ಮೊರಾಕೋ ಭೂಕಂಪದ ಭೀಕರತೆಗೆ ನಿಲ್ಲದ ಮಾರಣ ಹೋಮ – ಸಾವಿನ ಸಂಖ್ಯೆ 2,862ಕ್ಕೆ ಏರಿಕೆ!

ಮೊರಾಕೋ ಭೂಕಂಪದ ಭೀಕರತೆಗೆ ನಿಲ್ಲದ ಮಾರಣ ಹೋಮ – ಸಾವಿನ ಸಂಖ್ಯೆ 2,862ಕ್ಕೆ ಏರಿಕೆ!

ಉತ್ತರ ಆಫ್ರಿಕಾದ ಮೊರಾಕೋದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಲೇ ಇದೆ. ಭೂಕಂಪಕ್ಕೆ ಇದುವರೆಗೆ ಬಲಿಯಾದವರ ಸಂಖ್ಯೆ 2,862ಕ್ಕೆ ಏರಿಕೆಯಾಗಿದ್ದು, ಗಾಯಗೊಂಡವರ ಸಂಖ್ಯೆ 3,500ರ ಗಡಿ ದಾಟಿದೆ ಎಂದು ಮೊರಾಕೋ ಗೃಹ ಸಚಿವಾಲಯ ತಿಳಿಸಿದೆ.

ಕಳೆದ ಶುಕ್ರವಾರ 6.8 ತೀವ್ರತೆಯ ಭೂಕಂಪ ಸಂಭವಿಸಿ ಅಪಾರ ಸಾವು-ನೋವಾಗಿತ್ತು. ಬದುಕುಳಿದವರ ಪತ್ತೆಗಾಗಿ ದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದೀಗ ಸಾವಿನ ಸಂಖ್ಯೆ 2,862 ಏರಿಕೆಯಾಗಿದ್ದು, 3,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮರ್ರಾಕೇಶ್‌ನಿಂದ 60 ಕಿ.ಮೀ. ದೂರದಲ್ಲಿರುವ ತಾಫೆಘಗ್ಟೆ ಎಂಬ ಪರ್ವತ ಹಳ್ಳಿಯಲ್ಲಿನ ಪ್ರತಿ ಕಟ್ಟಡವೂ ಭೂಕಂಪದಿಂದಾಗಿ ನಾಶವಾಗಿದೆ.

ಇದನ್ನೂ ಓದಿ: ಚಂಡಮಾರುತದ ಅಬ್ಬರಕ್ಕೆ ನಲುಗಿದ ಲಿಬಿಯಾ – ಬರೋಬ್ಬರಿ 2000 ಸಾವಿರ ಮಂದಿ ಸಾವು!

ತಲತ್ ನ್ಯಾಕೋಬ್‌ನ ವಿಪತ್ತು ಪೀಡಿತ ಪ್ರದೇಶದಲ್ಲಿ ಸುಮಾರು 12 ಆಂಬ್ಯುಲೆನ್ಸ್‌ಗಳು ಮತ್ತು ಸೈನ್ಯ ಮತ್ತು ಪೊಲೀಸರನ್ನು ನಿಯೋಜಿಸಲಾಗಿದ್ದು, ಸುಮಾರು 100 ಮೊರೊಕನ್ ರಕ್ಷಕರು ಕುಸಿದ ಕಟ್ಟಡಗಳಲ್ಲಿ ಹುಡುಕಾಟ ಮುಂದುವರಿಸಿದ್ದಾರೆ. ಅಗ್ನಿಶಾಮಕ ದಳವೂ ಕೂಡಾ ಸಾಥ್ ನೀಡಿದೆ.

ಮೊರಾಕೋ ಭೂಕಂಪನದಿಂದ 3 ಲಕ್ಷ ಜನ ನಿರಾಶ್ರಿತರಾಗಿದ್ದಾರೆಂದು ವಿಶ್ವಸಂಸ್ಥೆ ಅಂದಾಜಿಸಿದೆ. ಸದ್ಯಕ್ಕೆ ನಿರಾಶ್ರಿತರಿಗೆ ತಾತ್ಕಾಲಿಕ ಶಿಬಿರಗಳಲ್ಲಿಆಶ್ರಯ ಕಲ್ಪಿಸಲಾಗಿದೆ. ಭಾರತ, ಅಮೆರಿಕ, ಕತಾರ್‌, ಫ್ರಾನ್ಸ್‌, ಟರ್ಕಿ, ಜರ್ಮನಿ ಸೇರಿದಂತೆ ಅನೇಕ ರಾಷ್ಟ್ರಗಳು ನೆರವು ನೀಡುವ ಘೋಷಣೆ ಮಾಡಿವೆ.

suddiyaana