ನಿಮ್ಮ ಮನೆಯಲ್ಲಿ ಸೊಳ್ಳೆ ಕಾಟ ಇದ್ಯಾ? – ನಿಂಬೆ ಹಣ್ಣು, ಕರ್ಪೂರವೇ ಸೊಳ್ಳೆಗೆ ರಾಮಬಾಣ

ನಿಮ್ಮ ಮನೆಯಲ್ಲಿ ಸೊಳ್ಳೆ ಕಾಟ ಇದ್ಯಾ? –  ನಿಂಬೆ ಹಣ್ಣು, ಕರ್ಪೂರವೇ ಸೊಳ್ಳೆಗೆ ರಾಮಬಾಣ

ಜನರಿಗೆ ಯಾವ್ ಕಾಟ ತಪ್ಪಿದ್ರೂ ಸುಳ್ಳೆ ಕಾಟ ತಪ್ಪಲ್ಲ. ಏನೇ ಮಾಡಿದ್ರೂ ಸೊಳ್ಳೆ ಕಾಟ ಕಮ್ಮಿಯಾಗಲ್ಲ. ಪ್ರತಿಯೊಬ್ಬರ ಮನೆಯಲ್ಲೂ ಸೊಳ್ಳೆಗಳು ಇರುತ್ತೆ. ಅಂಗಡಿಯಲ್ಲಿ ಸಿಗೋ ಎಷ್ಟೇ ವಸ್ತು ತಂದ್ರೂ ಸೊಳ್ಳೆ ಕಾಟ ಕಮ್ಮಿಯಾಗಲ್ಲ.. ಆದ್ರೆ ಸೊಳ್ಳೆಗಳನ್ನು ಓಡಿಸಲು ನೀವು ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಬದಲು   ನೈಸರ್ಗಿಕ ಪರಿಹಾರ ಮಾಡಿದರೆ ಸೊಳ್ಳೆಗಳನ್ನು ಸುಲಭವಾಗಿ ಓಡಿಸಬಹುದು.

ನಿಂಬೆ ಹಣ್ಣುಕ್ಕೆ ಲವಂಗ ಚುಚ್ಚಿ 

ಸೊಳ್ಳೆಗಳು ಮನೆ ಸೇರದಂತೆ ತಡೆಯಲು ನೀವು ನಿಂಬೆ ಹಣ್ಣನ್ನು ಬಳಸಬಹುದು. ನಿಂಬೆ ಹಣ್ಣಿನ ಸಹಾಯದಿಂದ ಸೊಳ್ಳೆಗಳನ್ನು ಸುಲಭವಾಗಿ ಹೋಗಲಾಡಿಸಬಹುದಾಗಿದೆ.  ನಿಂಬೆ ತುಂಡು ತೆಗೆದುಕೊಂಡು ಅದರಲ್ಲಿ 5 – 6  ಲವಂಗವನ್ನು ಚುಚ್ಚಿ. ಈ ನಿಂಬೆಹಣ್ಣನ್ನು ಮನೆಯ ಮೂಲೆಯಲ್ಲಿ ಮತ್ತು ಮನೆಯ ಬಾಗಿಲ ಬಳಿ ಇರಿಸಿ. ಇದರ ವಾಸನೆಯಿಂದಾಗಿ ಸೊಳ್ಳೆಗಳ ಓಡಾಟ ಕಡಿಮೆಯಾಗುತ್ತದೆ. ಸೊಳ್ಳೆಗಳು ನಿಮ್ಮ ಮನೆ ಸೇರುವುದಿಲ್ಲ.

ಕರ್ಪೂರವನ್ನು ನೀರಿನಲ್ಲಿ ಹಾಕಿ ಕೋಣೆಯಲ್ಲಿ ಇರಿಸಿ

ಕರ್ಪೂರದ ಬಲವಾದ ವಾಸನೆಯು ಸೊಳ್ಳೆಗಳನ್ನು ದೂರವಿಡುವಲ್ಲಿ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಕರ್ಪೂರವನ್ನು ನೀರಿನಲ್ಲಿ ಹಾಕಿ ಕೋಣೆಯಲ್ಲಿ ಇರಿಸಿ. ಅಥವಾ ಕರ್ಪೂರವನ್ನು ಸುಟ್ಟು ಅದರ ಹೊಗೆಯನ್ನು ಕೋಣೆಯಲ್ಲಿ ಹರಡಲು ಬಿಡಿ. ಪ್ರತಿ ರಾತ್ರಿ ಮಲಗುವ ಮೊದಲು ಇದನ್ನು ಮಾಡಿ. ಇದು ಸೊಳ್ಳೆಗಳು ಮನೆಯೊಳಗೆ ಬರದಂತೆ ತಡೆಯುತ್ತದೆ.

ಸ್ವಚ್ಛತೆ ಕಾಪಾಡಿ

ಮನೆಯ ಸುತ್ತಲೂ ನೀರು ಸಂಗ್ರಹವಾಗಲು ಬಿಡಬೇಡಿ. ಮನೆಯ ಎಲ್ಲಾ ಕಿಟಕಿಗಳು ಮತ್ತು ಬಾಗಿಲುಗಳನ್ನು ಸಂಜೆಯಾಗುತ್ತಿದ್ದಂತೆ ಮುಚ್ಚಿಡಿ ಅಥವಾ ಜಾಲರಿಯನ್ನು ಅಳವಡಿಸಿ. ಮನೆಯಲ್ಲಿ ಬೇವಿನ ಎಲೆಗಳನ್ನು ಸುಟ್ಟುಹಾಕಿ. ಶುಚಿತ್ವವನ್ನು ನೋಡಿಕೊಳ್ಳಿ. ಸ್ನಾನಗೃಹದಲ್ಲಿ ನಿಯಮಿತವಾಗಿ ಫಿನಾಯಿಲ್ ಅನ್ನು ಸುರಿಯಿರಿ. ನೀವು ನಾವು ಹೇಳಿರೋ ಕ್ರಮಗಳು ಅನುಸರಿಸಿದ್ರೆ ಸೊಳ್ಳೆಯಿಂದ ಮುಕ್ತಿ ಪಡೆಯಬಹುದು.

Kishor KV