಲ್ಲ. ಆಟದಲ್ಲೇ ತಮ್ಮನ್ನ ತಾವು ತೊಡಗಿಸಿಕೊಂಡು ಇರ್ತಾರೆ. ಇನ್ನು ಸ್ಕೂಲ್‌ಗೆ ಹೊರಡುವಾಗಲಂತೂ ಏನೇನೋ ಕಾರಣ ಕೊಟ್ಟು ಶಾಲೆ ಹೋಗುವುದನ್ನು ತಡೆಯುತ್ತಾರೆ. ಆದ್ರೆ ಇಲ್ಲೊಂದು ಕಡೆ ಮಗಳು ಸ್ಕೂಲ್‌ಗೆ ಹೋಗಲು ರೆಡಿಯಾಗಿದ್ರೂ ತಾಯಿಯೇ ಆಕೆಯನ್ನು ಬಿಟ್ಟು ಹೋಗಿದ್ದಾರೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಸಾಹಸ ಸಿಂಹ ವಿಷ್ಣುವರ್ಧನ್‌ ಬ್ಯಾನರ್‌ಗೆ ವಿದ್ಯಾರ್ಥಿಗಳಿಂದ ಅಪಮಾನ! – ಮಕ್ಕಳು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ಪೋಷಕರು!

ಮಕ್ಕಳನ್ನ ರೆಡಿ ಮಾಡಿ, ಸ್ಕೂಲ್‌ಗೆ ಕಳುಹಿಸಿದ್ರೆ, ಅಮ್ಮಂದಿರ ದಿನದ ಅರ್ಧ ಕೆಲಸ ಮುಗಿದಂತೆ ಲೆಕ್ಕ. ಆದ್ರೆ ಇಲ್ಲೊಂದು ಕಡೆ ಮಗಳು ಸ್ಕೂಲ್‌ಗೆ ಹೋಗಲು ರೆಡಿ ಇದ್ರೂ, ತಾಯಿಯೇ ಮಗಳನ್ನ ಬಿಟ್ಟು ಹೋಗಿದ್ದಾರೆ. ಈ ದೃಶ್ಯ ಮನೆಯ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದ್ದು, ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈಲ್‌ ಆಗಿದೆ.

ಈ ವಿಡಿಯೋವನ್ನು @TheFigen_ ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಮಹಿಳೆಯೊಬ್ಬರು ಮನೆಯಿಂದ ಸ್ಕೂಲ್‌ ಬ್ಯಾಗ್‌ ಹಿಡಿದು, ಅವಸರದಲ್ಲಿ ಹೊರಗೆ ಬಂದಿದ್ದಾರೆ. ಬಳಿಕ ಮನೆಯ ಗೇಟ್ ತೆಗೆದು ಲಾಕ್‌ ಮಾಡಿಕೊಂಡು ಹೋಗಿದ್ದಾರೆ. ಆದ್ರೆ ಮಗಳು ತನ್ನ ಜೊತೆ ಬಂದಿದ್ದಾಳಾ ಇಲ್ವಾ ಎಂದು ಯೋಚನೆ ಮಾಡಿಲ್ಲ. ಬ್ಯಾಗ್‌ ಹಿಡಿದು ರಸ್ತೆಯಲ್ಲಿ ಮುಂದೆ ಸಾಗಿದ್ದಾರೆ. ಅಷ್ಟರಲ್ಲಿ ಹಿಂದೆಯಿಂದ ಓಡಿ ಬರುವ ಮಗು ತಾಯಿಯನ್ನು ಕೂಗಿದ್ದಾಳೆ. ಮಗಳ ಧ್ವನಿ ಕೇಳಿ ಬಂದ ತಾಯಿ ಗೇಟ್ ಓಪನ್ ಮಾಡ್ತಾರೆ. ಬಳಿಕ ಆಕೆಯನ್ನ ಕರೆದುಕೊಂಡ ಸ್ಕೂಲ್‌ಗೆ ಹೋಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಒಂದೇ ದಿನದಲ್ಲಿ 1.4 ಮಿಲಿಯನ್‌ಗೂ ಅಧಿಕ  ವೀಕ್ಷಣೆ ಪಡೆದುಕೊಂಡಿದೆ. ಇದೀಗ ಸೋಶಿಯಲ್‌ ಮೀಡಿಯಾ ಬಳಕೆದಾರರು ಮಹಿಳೆಯರ ಜವಾಬ್ದಾರಿಗಳು ಇಂದು ಅವರ ಮಾನಸಿಕ ಆರೋಗ್ಯದ ಮೇಲೆ ಒತ್ತಡವನ್ನುಂಟು ಮಾಡುತ್ತಿವೆ. ಇಡೀ ಮನೆಯನ್ನು ನಿರ್ವಹಣೆ ಮಾಡೋದು ಅಷ್ಟು ಸುಲಭದ ಕೆಲಸವಲ್ಲ. ಬೆಳಗ್ಗೆ ಎದ್ದಾಗ ಆರಂಭವಾಗುವ ಕೆಲಸ, ರಾತ್ರಿ ನಿದ್ದೆಗೆ ಜಾರುವರೆಗೂ ಅಂದ್ರೆ ದಿನಕ್ಕೆ 18 ಗಂಟೆ ಕೆಲಸ ಮಾಡ್ತಾರೆ. ಹಾಗಾಗಿ ಮಹಿಳೆಯರ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ಈ ಒತ್ತಡದಿಂದ ಮಹಿಳೆಯರು ಮಾನಸಿಕವಾಗಿಯೂ ಕುಗ್ಗುವ ಸಾಧ್ಯತೆಗಳಿರುತ್ತವೆ. ಆದ್ರಿಂದ ಮನೆಗೆಲಸಗಳಲ್ಲಿ ಪುರುಷರು ಭಾಗಿಯಾಗಬೇಕು ಎಂದು ಹಲವು ಮಹಿಳೆಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Shwetha M