ಭಾರತದಲ್ಲೇ ಅತೀ ಹೆಚ್ಚು ಅವಧಿಪೂರ್ವ ಶಿಶುಗಳ ಜನನ! – ಅಧ್ಯಯನದಲ್ಲಿ ಶಾಕಿಂಗ್‌ ವಿಚಾರ ಬಯಲು!

ಭಾರತದಲ್ಲೇ ಅತೀ ಹೆಚ್ಚು ಅವಧಿಪೂರ್ವ ಶಿಶುಗಳ ಜನನ! – ಅಧ್ಯಯನದಲ್ಲಿ ಶಾಕಿಂಗ್‌ ವಿಚಾರ ಬಯಲು!

ನವದೆಹಲಿ: ಬಹುತೇಕ ಮಹಿಳೆಯರು ಹೆರಿಗೆ ಸಮಯದಲ್ಲಿ ಗರ್ಭಾವಸ್ಥೆಯಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ಎದುರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವಧಿಗೂ ಮುನ್ನವೇ ಹೆರಿಗೆಯಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದು, ಇದು  ಆತಂಕಕ್ಕೆ ಕಾರಣವಾಗುತ್ತಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಅಧ್ಯಯನ ನಡೆಸಿದ್ದು ಭಾರತದಲ್ಲಿ 2020ರಲ್ಲಿ 30.2 ಲಕ್ಷ ಶಿಶುಗಳು ಅವಧಿಗೆ ಮುನ್ನವೇ ಜನಿಸಿವೆ. ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಅವಧಿಪೂರ್ವ ಜನನ ಭಾರತದಲ್ಲೇ ಹೆಚ್ಚು(ಶೇ.20) ಎಂದು ಕಳವಳ ವ್ಯಕ್ತ ಪಡಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಈ ಅಧ್ಯಯನವನ್ನು ಯುನಿಸೆಫ್, ಲಂಡನ್‌ ಸ್ಕೂಲ್‌ ಆಫ್ ಹೈಜೀನ್‌ ಆ್ಯಂಡ್‌ ಟ್ರಾಪಿಕಲ್‌ ಮೆಡಿಸಿನ್‌ ನಡೆಸಿದೆ. ಪಾಕಿಸ್ತಾನ, ನೈಜೀರಿಯಾ, ಚೀನಾ, ಇಥಿಯೋಪಿಯಾ, ಬಾಂಗ್ಲಾದೇಶ, ಡೆಮಾಕ್ರಾಟಿಕ್‌ ರಿಪಬ್ಲಿಕ್‌ ಆಫ್ ಕಾಂಗೋ ಮತ್ತು ಅಮೆರಿಕ, ಭಾರತ ಮುಂತಾದ ರಾಷ್ಟ್ರಗಳಲ್ಲಿ ಅಧ್ಯಯನ ಕೈಗೊಳ್ಳಲಾಗಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಅವಧಿಗೂ ಮುನ್ನವೇ ಹೆಚ್ಚು ಶಿಶುಗಳು ಜನಿಸುತ್ತಿವೆ ಅಂತಾ ವರದಿಯಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ: ಲಕ್ಷಾಂತರ ಜನರ ಫೋನ್‌ಗೆ ಬಂತು ಎಮರ್ಜೆನ್ಸಿ ಅಲರ್ಟ್‌ ಮೆಸೇಜ್‌! –  ಸರ್ಕಾರ ಸಂದೇಶ ಕಳುಹಿಸಿದ್ದು ಯಾಕೆ ಗೊತ್ತಾ?

ಹೆಚ್ಚಿನ ಪ್ರಮಾಣದ ಜನಸಂಖ್ಯೆ, ಅವರಿಗೆ ನೀಡಲಾಗುತ್ತಿರುವ ಆರೋಗ್ಯ ವ್ಯವಸ್ಥೆ, ಸರಿಯಾದ ರೀತಿಯಲ್ಲಿ ಕುಟುಂಬ ಯೋಜನೆಯನ್ನು ಅನುಷ್ಠಾನ ಮಾಡದೇ ಇರುವುದು ಅವಧಿ ಪೂರ್ವ ಶಿಶುಗಳ ಜನನಕ್ಕೆ ಕಾರಣ ಎಂದು ಕಾರಣಗಳನ್ನು ಗುರುತಿಸಲಾಗಿದೆ. 2020ರಲ್ಲಿ ಜಗತ್ತಿನಾದ್ಯಂತ 1.34 ಕೋಟಿ ಮಕ್ಕಳು ಅವಧಿಪೂರ್ವವಾಗಿ ಜನಿಸಿದ್ದವು. ಈ ಪೈಕಿ 10 ಲಕ್ಷ ಶಿಶುಗಳು ಜನನದ ಹಂತದಲ್ಲಿಯೇ ಸಾವನ್ನಪ್ಪುತ್ತವೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

Shwetha M