ಕತ್ತೆ ಹಾಲಿಗಿಂತಲೂ ಬಲು ದುಬಾರಿ ಇಲಿ ಹಾಲು! – ಒಂದು ಲೀಟರ್‌ ಹಾಲಿನ ಬೆಲೆ ಎಷ್ಟು ಗೊತ್ತಾ?

ಕತ್ತೆ ಹಾಲಿಗಿಂತಲೂ ಬಲು ದುಬಾರಿ ಇಲಿ ಹಾಲು! – ಒಂದು ಲೀಟರ್‌ ಹಾಲಿನ ಬೆಲೆ ಎಷ್ಟು ಗೊತ್ತಾ?

ಹಾಲು ಆರೋಗ್ಯಕ್ಕೆ ಒಳ್ಳೆಯದು. ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೊಟೀನ್, ಮೆಗ್ನೀಸಿಯಮ್, ವಿಟಮಿನ್ ಎ, ಡಿ, ಇ ಇತ್ಯಾದಿ ಪೋಷಕಾಂಶಗಳು ಹೇರಳವಾಗಿದೆ. ನಿಯಮಿತವಾಗಿ ಹಾಲಿನ ಸೇವನೆ ಮೂಳೆಗಳು ಮತ್ತು ಹಲ್ಲುಗಳು ಗಟ್ಟಿಯಾಗಲು ಸಹಾಯ ಮಾಡುತ್ತದೆ. ಹೀಗಾಗಿ ಅನೇಕರು ಪ್ರತಿದಿನ ಹಾಲು ಕುಡಿಯುತ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಹಾಲಿನ ಪ್ಯಾಕೆಟ್‌ ಲಭ್ಯವಿರುತ್ತದೆ. ಹಸುವಿನ ಹಾಲು, ಕತ್ತೆ ಹಾಲು, ಮೇಕೆ ಹಾಲು, ಸೋಯಾ ಹಾಲು ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ ಕತ್ತೆ ಹಾಲು ಆರೋಗ್ಯಕ್ಕೆ ತುಂಬಾ ಉತ್ತಮ ಎಂದು ಹೇಳಲಾಗುತ್ತದೆ. ಹೀಗಾಗಿ ಕತ್ತೆ ಹಾಲು ಬಲು ದುಬಾರಿ ಎಂದು ಹೇಳಲಾಗುತ್ತಿತ್ತು. ಆದರೆ ಕತ್ತೆ ಹಾಲಿಗಿಂತಲೂ ಇಲಿಯ ಹಾಲು ದುಬಾರಿಯಂತೆ!

ಅಚ್ಚರಿಯಾದ್ರೂ ಸತ್ಯ.. ಇಲಿ ಹಾಲು ಕತ್ತೆ ಹಾಲಿಗಿಂತಲೂ ಬಲು ದುಬಾರಿ. ಇಲಿ ಹಾಲನ್ನು ಪಡೆಯುವುದು ಸುಲಭವಲ್ಲ. ಒಂದು ಇಲಿಯಿಂದ ಸ್ವಲ್ಪವೇ ಸ್ವಲ್ಪ ಹಾಲು ಪಡೆಯಲು ಸುಮಾರು 30 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ. 1 ಲೀಟರ್ ಹಾಲು ಪಡೆಯಲು ಬರೋಬ್ಬರಿ ನಾಲ್ಕು ಸಾವಿರ ಇಲಿಗಳು ಬೇಕಾಗುತ್ತವೆ. ಹೀಗಾಗಿಯೇ ಇಲಿಗಳ ಹಾಲು ಬಲು ದುಬಾರಿಯಾಗಿದೆ.

ಇದನ್ನೂ ಓದಿ: ವಿಶ್ವದಲ್ಲೇ ದಾಖಲೆ ಮೊತ್ತಕ್ಕೆ ಬೃಹತ್ ಗಾತ್ರದ ಹಸು ಸೇಲ್ – ಹರಾಜಿನಲ್ಲಿ ಬರೋಬ್ಬರಿ ₹35 ಕೋಟಿಗೆ ಮಾರಾಟ

1 ಲೀಟರ್‌ ಇಲಿ ಹಾಲಿನ ಬೆಲೆ ಎಷ್ಟು?

ಸಾಮಾನ್ಯವಾಗಿ ಒಂದು ಲೀಟರ್‌ ಹಸುವಿನ ಹಾಲಿನ ಬೆಲೆ 40 ರಿಂದ 50 ರೂಪಾಯಿ ಇರುತ್ತದೆ. ಇನ್ನು ಕತ್ತೆ ಹಾಲಿನ ಬೆಲೆ ಲೀಟರ್‌ ಗೆ 4 ರಿಂದ 5 ಸಾವಿರ ರೂಪಾಯಿ ಇರುತ್ತದೆ. ಆದ್ರೆ ಇಲಿ ಹಾಲಿನ ಬೆಲೆ ಕೇಳಿದ್ರೆ ನೀವು ಶಾಕ್‌ ಆಗೋದು ಪಕ್ಕಾ.. 1 ಲೀಟರ್ ಇಲಿ ಹಾಲಿನ ಮೌಲ್ಯ 23 ಸಾವಿರ ಯುರೋಗಳು. ಅಂದರೆ ಬರೋಬ್ಬರಿ 18 ಲಕ್ಷ ರೂಪಾಯಿ.

ಇಲಿ ಹಾಲನ್ನು ಯಾವುದಕ್ಕೆ ಬಳಸಲಾಗುತ್ತದೆ?

1 ಲೀಟರ್ ಇಲಿ ಹಾಲು ಪಡೆಯಲು ಬರೋಬ್ಬರಿ ನಾಲ್ಕು ಸಾವಿರ ಇಲಿಗಳು ಬೇಕಾಗುತ್ತವೆ. ಹೀಗಾಗಿ ಬಲು ದುಬಾರಿಯಾಗಿದೆ. ಇಲಿ ಹಾಲನ್ನು ಸಂಶೋಧನೆಯ ಸಾಧನವಾಗಿ ಬಳಸಲಾಗುತ್ತದೆ. ಮಲೇರಿಯಾ ಬ್ಯಾಕ್ಟೀರಿಯಾವನ್ನು ನಿರ್ಮೂಲನೆ ಮಾಡುವ ಔಷಧಿ, ವಸ್ತುಗಳನ್ನು ತಯಾರಿಸಲು ಇಲಿ ಹಾಲನ್ನು ಬಳಸಲಾಗುತ್ತಂತೆ.

ಸಂಶೋಧನೆಗೆ ಹಸುವಿನ ಹಾಲು ಬದಲು ಇಲಿ ಹಾಲನ್ನು ಏಕೆ ಬಳಸುತ್ತಾರೆ?

ಸಂಶೋಧಕರ ನೆಚ್ಚಿನ ಪ್ರಾಣಿ ಎಂದರೆ ಇಲಿ ಅನ್ನೋದು ಗೊತ್ತೇ ಇದೆ. ಏಕೆಂದರೆ ಇಲಿಗಳ ಡಿಎನ್ಎ (DNA) ಬಗ್ಗೆ ತುಂಬಾ ಕಡಿಮೆ ತಿಳಿದಿದೆ, ಇತರ ಯಾವುದೇ ಪ್ರಾಣಿಗಳ ಡಿಎನ್ಎಗಿಂತ ಹೆಚ್ಚು ಎಫೆಕ್ಟಿವ್. ಇದು ಮನುಷ್ಯನ ದೇಹಕ್ಕೆ ರಿಲೇಟ್ ಆಗಿರುತ್ತದೆ. ಆದ್ದರಿಂದ ಪ್ರಯೋಗದ ಫಲಿತಾಂಶಗಳನ್ನು ವಿಶ್ಲೇಷಿಸುವುದು ಸುಲಭವಾಗುತ್ತದೆ. ಎಲ್ಲಾ ಪ್ರಯೋಗಗಳಿಗೆ ಸಾವಿರಾರು ಪ್ರಾಣಿಗಳು ಬೇಕಾಗುತ್ತವೆ. ಏಕೆಂದರೆ ಸಾವಿರಾರು ಹಸುಗಳಿಗಿಂತ ಸಾವಿರಾರು ಇಲಿಗಳನ್ನು ನಿರ್ವಹಿಸುವುದು ಹೆಚ್ಚು ಪ್ರಾಯೋಗಿಕ.

ಹೆಚ್ಚು ಹಾಲು ಉತ್ಪಾದಿಸುವ ಪ್ರಾಣಿ ಯಾವುದು?

ಒಂದು ಹಸು ಒಂದು ವರ್ಷದಲ್ಲಿ ಸುಮಾರು 10 ಸಾವಿರ ಲೀಟರ್ ಹಾಲನ್ನು ಉತ್ಪಾದಿಸಬಹುದು. ಇದು ತೂಕಕ್ಕಿಂತ 7 ಪಟ್ಟು ಹೆಚ್ಚು. ಮೇಕೆ ಹಾಲು ವರ್ಷಕ್ಕೆ ಅವುಗಳ ತೂಕದ 12 ಪಟ್ಟು ಉತ್ಪಾದಿಸುತ್ತದೆ. ಆದರೆ ನೀಲಿ ತಿಮಿಂಗಿಲವು  ಇದುವರೆಗಿನ ಎಂದೂ ಮುರಿಯದ ದಾಖಲೆ ನಿರ್ಮಿಸಿದೆ. ಒಂದು ದಿನದಲ್ಲಿ ನೀಲಿ ತಿಮಿಂಗಿಲವು 600 ಲೀಟರ್ ಹಾಲನ್ನು ಉತ್ಪಾದಿಸುತ್ತದೆ ಅಂದರೆ ನೀವು ನಂಬಲೇಬೇಕು. ಈ ಹಾಲು ತುಂಬಾ ಕೊಬ್ಬಿನಿಂದ ಕೂಡಿರುತ್ತದೆ. ಆದ್ದರಿಂದ ಮರಿ ತಿಮಿಂಗಿಲವು ದಿನಕ್ಕೆ 100 ಕೆಜಿ ತೂಕ ಹೆಚ್ಚಿಸಲು ಸಾಧ್ಯ.

Shwetha M