ಬೆಳಗ್ಗೆ Or ಸಂಜೆ.. ಯಾವ ಟೈಮ್‌ನಲ್ಲಿ ವಾಕಿಂಗ್‌ ಮಾಡಿದ್ರೆ ಆರೋಗ್ಯಕ್ಕೆ ಹೆಚ್ಚು ಲಾಭ?

ಬೆಳಗ್ಗೆ Or ಸಂಜೆ.. ಯಾವ ಟೈಮ್‌ನಲ್ಲಿ ವಾಕಿಂಗ್‌ ಮಾಡಿದ್ರೆ ಆರೋಗ್ಯಕ್ಕೆ ಹೆಚ್ಚು ಲಾಭ?

ನಾವು ಆರೋಗ್ಯವಾಗಿರಬೇಕು ಅಂದ್ರೆ ಉತ್ತಮ ಆಹಾರ ಸೇವನೆ ಜೊತೆಗೆ ದೈಹಿಕ ಚಟುವಟಿಕೆಯೂ ಮುಖ್ಯ. ಫಿಟ್‌ನೆಸ್‌ ಕಾಪಾಡಿಕೊಳ್ಬೇಕು ಅಂತಾ ಕೆಲವರು ಜಿಮ್‌ಗೆ ಹೋಗಿ ದೇಹ ದಂಡಿಸ್ತಾರೆ. ಇನ್ನೂ ಕೆಲವರು ಬೆಳ್ಳಗೆ ಹಾಗೂ ಸಂಜೆ ವಾಕಿಂಗ್‌ ಮಾಡ್ತಾರೆ. ಹಾಗಾದ್ರೆ ಯಾವ ಸಮಯದಲ್ಲಿ ವಾಕಿಂಗ್‌ ಮಾಡಿದ್ರೆ ಒಳ್ಳೆದು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಹೃದಯ ಸಂಬಂಧಿತ ಕಾಯಿಲೆ ಇದ್ದವರು ತುಪ್ಪ ಸೇವಿಸಬಹುದಾ? – ವೈದ್ಯರು ಹೇಳೋದೇನು?

ತೂಕ ಇಳಿಸಿಕೊಳ್ಳಬೇಕು.. ಆರೋಗ್ಯವಾಗಿರ್ಬೇಕು ಅಂತ ಅನೇಕರು ವಾಕಿಂಗ್‌ ಮಾಡ್ತಾರೆ. ಈ ವಾಕಿಂಗ್‌ ಅತ್ಯಂತ ಸರಳ ಮತ್ತು ಪರಿಣಾಮಕಾರಿ ವ್ಯಾಯಾಮವಾಗಿದೆ. ಪ್ರತಿನಿತ್ಯ ವಾಕಿಂಗ್‌ ಮಾಡುವುದರಿಂದ ಮೂಳೆಗಳು ಬಲಗೊಳ್ಳುತ್ತವೆ, ಶ್ವಾಸಕೋಶ, ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ, ಅಲ್ಲದೆ ಒತ್ತಡ, ಆತಂಕ ಕಡಿಮೆಯಾಗಿ ಮಾನಸಿಕ ಆರೋಗ್ಯವೂ ವೃದ್ಧಿಸುತ್ತದೆ. ಆದರೆ ಸಮಯದಲ್ಲಿ ವಾಕಿಂಗ್‌ ಮಾಡುವುದು ಹೆಚ್ಚು ಪರಿಣಾಮಕಾರಿ ಅನ್ನೋದು ಅನೇಕರಿಗೆ ಗೊತ್ತಿಲ್ಲ.. ಯಾವ ಸಮಯದಲ್ಲಿ ವಾಕಿಂಗ್‌ ಮಾಡಿದ್ರೆ ಉತ್ತಮ? ವಾಕಿಂಗ್‌ ಮಾಡೋದ್ರಿಂದ ಏನೆಲ್ಲಾ ಪ್ರಯೋಜನ ಇದೆ ಅನ್ನೋ ಮಾಹಿತಿ ಇಲ್ಲಿದೆ.

ತಜ್ಞರು ಪ್ರಕಾರ, ಯಾವುದೇ ಸಮಯದಲ್ಲಿ ವಾಕಿಂಗ್‌ ಮಾಡಿದರೂ, ಅದು ಅಪ್ರಯೋಜನಕಾರಿ.  ಅದರಲ್ಲೂ ಬೆಳಗ್ಗಿನ ವಾಕಿಂಗ್‌ ಹೆಚ್ಚು ಪ್ರಯೋಜನಕಾರಿಯಂತೆ. ಹೌದು ಬೆಳಗ್ಗಿನ ವಾಕಿಂಗ್‌ ದೇಹ ಮತ್ತು ಮನಸ್ಸು ಎರಡನ್ನೂ ಉಲ್ಲಾಸಗೊಳಿಸುವ ಒಂದು ರೀತಿಯ ಉತ್ತೇಜಕವಾಗಿದೆ. ಬೆಳಗಿನ ವಾಕಿಂಗ್‌ ಸಮಯದಲ್ಲಿ ಬೆಳಗಿನ ಸೂರ್ಯನ ಬೆಳಕಿನಿಂದ ವಿಟಮಿನ್-ಡಿ ಸಿಗುತ್ತದೆ, ಸೂರ್ಯನಿಂದ ಲಭಿಸುವ ಈ ನೈಸರ್ಗಿಕ ವಿಟಮಿನ್‌ ಡಿ ಮೂಳೆಗಳನ್ನು ಆರೋಗ್ಯವಾಗಿಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಪ್ರಯೋಜನಕಾರಿಯಾಗಿದೆ. ಅದರಲ್ಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಡೆಯುವುದು ತುಂಬಾನೇ ಒಳ್ಳೆಯದು. ಇದು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಲು, ಕೊಬ್ಬನ್ನು ಪರಿಣಾಮಕಾರಿಯಾಗಿ ಸುಡಲು ಹಾಗೂ ತೂಕವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.

ಸಂಜೆ ವಾಕಿಂಗ್‌ ಮಾಡುವುದರ ಏನೆಲ್ಲಾ ಪ್ರಯೋಜವಿದೆ?

ಸಂಜೆಯ ವಾಕಿಂಗ್‌ ಕೂಡ ಪ್ರಯೋಜನಕಾರಿಯಾಗಿದೆ. ಸಂಜೆ ವಾಕಿಂಗ್‌ ಮಾಡುವುದರಿಂದ ದೇಹದಲ್ಲಿನ ಎಂಡಾರ್ಫಿನ್‌ ಹಾರ್ಮೋನ್‌ ಬಿಡುಗಡೆಯಾಗುತ್ತದೆ. ಇದು ಒತ್ತಡವನ್ನು ನಿವಾರಿಸುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ. ಕೆಲಸದಿಂದಾಗಿ ಒತ್ತಡಕ್ಕೆ ಒಳಗಾದವರು, ಪ್ರನಿತ್ಯ ಸಂಜೆ ವಾಕಿಂಗ್ ಮಾಡುವುದು ತುಂಬಾನೇ ಒಳ್ಳೆಯದು. ಇನ್ನೂ ಊಟ ಮಾಡಿದ ನಂತರ ವಾಕಿಂಗ್‌ ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮಕೊಳ್ಳುತ್ತದೆ. ಮತ್ತು ಗ್ಯಾಸ್‌, ಹೊಟ್ಟೆಯುಬ್ಬರ ಸಮಸ್ಯೆಯಿಂದಲೂ ಮುಕ್ತಿ ಪಡೆಯಬಹುದು.

ಸಂಜೆಯ ವಾಕಿಂಗ್‌  ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತವೆ. ಊಟದ ನಂತರ ನಡೆಯುವುದು ಮಧುಮೇಹ ರೋಗಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಬೆಳಗ್ಗೆ ಮತ್ತು ಸಂಜೆಯ ವಾಕಿಂಗ್ ಎರಡೂ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪ್ರತಿದಿನ ಕನಿಷ್ಠ 10 ಸಾವಿರ ಹೆಜ್ಜೆಗಳು ನಡೆಯಬೇಕು ಎಂದು ಅಧ್ಯಯನವೊಂದು ಹೇಳಿದೆ.

ನೀವು ಪ್ರತಿದಿನ 10,000 ಹೆಜ್ಜೆಗಳು ನಡೆಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಲಭಿಸುತ್ತದೆ. ಅನೇಕ ಅಧ್ಯಯನಗಳೂ ಈ ಅಂಶವನ್ನು ದೃಢಪಡಿಸಿವೆ. ತಜ್ಞರ ಪ್ರಕಾರ ವಾಕಿಂಗ್ ವ್ಯಾಯಾಮದ ಸರಳ ಮತ್ತು ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ ಎಂದು ಹೇಳುತ್ತಾರೆ. ವಾಕಿಂಗ್ ಹೃದಯದ ಆರೋಗ್ಯ, ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಮತ್ತು ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಇದು ಮಾತ್ರವಲ್ಲದೆ, ಒತ್ತಡ-ಆತಂಕವನ್ನು ಕಡಿಮೆ ಮಾಡಲು, ಮನಸ್ಥಿತಿ ಮತ್ತು ಅರಿವಿನ ಕಾರ್ಯಗಳನ್ನು ಸುಧಾರಿಸಲು ಸಹ ಇದು ಸಹಾಯಕವಾಗಿದೆ.

Shwetha M

Leave a Reply

Your email address will not be published. Required fields are marked *