ಮಕ್ಕಳ ಶುಲ್ಕ ಭರಿಸಲು ಸಾಧ್ಯವಾಗದೇ ಅಮ್ಮನ ಹತಾಶೆ – ಸತ್ತರೆ ಪರಿಹಾರ ಸಿಗಬಹುದು ಎಂದು ಬಸ್‌ಗೆ ಅಡ್ಡಬಂದು ಪ್ರಾಣಬಿಟ್ಟ ತಾಯಿ..!

ಮಕ್ಕಳ ಶುಲ್ಕ ಭರಿಸಲು ಸಾಧ್ಯವಾಗದೇ ಅಮ್ಮನ ಹತಾಶೆ – ಸತ್ತರೆ ಪರಿಹಾರ ಸಿಗಬಹುದು ಎಂದು ಬಸ್‌ಗೆ ಅಡ್ಡಬಂದು ಪ್ರಾಣಬಿಟ್ಟ ತಾಯಿ..!

ಇಲ್ಲೊಬ್ಬಳು ತಾಯಿ ತನ್ನ ಮಕ್ಕಳಿಗಾಗಿ ದಾರುಣವಾಗಿ ಅಂತ್ಯಕಂಡಿದ್ದಾಳೆ. ತಾನು ಸತ್ತರೆ ಪರಿಹಾರದ ದುಡ್ಡು ಸಿಗಬಹುದು. ಇದರಿಂದ ತನ್ನ ಮಗನ ಶುಲ್ಕ ಕಟ್ಟಬಹುದು ಎಂದು ತನ್ನ ಪ್ರಾಣವನ್ನೇ ಬಿಟ್ಟಿದ್ದಾಳೆ. ಸೇಲಂನ ಕಲೆಕ್ಟರ್ ಕಚೇರಿಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಈ ಮಹಿಳೆ ಕೆಲಸ ಮಾಡುತ್ತಿದ್ದರು. ಪಾಪದ ತಾಯಿಯ ಈ ದಾರುಣ ಮರಣಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ:  ಉದ್ಯಮಿಯಿಂದ ಹಣ ಕೀಳಲು ರೇಪ್ ಕೇಸ್ ಡ್ರಾಮಾ – ಗುಪ್ತಾಂಗಕ್ಕೆ ಕೋಳಿ ರಕ್ತ ಹಚ್ಚಿಕೊಂಡ ಚಾಲಾಕಿ ಹೆಣ್ಣಿನ ಬಣ್ಣ ಬಯಲು..!

ತಮಿಳುನಾಡಿನಲ್ಲಿ 45 ವರ್ಷದ ಪಾಪತಿ ಎಂಬಾಕೆ ಪತಿಯಿಂದ ಬೇರ್ಪಟ್ಟ ನಂತರ ಕಳೆದ 15 ವರ್ಷಗಳಿಂದ ಮಹಿಳೆ ಬೇರೆ ಮನೆ ಮಾಡಿಕೊಂಡಿದ್ದರು. ಮಕ್ಕಳನ್ನು ತಾನೇ ನೋಡಿಕೊಳ್ಳುತ್ತಿದ್ದರು. ಸೇಲಂನ ಕಲೆಕ್ಟರ್ ಕಚೇರಿಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಈ ಮಹಿಳೆ ಕೆಲಸ ಮಾಡುತ್ತಿದ್ದರು. ಮಗಳು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಕೋರ್ಸ್ ಅಂತಿಮ ವರ್ಷದಲ್ಲಿ ಓದುತ್ತಿದ್ದಾಳೆ. ಮಗ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಓದುತ್ತಿದ್ದಾನೆ. ಆದರೆ, ಬಡತಾಯಿಗೆ ಮಕ್ಕಳ ಶುಲ್ಕ ಭರಿಸುವುದೇ ಕಷ್ಟವಾಗಿತ್ತು. ಹೀಗಾಗಿ ಅಪಘಾತಕ್ಕೊಳಗಾದರೆ ಪರಿಹಾರದ ಹಣ ಮಕ್ಕಳಿಗೆ ಸಿಗಬಹುದು ಎಂದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈಕೆ ಮೊದಲು ಬಸ್ಸಿನ ಮುಂದೆ ಜಿಗಿಯಲು ಪ್ರಯತ್ನಿಸಿದ್ದರು. ಆದರೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆಯಿತು. ಸ್ವಲ್ಪ ಸಮಯದ ನಂತರ ರಸ್ತೆ ದಾಟಲು ಪ್ರಯತ್ನಿಸುವವಳಂತೆ ಮತ್ತೊಂದು ಬಸ್‌ಗೆ ಅಡ್ಡಲಾಗಿ ಹೋಗಿದ್ದಾರೆ. ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದಾರೆ. ಮಗನ ಕಾಲೇಜು ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ ಮಹಿಳೆ ಖಿನ್ನತೆಗೆ ಒಳಗಾಗಿದ್ದರು.

ಅಪಘಾತ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ಸಿಗುತ್ತದೆ ಎಂದು ಯಾರೋ ಆ ಮಹಿಳೆಯನ್ನು ತಪ್ಪುದಾರಿಗೆಳೆದಿದ್ದಾರೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಆರಂಭದಲ್ಲಿ, ನಾವು ಅಪಘಾತದಿಂದ ಸಾವಿನ ಪ್ರಕರಣವನ್ನು ದಾಖಲಿಸಿದ್ದೇವೆ. ಈಗ ನಾವು ಅದನ್ನು ಬದಲಾಯಿಸುತ್ತಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

suddiyaana