IPL ಮಿನಿ ಆಕ್ಷನ್ ನಲ್ಲಿ ಕುಬೇರರು – ವೆಂಕಿ, ರಸೆಲ್, ಪತಿರಾನ ಯಾರೆಲ್ಲಾ?
ಕಳಪೆ ಫಾರ್ಮ್.. UNSOLD ಟೆನ್ಷನ್!

ಐಪಿಎಲ್ ಅಭಿಮಾನಿಗಳ ಕಣ್ಣೆಲ್ಲಾ ಈಗ ಡಿಸೆಂಬರ್ 16ರ ಮೇಲೆ ನೆಟ್ಟಿದೆ. ಅದೇ ದಿನ ಮಿನಿ ಆಕ್ಷನ್ ನಡೆಯಲಿದ್ದು ಯಾವ್ಯಾವ ಆಟಗಾರರನ್ನ ಯಾವ್ಯಾವ ತಂಡಗಳು ಖರೀದಿ ಮಾಡುತ್ವೆ ಅನ್ನೋ ಕ್ಯೂರಿಯಾಸಿಟಿ ಇದೆ. ಮಿನಿ ಹರಾಜಿನಲ್ಲಿ ದುಬಾರಿ ಸಂಭಾವನೆ ಪಡೀತಿದ್ದ ಆಟಗಾರರೂ ಇದ್ದಾರೆ. 2026ರ ಐಪಿಎಲ್ಗೂ ಮುನ್ನ 10 ಫ್ರಾಂಚೈಸಿಗಳು ಟೋಟಲ್ ಆಗಿ 73 ಆಟಗಾರರನ್ನ ತಂಡದಿಂದ ರಿಲೀಸ್ ಮಾಡಿದ್ದಾರೆ. ಒಂದಷ್ಟು ಫ್ರಾಂಚೈಸಿಗಳು ಹೊಸಬರನ್ನ ಕೈಬಿಟ್ಟಿದ್ರೂ ಇನ್ನೂ ಕೆಲ ತಂಡಗಳು ದುಬಾರಿ ಆಟಗಾರರಿಗೇ ಗೇಟ್ಪಾಸ್ ಕೊಟ್ಟಿದ್ದಾರೆ. ಆದ್ರೆ ನೆಕ್ಸ್ಟ್ ಸೀಸನ್ಗೆ ಅವ್ರೆಲ್ಲಾ ಅದೇ ಮೊತ್ತಕ್ಕೆ ಖರೀದಿಯಾಗೋದು ಡೌಟ್ ಇದೆ. ಕೆಲವ್ರು ಅನ್ಸೋಲ್ಡ್ ಆದ್ರೂ ಅಚ್ಚರಿ ಪಡ್ಬೇಕಿಲ್ಲ.
ಇದನ್ನೂ ಓದಿ : ಒಂದೇ ವರ್ಷದಲ್ಲಿ 3 ದ್ವಿಶತಕ ಸಿಡಿಸಿದ ಕನ್ನಡಿಗ – ಸ್ಮರಣ್ ರವಿಚಂದ್ರನ್ ಬೊಂಬಾಟ್ ಬ್ಯಾಟಿಂಗ್
ಮಿನಿ ಆಕ್ಷನ್ ನಲ್ಲಿ ದುಬಾರಿ ಆಟಗಾರರು!
ಆಟಗಾರ ಸಂಭಾವನೆ 2025ರ ತಂಡ
ವೆಂಕಟೇಶ್ ಅಯ್ಯರ್ ₹23.75 ಕೋಟಿ ಕೆಕೆಆರ್
ಮತೀಶ ಪತಿರಾನ ₹13 ಕೋಟಿ ಸಿಎಸ್ ಕೆ
ಆಂಡ್ರೆ ರಸೆಲ್ ₹12 ಕೋಟಿ ಕೆಕೆಆರ್
ರವಿ ಬಿಷ್ಣೋಯ್ ₹11 ಕೋಟಿ ಎಲ್ ಎಸ್ ಜಿ
ಜೇಕ್ ಫ್ರೇಸರ್ ಮೆಕ್ ಗುರ್ಕ್ ₹9 ಕೋಟಿ ಡಿಸಿ
ಲಿಯಾಮ್ ಲಿವಿಂಗ್ ಸ್ಟನ್ ₹8.75 ಕೋಟಿ ಆರ್ ಸಿಬಿ
ಆಕಾಶ್ ದೀಪ್ ₹ 8 ಕೋಟಿ ಎಲ್ ಎಸ್ ಜಿ
ಡೇವಿಡ್ ಮಿಲ್ಲರ್ ₹7.50 ಕೋಟಿ ಎಲ್ ಎಸ್ ಜಿ
ಅನ್ರಿಚ್ ನಾರ್ಟ್ಜೆ ₹6.50 ಕೋಟಿ ಕೆಕೆಆರ್
ಡೆವೊನ್ ಕಾನ್ವೇ ₹6.25 ಕೋಟಿ ಸಿಎಸ್ ಕೆ
ಹೀಗೆ 30 ಲಕ್ಷದ ಆಟಗಾರರಿಂದ ಹಿಡ್ದು 23 ಕೋಟಿರೂಪಾಯಿ ಸಂಭಾವನೆ ಪಡೀತಿದ್ದ ಆಟಗಾರರೂ ಕೂಡ ಈ ಬಾರಿ ಮಿನಿ ಆಕ್ಷನ್ನಲ್ಲಿದ್ದಾರೆ. ಬಟ್ ಈಗ ಹೇಳಿದಂತ ದುಬಾರಿ ಆಟಗಾರರೆಲ್ಲಾ ಕಳಪೆ ಪ್ರದರ್ಶನದಿಂದಾಗಿ ಹೊರ ಬಿದ್ದಿದ್ದಾರೆ. ಸೋ ಅವ್ರ ಫಾರ್ಮ್ ನೋಡಿದ್ರೆ ಕಳೆದ ಸೀಸನ್ನಲ್ಲಿ ಪಡೀತಿದ್ದ ಹಣ ಮಿನಿ ಆಕ್ಷನ್ನಲ್ಲಿ ಸಿಗೋದು ಡೌಟಿದೆ.

ನೋಡಿರಿ

