ಬಿಸಾಕಬೇಕಿದ್ದ ಪೇಂಟಿಂಗ್ ಬೆಲೆ ₹208 ಕೋಟಿ – ಕಸ ಅಂದುಕೊಂಡ ಚಿತ್ರ ಅದೃಷ್ಟವನ್ನೇ ಬದಲಿಸಿತು!
ಹಳೆ ಮನೆ ಕ್ಲೀನ್ ಮಾಡುವಾಗ ಸಿಕ್ಕಂತಹ ಪೇಂಟಿಂಗ್ ವೊಂದು ಮಹಿಳೆಯ ಅದೃಷ್ಟವನ್ನೇ ಬದಲಾಯಿಸಿದೆ. ಅಡುಗೆ ಮನೆ ಬಳಿ ಹಳೆ ಪೇಂಟಿಂಗ್ ಒಂದು ಸಿಕ್ಕಿದೆ. ಮೊದಲು ಮಹಿಳೆ ಇದನ್ನು ಮಾಮೂಲಿ ಪೇಂಟಿಂಗ್ ಎಂದುಕೊಂಡು ಕಸಕ್ಕೆ ಎಸೆಯಲು ಯೋಜಿಸಿದ್ದಾಳೆ. ನಂತ್ರ ಪೇಂಟಿಂಗ್ ಮಹತ್ವ ಗೊತ್ತಾಗಿದೆ. ಇದು ಸಾಮಾನ್ಯದಲ್ಲ ಎಂಬ ವಿಷ್ಯ ತಿಳಿದಿದೆ.
ಇದನ್ನೂ ಓದಿ : ಪವರ್ ಬ್ಯಾಂಕ್ ನಲ್ಲಿ ಫೋನ್ ಚಾರ್ಜ್ ಮಾಡ್ತೀರಾ? – ಸ್ಮಾರ್ಟ್ ಫೋನ್ ಬ್ಯಾಟರಿ ಹಾಳಾಗುತ್ತೆ ಹುಷಾರ್!
ಫ್ರಾನ್ಸ್ ನಲ್ಲಿ ಮಹಿಳೆಯೊಬ್ಬರು ತಮ್ಮ ಮನೆ ಕ್ಲೀನ್ ಮಾಡುವಾಗ ಹಳೆ ಪೇಂಟಿಂಗ್ ವೊಂದು ಸಿಕ್ಕಿದೆ. ಇದು ಯಾವ್ದೋ ಹಳೇ ಚಿತ್ರ ಕಸಕ್ಕೆ ಎಸೆಯೋಣ ಅಂದುಕೊಂಡಿದ್ದಾರೆ. ಬಳಿಕ ಅಕ್ಕ ಪಕ್ಕದ ಮನೆಯವರಿಗೆ ತೋರಿಸಿದಾಗ ಆ ಚಿತ್ರದ ಮಹತ್ವ ಗೊತ್ತಾಗಿದೆ. ಯಾಕಂದ್ರೆ ಆ ಪೇಂಟಿಂಗ್ ನ ಬೆಲೆ ಒಂದಲ್ಲ ಎರಡಲ್ಲ ಬರೋಬ್ಬರಿ 208 ಕೋಟಿ ರೂಪಾಯಿ. ಈ ವರ್ಣಚಿತ್ರದ ಹೆಸರು ಕ್ರೈಸ್ಟ್ ಮೋಕ್ಡ್. ಇದನ್ನು ಇಟಾಲಿಯನ್ನ ಪ್ರಸಿದ್ಧ ವರ್ಣಚಿತ್ರಕಾರ ಸಿಮಾಬು ರಚಿಸಿದ್ದರು. 13ನೇ ಶತಮಾನದ ಚಿತ್ರಕಲೆಯಾಗಿದ್ದು, ಫ್ರೆಂಚ್ ಸರ್ಕಾರ ಇದನ್ನು ರಾಷ್ಟ್ರೀಯ ಪರಂಪರೆ ಎಂದು ಘೋಷಿಸಿದೆ. ಇತಿಹಾಸ ಸಾರುವ ಪೇಂಟಿಂಗ್ ಆಗಿರೋದ್ರಿಂದ ಈ ವರ್ಣಚಿತ್ರವನ್ನು ಫ್ರಾನ್ಸ್‌ನ ಪ್ರಸಿದ್ಧ ಲೌವ್ರೆ ಮ್ಯೂಸಿಯಂನಲ್ಲಿ ಇಡಲು ಫ್ರಾನ್ಸ್ ಸರ್ಕಾರ ಮುಂದಾಗಿದೆ. ಅಲ್ಲದೆ ಈ ಪೇಂಟಿಂಗ್ ಅನ್ನು 2025ರ ವಸಂತ ಋತುವಿನಲ್ಲಿ ನಡೆಯುವ ಪ್ರದರ್ಶನದಲ್ಲಿ ಇಡಲು ತೀರ್ಮಾನಿಸಲಾಗಿದೆ. ಕಸದ ಬುಟ್ಟಿ ಸೇರಬೇಕಿದ್ದ ಪೇಂಟಿಂಗ್ ಈಗ ವಿಶ್ವದ ಗಮನ ಸೆಳೆಯುತ್ತಿರೋದು ನಿಜಕ್ಕೂ ಅಚ್ಚರಿ.