IPLನಲ್ಲಿ ಕ್ಯಾಪ್ಟನ್ಸ್ ಸಿಕ್ಕಾಪಟ್ಟೆ ಕಾಸ್ಟ್ಲಿ – ಟ್ರೇಡ್ ವಿಂಡೋನಲ್ಲಿ ಎಷ್ಟು ರೇಟ್?
RCB ಪ್ಲೇಯರ್ಸ್ ಗೂ ಬಿಗ್ ಬಜೆಟ್!

IPLನಲ್ಲಿ ಕ್ಯಾಪ್ಟನ್ಸ್ ಸಿಕ್ಕಾಪಟ್ಟೆ ಕಾಸ್ಟ್ಲಿ – ಟ್ರೇಡ್ ವಿಂಡೋನಲ್ಲಿ ಎಷ್ಟು ರೇಟ್?RCB ಪ್ಲೇಯರ್ಸ್ ಗೂ ಬಿಗ್ ಬಜೆಟ್!

18 ಸೀಸನ್ ಮುಗಿಸಿ 19 ಆವೃತ್ತಿಯತ್ತ ಹೊರಟಿರೋ ಇಂಡಿಯನ್ ಪ್ರೀಮಿಯರ್ ಲೀಗ್ ದೊಡ್ಡ ದೊಡ್ಡ ವಹಿವಾಟುಗಳನ್ನೇ ನಡೆಸಿದೆ. ಆಟಗಾರರ ಎಕ್ಸ್​ಚೇಂಜ್ ಅಥವಾ ಖರೀದಿ ಮೂಲಕವೇ ತಂಡಗಳ ಸ್ಟ್ರೆಂಥ್ ಹೆಚ್ಚಿಸಿಕೊಂಡಿವೆ. ಈ ಸಲವೂ ಕೂಡ ಕೆಲ ತಂಡಗಳ ನಡುವೆ ಈಗಾಗ್ಲೇ ಡೀಲ್ ಸ್ಟಾರ್ಟ್ ಆಗಿದೆ. ಅದ್ರಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈ ಲಿಸ್ಟ್​ನಲ್ಲಿ ಮುಂಚೂಣಿಯಲ್ಲಿವೆ. ಈ ವರ್ಷವೂ ಹೈಯೆಸ್ಟ್ ರೇಟ್​ಗಳಿಗೆ ಟ್ರೇಡ್ ವಿಂಡೋ ಆಗೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ ಇಷ್ಟು ವರ್ಷಗಳ ದಾಖಲೆಗಳೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್.

ಇದನ್ನೂ ಓದಿ : ಇದೆಂಥಾ ವಿಚಿತ್ರ.. ಬೆಡ್‌ರೂಮ್‌ನಲ್ಲಿ ಹಾವುಗಳನ್ನ ಸಾಕಿದ ಯುವತಿ!

ದುಬಾರಿ ಮೊತ್ತದ ಟ್ರೇಡಿಂಗ್!

2024ರಲ್ಲಿ ಟ್ರೇಡ್ ವಿಂಡೋ ಮೂಲಕ ಪಾಂಡ್ಯ ಖರೀದಿ

ಗುಜರಾತ್ ನಿಂದ ಮುಂಬೈಗೆ 15 ಕೋಟಿಗೆ ಬಂದಿದ್ದ ಪಾಂಡ್ಯ

2024ರಲ್ಲಿ 17.5 ಕೋಟಿಗೆ ಆರ್ ಸಿಬಿ ಸೇರಿದ್ದ ಗ್ರೀನ್

ಡಿಸಿಯಲ್ಲಿದ್ದ ಠಾಕೂರ್ ಗೆ ಕೆಕೆಆರ್ ಟೀಂ 10.75ಕೋಟಿ

ಆವೇಶ್ ಖಾನ್ ಅವರನ್ನು ಲಕ್ನೋ ರಾಜಸ್ಥಾನಕ್ಕೆ 10 ಕೋಟಿ ರೂ

ಹರ್ಷಲ್ ಪಟೇಲ್ ಮತ್ತು ಡೇನಿಯಲ್ ಸ್ಯಾಮ್ಸನ್ ಆರ್ ಸಿಬಿಗೆ ಖರೀದಿ

ಡೆಲ್ಲಿ ಟ್ರೆಂಟ್ ಬೌಲ್ಟ್ ಅವರನ್ನು ಮುಂಬೈ ತಂಡಕ್ಕೆ 3.2 ಕೋಟಿ ರೂ ಒಪ್ಪಂದ

ಪಂಜಾಬ್ ರವಿಚಂದ್ರನ್ ಅಶ್ವಿನ್ ರನ್ನು ಡೆಲ್ಲಿ ಕ್ಯಾಪಿಟಲ್ಸ್‌ ಗೆ 7.6 ಕೋಟಿ ರೂ

ಕ್ವಿಂಟನ್ ಡಿ ಕಾಕ್ ಅವರನ್ನು ಆರ್​ಸಿಬಿಯು ಮುಂಬೈಗೆ 2.8 ಕೋಟಿ ರೂಪಾಯಿಗೆ

ಮೆಗಾ ಹರಾಜು ಮಾತ್ರವಲ್ಲದೆ ಟ್ರೇಡ್ ವಿಂಡೋನಲ್ಲೂ ಬಿಗ್ ಬಿಗ್ ಡೀಲ್​ಗಳು ನಡೆಯುತ್ತವೆ. ಅದ್ರಲ್ಲೂ ಈ ಬಾರಿ ದೊಡ್ಡ ದೊಡ್ಡ ಹೆಸರುಗಳೇ ಕೇಳಿ ಬರ್ತಿವೆ. ಅದ್ರಲ್ಲೂ ಕೆಲ ತಂಡಗಳಲ್ಲಿ ಕ್ಯಾಪ್ಟನ್ಸಿ ಆಫರ್ ಬೇರೆ ಇರೋದ್ರಿಂದ ಈ ಬಾರಿಯು ವಹಿವಾಟು ಜೋರಾಗಿರುತ್ತೆ.

Shantha Kumari